ಸ್ಕಾಲರ್ಶೀಪ್ ಆಪ್ಟಿಟ್ಯೂಡ್ ಅವಾರ್ಡ ಪರೀಕ್ಷೆ
ತಾಳಿಕೋಟೆ18:ಸಮೀಪದ ಮಿಣಜಗಿ ಕ್ರಾಸ್ದಲ್ಲಿ ನಡೆಯುತ್ತಿರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಬೆಸ್ಟ್ ವಿಜ್ಞಾನ ಪಿಯು ಕಾಲೇಜು (ಎಕ್ಸೆಲ್ಅಕಾಡೆಮಿ)ಯಲ್ಲಿ ಸ್ಕಾಲರ್ಶಿಪ್ ಆಪ್ಟಿಟ್ಯೂಡ್ ಅವಾರ್ಡ ಪರೀಕ್ಷೆ ಏ.19ರಂದು ಬೆಳೆಗ್ಗೆ 10:30ರಿಂದ11:30ರವರೆಗೆ ನಡೆಯಲಿದೆ.
ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಸಿಬಿಎಸ್ಸಿ ಸಿಲೇಬಸ್ನ 10ನೇ ತರಗತಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷೆಗೆ 60 ಅಂಕಗಳನ್ನು ನಿಗದಿ ಮಾಡಿದ್ದು ಗಣಿತ(25), ವಿಜ್ಞಾನ(25), ಇಂಗ್ಲೀಷ್(10) ವಿಷಯ ಕುರಿತು ಪ್ರಶ್ನೆಗಳಿರುತ್ತವೆ. ಬೆಂಗಳೂರಿನ ಎಕ್ಸೆಲ್ ಅಕಾಡೆಮಿ ಅವರೊಂದಿಗೆ ಸಂಯೋಜನೆ ಹೊಂದಿದ್ದು ಆಂದ್ರ್ರದೇಶದ ಅನುಭವಿ ಹಾಗೂ ನುರಿತ ಪ್ರಾದ್ಯಾಪಕರು ಭೋದನೆ ಮಾಡಲಿದ್ದಾರೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ನ್ನು ತರಬೇಕು. ಹೆಸರು ನೊಂದಣಿ ಮಾಡಲು ವಿದ್ಯಾರ್ಥಿಯ ಹೆಸರು, ಶಾಲೆ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ 8088798191ಗೆ ಎಸ್.ಎಮ್.ಎಸ್ಅಥವಾ ವಾಟ್ಸಪ್ ಮಾಡಬೇಕು.
ಉಚಿತ ಪಿಯು ವಿಜ್ಞಾನ ಶಿಕ್ಷಣ : ಸಂಸ್ಥೆ ನಡೆಸುವ ಸ್ಕಾಲರ್ಶಿಪ್ ಆ್ಯಪ್ಟಿಟ್ಯುಡ್ ಅವಾರ್ಡ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗಕ್ಕೆ ಉಚಿತ ಕಾಲೇಜ ಹಾಗೂ ಹಾಸ್ಟೆಲ್ ಪ್ರವೇಶ ನೀಡಲಾಗುವದು. ಶೇ 85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾಲೇಜ್ ಶುಲ್ಕ ವಿನಾಯಿತಿ ನೀಡಲಾಗುವದು ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9900179498, 8500430987 ಮಾಹಿತಿ ಪಡೆದುಕೊಳ್ಳಬೇಕು ಎಂದು ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಮ್.ಸಜ್ಜನ ಮತ್ತು ಬೆಸ್ಟ ಪಿಯು ಕಾಲೇಜಿನ ಪ್ರಾಚಾರ್ಯ ಆದಿಶೇಖರ ರೆಡ್ಡಿ ಹೇಳಿದರು.