ವೈ ಟಿ ಹೊನ್ನತ್ತಿ ಗ್ರಾಪಂ ಅಧ್ಯಕ್ಷರಾಗಿ ಸಾವಿತ್ರವ್ವ ಆಯ್ಕೆ
ರಾಣೆಬೆನ್ನೂರು ಸೆ 9: ತಾಲೂಕಿನ ವೈ ಟಿ ಹೊನ್ನತ್ತಿ ಗ್ರಾಮ ಪಂಚಾಯತಿಗೆ ತೆರವಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸಾವಿತ್ರವ್ವ ರಣಸೂತ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಗೀತಾ ಲಮಾಣಿ ಅವರು ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ, ಮಾಜಿ ವಿಧಾನಸಭಾಧ್ಯಕ್ಷ ಕೆ ಬಿ ಕೋಳಿವಾಡ ಅವರು, ರಾಜಕೀಯ ಎಂದಿಗೂ ನಿಂತ ನೀರಲ್ಲ, ರಾಜಕೀಯ ಸದಾ ಹರಿಯುವ ಗಂಗೆ ಇದ್ದಹಾಗೆ, ಅಧಿಕಾರ ಎಂದಿಗೂ ಶಾಶ್ವತವಲ್ಲ ಅಧಿಕಾರ ಇದ್ದಾಗ ಮಾಡಿದ ಕೆಲಸ ಕಾರ್ಯಗಳು ಶಾಶ್ವತವಾಗಿ ನಿಮ್ಮನ್ನು ನೆನೆಸುವಂತೆ ಮಾಡುತ್ತದೆ ಎಂದರು. ಗ್ರಾಮೀಣ ನಾಗರಿಕರ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತಿಹಾಸದಿಂದಲೂ ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ, ಎಲ್ಲ ಯೋಜನೆಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕರ ಹಕ್ಕು, ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ಜಾತಿ ಮತ ಪಾರ್ಟಿ ಪಕ್ಷ ಪಂಗಡ ಬೇಡ ಅಭಿವೃದ್ಧಿಯ ಮೂಲಕ ಗ್ರಾಮವನ್ನು ಪ್ರಗತಿಯತ್ತ ಕೊಂಡೊಯ್ಯಬೇಕೆಂದು ಹೇಳಿದರು. ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯಿತಿ ಮೂಲಭೂತ ಸೌಲಭ್ಯ ಒದಗಿಸುವುದು ಮುಖ್ಯ, ಕುಡಿಯುವ ನೀರು, ಶೌಚಾಲಯ, ರಸ್ತೆ, ಗಟಾರ, ಬೀದಿ ದೀಪ ಇವುಗಳು ಬಹು ಅಗತ್ಯ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದಾಗ ಮಾತ್ರ, ಶಾಶ್ವತ ಹೆಸರು ಉಳಿಯುತ್ತದೆ ಎಂದರು.
ಸದಸ್ಯರಾದ ಗುಡ್ಡಪ್ಪ ಮಲ್ಲಾಡದ, ವೆಂಕಟೇಶ ದೊಡ್ಡಮನಿ, ಕಲ್ಪನಾ ಮಲ್ಲಳ್ಳಿ, ಲಕ್ಷ್ಮಣ ಲಮಾಣಿ, ಮುಖಂಡರಾದಚಂದ್ರು ಬನ್ನಿಹಟ್ಟಿ, ಶಿವರಾಜ್ ಹೊಳ್ಳೆ ಚಿಕ್ಕಣ್ಣನವರ, ಲೋಕೇಶ್ ಲಮಾಣಿ, ರಾಮಪ್ಪ ಪ ಮ್ಮಾರ, ಮಂಜುನಾಥ ಲಮಾಣಿ, ಗೋವಿಂದಪ್ಪ ಲಮಾಣಿ, ರವಿ ಮಲ್ಲಳ್ಳಿ, ತಿರುಪತಿ ಅಜ್ಜನವರ, ಸಣ್ಣ ತಮ್ಮಪ್ಪ ಬಾರ್ಕಿ, ಇಕ್ಬಾಲ್ ಸಾಬ್ ರಾಣೆಬೆನ್ನೂರು, ಗಂಗಾಧರ ಬಣಗಾರ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.