ಶಿಗ್ಗಾವ್

ಶಿಗ್ಗಾವಿ ಸಮಗ್ರ ಅಭಿವೃದ್ಧಿಗೆ ಉಳಿತಾಯ ಬಜೆಟ್

ಶಿಗ್ಗಾವಿ ಸಮಗ್ರ ಅಭಿವೃದ್ಧಿಗೆ ಉಳಿತಾಯ ಬಜೆಟ್

ಶಿಗ್ಗಾವಿ 06: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಒಳಗೊಂಡ 2021-22ನೇ ಸಾಲಿಗೆ ಶಿಗ್ಗಾವಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಗುರುವಾರ 8.65 ಲಕ್ಷ ಉಳಿತಾಯ  ಬಜೆಟ್  ಮಂಡಿಸಿದರು. 

2021-22ನೇ ಸಾಲಿನ ಆಯವ್ಯಯದಲ್ಲಿ ಅಂದಾಜು 8.65 ಲಕ್ಷ ಉಳಿತಾಯ ಬಜೆಟ್ ಮಂಡಿಸಿದ ಅದ್ಯಕ್ಷರು, ಇದರಲ್ಲಿ ಕುಡಿಯುವ ನೀರು ಸರಬರಾಜು, ಚರಂಡಿಗಳ ನಿರ್ಮಾಣ ಸೇರಿದಂತೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದಾರೆ. ಪುರಸಭೆ ಅಂದಾಜು ಎಸ್‍ಎಫ್‍ಸಿ ಮತ್ತು 15ನೇ ಹಣಕಾಸು ಯೋಜನೆ ಅನುದಾನ, ವಿಶೇಷ ಅನುದಾನ, ವೇತನ, ಸಂತೆ ಶುಲ್ಕ, ನಲ್ಮ ಯೋಜನೆ, ವಿದ್ಯುತ್, ಅಸಾಮಾನ್ಯ ಆದಾಯ, ಆಸ್ತಿ, ತೆರಿಗೆ, ಮಳಿಗೆ ಬಾಡಿಗೆ, ಖಾತಾ ಬದಲಾವಣೆ, ಘನತ್ಯಾಜ್ಯ ವಿಲೇವಾರಿ, ಬರಪರಿಹಾರ, ಕಟ್ಟಡ ಪರವಾಣಿಗೆ ಶುಲ್ಕ ಸೇರಿದಂತೆ ವಿವಿಧ ಯೋಜನೆಯಡಿ ಸುಮಾರು 17.12 ಕೋಟಿ ಅಂದಾಜು ಆದಾಯ ಬರಲಿದೆ ಎಂದು ಬಜೆಟ್‍ನಲ್ಲಿ ವಿವರಿಸಿದ್ದಾರೆ.

ಇದರಲ್ಲಿ ಕಟ್ಟಡ ನಿರ್ಮಾಣ, ವಾಹನ ಖರೀದಿ, ಕಚೇರಿ ಉಪಕರಣ, ರಸ್ತೆ, ಚರಂಡಿ, ಬೀದಿ ದೀಪ, ಸಿಡಿಗಳ ನಿರ್ಮಾಣ, ಶೇ24.10 ಯೋಜನೆ ವೆಚ್ಚ, ಶೇ 7.25 ಯೋಜನಾ ವೆಚ್ಚ, ಶೇ.5 ಯೋಜನಾ ವೆಚ್ಚ, ವೇತನ, ವಿದ್ಯುತ್, ತ್ಯಾಜ್ಯ ವಸ್ತುಗಳ ವಿಲೇವಾರಿ ಸೇರಿದಂತೆ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಖರ್ಚು ಮಾಡಿ ಅದರಲ್ಲಿ ಅಂದಾಜು 8.65 ಲಕ್ಷ ಉಳಿತಾಯ ಬಜೆಟ್ ನಮ್ಮದಾಗಿದೆ ಎಂದು ವಿವರಿಸಿದ್ದಾರೆ.

ಬಳಿಕ ನದಾಪ ಶಹಜಾನ ದಸ್ತಗೀರಸಾಬ ಅವರ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ನಿವೇಶನಗಳನ್ನು ಆಸ್ತಿ ರಜಿಸ್ಟರ್‍ಗಳಿಗೆ ದಾಖಲಿಸಿಕೊಳ್ಳುವ ಕುರಿತು ನಡೆದ ಚರ್ಚೆಯಲ್ಲಿ ಸದಸ್ಯ ದಯಾನಂದ ಅಕ್ಕಿ ಕಾನೂನು ಪ್ರಕಾರ ಸರಿಯಾಗಿದ್ದರೆ ಅನಮತಿ ನೀಡಬಹುದು ಎಂದು ಅಭಿಪ್ರಾಯಿಸಿದರು. ಪಟ್ಟಣದಲ್ಲಿ ಲೇಔಟ್ ಗಳಿಗೆ ಪರವಾನಿಗೆ ನೀಡಿ ಐದು ವರ್ಷಗಳಾಗಿವೆ. ಅವುಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಸರಿಯಾಗಿಲ್ಲದ ಲೇಔಟ್‍ಗಳಿಗೆ ಯಾವ ಕ್ರಮ ಜರುಗಿಸಲಾಗಿದೆ ಮಾಹಿತಿ ನೀಡಿ. ಮೂರನೇ ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ, ಅಖಂಡ ನಿವೇಶನ ತುಂಡು ಮಾಡಿದ್ದಿರಿ. ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಪುರಸಭೆಗೆ ಹಾನಿಯಾಗಿದೆ. ಅದಕ್ಕೆ ಪುರಸಭೆ ಹಿಂದಿನ ಅಧಿಕಾರಿ, ಸಿಬ್ಬಂದಿಗಳ ಬೇಜವಾಬ್ದಾರಿಯಾಗಿದೆ. ತಕ್ಷಣ ಪರಿಶೀಲಿಸಿ ಸರಿಪಡಿಸುವಂತೆ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ಸದಸ್ಯ ಸುಭಾಸ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು. 

ಮುಖ್ಯಾಧಿಕಾರಿ ಎಂ.ವಿ.ಹಿರೇಮಠ, ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯರಾದ ಸುಭಾಸ ಚವ್ಹಾಣ, ಪರುಶಾರಾಮ ಸೊನ್ನದ, ದಯಾನಂದ ಅಕ್ಕಿ, ಸಿದ್ದಾರ್ಥಗೌಡ ಪಾಟೀಲ, ರಮೇಶ ವನಹಳ್ಳಿ, ಶಾಂತಾಬಾಯಿ ಸುಭೇದಾರ, ಸಂಗೀತಾ ವಾಲ್ಮೀಕಿ, ಮಹಬೂಬಿ ನೀರಲಗಿ,ರೂಪಾ ಬನ್ನಿಕೊಪ್ಪ,  ರೇಖಾ ಕಂಕನವಾಡ, ಜ್ಯೋತಿ ನಡೂರ, ಗೌಸಖಾನ ಮುನಶಿ, ಸುಲೇಮಾನ ತರ್ಲಘಟ್ಟ, ಜಾಫರಖಾನ ಪಠಾಣ, ಮುಸ್ತಾಕಾಹ್ಮದ ತಹಶೀಲ್ದಾರ, ಮೈಮುನ್ನೀಸಾ ಲಕ್ಷ್ಮೇಶ್ವರ, ನಸರೀನಬಾನು ತಿಮ್ಮಾಪೂರ,  ಮಮತಾಜ ಗೋಟಗೋಡಿ, ವಸಂತಾ ಬಾಗೂರ, ಅನುರಾಧಾ ಮಾಳವಾದೆ, ಶೇಖವ್ವ ವಡ್ಡರ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. 

ನಾಲ್ಕು ದಿಕ್ಕುಗಳಲ್ಲಿ ಬೆಳೆಯತ್ತಿರುವ ಶಿಗ್ಗಾವಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಜನರ ಬೇಕುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ, ಅಕಾರಿ, ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದೇವೆ. ಈ ವರ್ಷ 8.65 ಲಕ್ಷ ಉಳಿತಾಯ ಬಜೆಟ್ ಮಂಡಿಸಿದ ಸಂತಸ ನನಗಿದೆ.

ಶ್ರೀಕಾಂತ ಬುಳ್ಳಕ್ಕನವರ 

ಅಧ್ಯಕ್ಷರು ಪುರಸಭೆ ಶಿಗ್ಗಾವಿ

ಸುದ್ದಿ ಓದಿ