ಇಂಡಿ

ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಯನ್ನು ಉಳಿಸಿ: ಪಾಟೀಲ

ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಯನ್ನು ಉಳಿಸಿ:  ಪಾಟೀಲ


ಇಂಡಿ 14: ಗ್ರಾಮೀಣ ಪ್ರದೇಶದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು ಭಾರತದ ಸಂಸ್ಕೃತಿ ಬಿಂಬಿಸುವ ಗ್ರಾಮೀಣ ಕಲೆಗಳನ್ನು ನಾವು-ನೀವೆಲ್ಲ ಬೆಂಬಲಿಸೋಣ ಎಂದು ಇಂಡಿ ತಾಲೂಕಾ ಕಜಾಪ ಅಧ್ಯಕ್ಷ ಆರ್‌.ವಿ.ಪಾಟೀಲ ಹೇಳಿದರು.  

ಭಾನುವಾರ ಪಟ್ಟಣದ ಸಾಯಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಇಂಡಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಮಹಿಳಾ ಸಾಹಿತ್ಯ ಸುಮಾಗಮ ವೇದಿಕೆ ಹಾಗೂ ಕದಳಿ ವೇದಿಕೆ ಆಶ್ರಯದಲ್ಲಿ ನಡೆದ ಜಾನಪದ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. 

ಗ್ರಾಮೀಣ ಪ್ರದೇಶದಲ್ಲಿದ್ದ ಕ್ರೀಡೆಗಳು, ಉತ್ಸವಗಳು, ಹಬ್ಬ ಹರಿದಿನಗಳು, ನೃತ್ಯಗಳನ್ನು ನೋಡುತ್ತಾ ಆಚರಣೆ ಮಾಡುತ್ತ ಹೋಗಬೇಕು. ಒಳ್ಳೆಯ ಕಲಾವಿಧರನ್ನು ಗೌರವಿಸಿ, ಸತ್ಕರಿಸುವ ಕೆಲಸವಾಗಬೇಕು ಅಂದಾಗ ಜಾನಪದ ಕಲೆಗಳು ಉಳಿಯಲು ಸಾದ್ಯ ಎಂದರು.  

ಉಪನ್ಯಾಸಕರಾಗಿ ಆಗಮಿಸಿದ ಬಿ.ಆರ್‌.ಪೋಲಿಸಪಾಟೀಲ ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕೆ ಕುರಿತು, ವಿಶ್ರಾಂತ ಪ್ರಾಚಾರ್ಯ ಶೈಲಜಾ ತೆಲ್ಲೂರ, ಕದಳಿ ವೇದಿಕೆಯ ಅಧ್ಯಕ್ಷೆ ಗಂಗುಬಾಯಿ ಗಲಗಲಿ, ನಿರ್ಮಲಾ ಹಂಜಗಿ, ಜಿ.ಡಿ.ಕಾಂಬಳೆ,  ಸುನಂದಾ ಮದಬಾವಿ ಮಾತನಾಡಿದರು.    


ಸುದ್ದಿ ಓದಿ