ಯರಗಟ್ಟಿ

ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಿ: ಎಚ್‌.ಕೆ.ಚೌರಡ್ಡಿ

ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಿ: ಎಚ್‌.ಕೆ.ಚೌರಡ್ಡಿ

ಯರಗಟಿ,24: ರಕ್ತದಾನ ಮಾಡುವ ಮೂಲಕ ಜೀವ ಉಳಿಸಿ ಮತ್ತೊಬ್ಬರ ಬಾಳಿಗೆ ಸಂಜೀವಿನಿ ಯಾಗುವುದು ಎಂದು ಪಿಡಿಒ ಎಚ್‌.ಕೆ.ಚೌರಡ್ಡಿ ಹೇಳಿದರು. 

ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬೆಳಗಾವಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸವದತ್ತಿ ತಾಪಂ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇದೆ. ಇಂತಹ ಶಿಬಿರದ ಮೂಲಕ ರೋಗಿಗಳ ತುರ್ತು ಚಿಕಿತ್ಸೆ ಅವಕಾಶವಾಗಲಿದೆ. ಯುವ ಜನಾಂಗ ಚಟಗಳಿಗೆ ದಾಸರಾಗದೆ ಒಳ್ಳೆಯ ಆಹಾರ ಸೇವಿಸಿ ಆರೋಗ್ಯವಂತರಗಿ ಇನ್ನೊಂದು ಜೀವವನ್ನು ಉಳಿಸುವ ಮಹಾತ್ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್‌.ಗಂಜಿ ಮಾತನಾಡಿ, ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ರಕ್ತದಾನ ಮಾಡುವದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದರು.ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ನಿವೃತ್ತ ಮುಖ್ಯ ಶಿಕ್ಷಕ ಎ.ವಿ.ಇಂಗಳೆ, ಕಾರ್ಯದರ್ಶಿ ಸತೀಶ ಬಡಿಗೇರ ಮಾತನಾಡಿದರು. 

ಗ್ರಾಪಂ ಅಧ್ಯಕ್ಷ ಕವಿತಾ ಬಾಲರಡ್ಡಿ ಅಧ್ಯಕ್ಷತೆ ವಹಿಸಿದ್ದರು, ಸವದತ್ತಿ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಸದಸ್ಯ ಸಚೀನ ಹೋಳಿ, ಮಲ್ಲಪ್ಪ ಬಸಿಡೋಣಿ, ಶಶಿಧರ ತಳವಾರ, ಶಟ್ಟೆಪ್ಪ ಮಾದರ, ಶಂಕರಗೌಡ ಪಾಟೀಲ, ನೀಲಕಂಠ ಶಿವಪೂಜಿ, ಶಿವನಗೌಡ ನಾಯ್ಕರ, ಸುಭಾನಿ ಕುದರಿ, ರಾಜಶೇಖರ ಅಣ್ಣಿಗೇರಿ, ವೈದ್ಯಾದಿಕಾರಿ ಡಾ.ಪ್ರಮೋದ ಸಿಂದಗಿ, ಆರೋಗ್ಯ ನಿರಿಕ್ಷಣಾದಿಕಾರಿ ಹನಮಂತ ಪಚ್ಚಿನವರ, ಎಸ್‌.ಎಸ್‌.ಉಪ್ಪಿನ, ಆರತಿ ಹೊಳ್ಳಿಕೇರಿ, ಜಿ.ಪಿ.ಹೊಂಗಲ, ಎಸ್‌.ಎಫ್‌.ಚೆನ್ನಮೇತ್ರಿ, ವಸಂತ ಚವ್ಹಾನ, ಶೀಮಾ ರಾಥೋಡ, ಶೋಭಾ ಚುಳಕಿ, ನೀಲವ್ವ ಬೆನಕಟ್ಟಿ ಸೇರಿದಂತೆ ರಕ್ತಭಂಡಾರ ಬಿಮ್ಸ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು. 


ಸುದ್ದಿ ಓದಿ