ಶಿಗ್ಗಾವ್

ಪರಿಸರ ಉಳಿಸಿ ಬೆಳೆಸಬೇಕು: ರಾಜು ಕುನ್ನೂರ

ಪರಿಸರ ಉಳಿಸಿ ಬೆಳೆಸಬೇಕು: ರಾಜು ಕುನ್ನೂರ

ಶಿಗ್ಗಾವಿ 24: ಪರಿಸರವನ್ನು ರಕ್ಷಿಸುವ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ಕಟ್ಟಬೇಕಾಗಿದೆ ಪರಿಸರ ರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ಕೊರೋನಾದಂತಹ ಮಾಹಾಮಾರಿಗೆ ತುತ್ತಾಗಬೇಕಾಗಿದೆ ಆದ್ದರಿಂದ ಪರಿಸರ ಉಳಿಸಿ ಬೆಳೆಸಬೇಕು ಎಂದು ಬಿಜೆಪಿ ಪಂಚಾಯತ ರಾಜ ನಗರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಾಜು ಕುನ್ನೂರ ಹೇಳಿದರು. 

ಜನಸಂಘ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿಯವರ ಪುಣ್ಯ ತಿಥಿಯ ನಿಮಿತ್ಯ ಪಟ್ಟಣದ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ರೋಗದಿಂದ ನಾವೆಲ್ಲ ಮುಕ್ತರಾಗಬೇಕಾಗಿದೆ ಅದಕ್ಕಾಗಿ ಸರಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿ ಕೊರೋನಾ ಓಡಿಸೋಣ ಎಂದರು. 

ಕಿವುಡಮೂಕ ಮಕ್ಕಳ ಶಾಲೆಯ ಮೂಖ್ಯೋಪಾದ್ಯಾಯ ಎಂ.ಬಿ.ನೀರಲಗಿ, ಶರಣಕುಮಾರ ಹಲಸೂರ, ಅಕ್ಷಯ ಹೊಂಬಾಳಿಮಠ ಇದ್ದರು. 


ಸುದ್ದಿ ಓದಿ