ಏ.26ರಿಂದ ಸಾವಳಗಿಯ ಜಾತ್ರೆ ಪ್ರಾರಂಭ
ಜಾನುವಾರುಗಳ ಮೇಳ, ವೈವಿಧ್ಯಮಯ ಕಾರ್ಯಕ್ರಮ

ಗೋಕಾಕ 27: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲೂಕಿನ ಸಾವಳಗಿಯ ಸಿದ್ಧ ಸಂಸ್ಥಾನ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಇದೇ ಏ.26 ಪ್ರಾರಂಭವಾಗಿದ್ದು ಮೇ 4ರವರೆಗೆ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಸಂಭ್ರಮದಿಂದ ಜಾತ್ರೆ ಜರುಗಲಿದೆ.
ಜಾತ್ರೆಯ ನಿಮಿತ್ತವಾಗಿ ಪುರಾಣ, ಸಂಗೀತ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕೃಷಿ, ಜಾನುವಾರುಗಳ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರೆ ಕಾರ್ಯಕ್ರಮಗಳು: ಮೇ 3ರಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಅವರ ಪ್ರಾರ್ಥನಾ ಭಕ್ತಿ ಗೀತೆಗೆಳ ಧ್ವನಿ ಮುದ್ರಿಕೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡುವರು.
ಮೇ 4ರಂದು ಸಂಜೆ 4.30ಕ್ಕೆ ಅಡ್ಡ ಪಲ್ಲಕ್ಕಿ ಜರುಗುವುದು. ರಾತ್ರಿ 8ಕ್ಕೆ ಜಗದ್ಗುರುಗಳ ಸನ್ನಿಧಿಯಲ್ಲಿ ಜಾತ್ರೆಯ ಸಮಾರೋಪ ಸಮಾರಂಭ ಜರುಗುವುದು. ಜಾತ್ರೆಯ ಪ್ರತಿ ನಿತ್ಯ ಪ್ರವಚನದ ನಂತರ ಸನ್ನಿಧಿಯವರು ಆಶೀರ್ವಚನ ನೀಡುವರು.
ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ: ದೈವಾಂಶ ಪುರುಷರು ಆಗಿರುವ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರರು ಕ್ರಿ.ಶ. 1645ರಿಂದ ಕ್ರಿ.ಶ. 1748ರ ಅವಧಿಯಲ್ಲಿ ಹಲವಾರು ಪವಾಡುಗಳ ಮೂಲಕ ಭಕ್ತರ ಹೃದಯದಲ್ಲಿ ನೆಲೆಸಿರುವರು.ಕಲಬುರ್ಗಿಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಶರಣ ಲಿಂಗಬಸಪ್ಪ ಹಾಗೂ ಸದ್ಗುಣಿ ಮಲ್ಲಮ್ಮ ಇವರ ಉದರದಲ್ಲಿ ಶಿವಲಿಂಗೇಶ್ವರರ ಪಾವನ ಜನನವಾಯಿತು. ಬಾಲ್ಯ ಮತ್ತುಯೌವ್ವನದಲ್ಲಿ ಅನೇಕ ಪವಾಡಗಳ ಮೂಲಕ ದೈವತ್ವವನ್ನು ಹೊಂದಿದ್ದರು. ಲೋಕಕಲ್ಯಾಣಕ್ಕಾಗಿ ಸಂಚಾರಗೈಯುತ್ತ ಗೋಕಾಕ ತಾಲ್ಲೂಕಿನ ಸಾವಳಗಿಯ ಘಟಪ್ರಭಾ ನದಿಯತಟದಲ್ಲಿ ನೆಲೆಸಿ ತಪಸ್ಸುಗೈದರು. ಶಿವಲಿಂಗೇಶ್ವರರ ತಪಸ್ಸಿನ ಪ್ರಭಾವವು ಕಲಬುರ್ಗಿಯ ಬಾದಷಹ ಸುಲ್ತಾನ್ರೋಜ್ ಬಹದ್ದೂರನಗುರು ಬಂದೇನವಾಜ್ ವಲಿಯವರ ಮೇಲೆ ಬೀರಿತ್ತು. ಮುಸಲ್ಮಾನ್ಗುರುಖಾಜಾ ಬಂದೇ ನವಾಜ್ರು ವೀರಶೈವಗುರು ಶಿವಲಿಂಗೇಶ್ವರರ ತಪಸ್ಸಿನ ಮಹಾಮಹಿಮೆಗೆ ಬೆರಗಾಗಿ ಬಂದೇನವಾಜರು ಶಮನ್, ಟೊಪ್ಪಿಗೆ ಮತ್ತು ಹಸಿರು ಶಲ್ಲೆಗಳನ್ನು ಉಡುಗೋರೆಯಾಗಿ ನೀಡಿ ನಮಸ್ಕರಿಸುತ್ತಾರೆ. ಈ ಬಾಂಧ್ಯವದ ಪ್ರತೀಕವಾಗಿ ಸಾವಳಗಿಯ ಶ್ರೀಪೀಠವು ಇಂದಿಗೂ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಬಿಂಬಿಸುವ ಜಾಗೃತ ಸ್ಥಳವಾಗಿದೆ. ಇಲ್ಲಿ ಬರುವ ಭಕ್ತರಿಗೆ ಮಠ ಮತ್ತು ಮಸೀದಿಯ ಎರಡೂಒಂದೆಡೆಕಾಣುವಂತಿದೆ.ಹಿಂದೂ-ಮುಸ್ಲಿಂ ವಾಸ್ತುಶಿಲ್ಪವನ್ನು ಹೊಂದಿರುವ ಸಾವಳಗಿಯ ಶ್ರೀಪೀಠವು ಭಾವೈಕ್ಯತೆಯ ಪ್ರತೀಕವಾಗಿದೆ.ಶ್ರೀಪೀಠವು ಉತ್ಸವಗಳಲ್ಲಿ ಸನ್ನಿಧಿಯವರುಹಸಿರು ಬಣ್ಣದ ಪೇಟಾ, ಶಲ್ಯ, ಶಮನ ಮುಂತಾದರಾಜ ಪೋಷಾಕುಗಳನ್ನು ಧರಿಸುತ್ತಾರೆ. ಭಕ್ತರು‘ದೀನ್ ಹರಹರಾ’ ಎಂಬ ಧರ್ಮ ಸಮನ್ವಯವನ್ನು ಸಾರುವಉದ್ಘೋಷ ಮಾಡುತ್ತಾರೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳುನಾಡು, ಕಾಶ್ಮೀರ ಸೇರಿದಂತೆ ದೇಶದ ಉದ್ದಗಲಕ್ಕೂ 360ಕ್ಕೂ ಅಧಿಕಜಗದ್ಗುರು ಶಿವಲಿಂಗೇಶ್ವರರ ಮಠಗಳಿವೆ. 1100ಕ್ಕೂ ಅಧಿಕ ಗದ್ಗುಗೆಗಳಿವೆ. ಗೋಕಾಕ ತಾಲ್ಲೂಕಿನ ಸಾವಳಗಿಯಲ್ಲಿ ಜಗದ್ಗುರುಶಿವಲಿಂಗೇಶ್ವರರು ಜೀವಂತ ಐಕ್ಯರಾಗಿರುವುದರಿಂದ ಸಾವಳಗಿಯು ಪುಣ್ಯಕ್ಷೇತ್ರವಾಗಿ ಮಹತ್ವ ಹೊಂದಿದೆ. ಅತ್ಯಂತಜಾಗೃತ ಸ್ಥಳವೆನಿಸಿದೆ. ಭಕ್ತರ ಇಷ್ಟಿತಾರ್ಥವನ್ನು ಈಡೇರಿಸುವ ಕ್ಷೇತ್ರವೆನಿಸಿದೆ.
ಸದ್ಯ ಸಾವಳಗಿಯಲ್ಲಿಯ ಜಗದ್ಗುರು ಶಿವಲಿಂಗೇಶ್ವರರ ಮೂಲ ಮಠದಲ್ಲಿಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು 15ನೇ ಪೀಠಾಧಿಪತಿಗಳಾಗಿ ಲಕ್ಷಾಂತರ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ.ಚಾಮರಾಜನಗರಜಿಲ್ಲೆಯಕಮರವಾಡಿಯಲ್ಲಿ ಪುಣ್ಯಜನನ, ಮೈಸೂರಿನ ಮಹಾರಾಜಾಕಾಲೇಜಿನಲ್ಲಿ ಸಂಸ್ಕೃತ ವ್ಯಾಸಾಂಗವನ್ನು ಹೊಂದಿದ್ದಾರೆ.ಶ್ರೀಗಳು ಶ್ರೇಷ್ಠ ವಾಗ್ಮಿಗಳು, ಶ್ರೇಷ್ಠ ವಿಚಾರವಾದಿಗಳು, ಕಟ್ಟಾ ಶಿವಯೋಗಿಗಳು, ಶಿಕ್ಷಣ, ಕೃಷಿ, ಸಾಹಿತ್ಯ, ಸಂಗೀತ ಪ್ರೇಮಿಗಳಾಗಿದ್ದಾರೆ. ಶ್ರೀಮಠದಲ್ಲಿ ಇಂದಿಗೂ ದೇಶಿ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದು ಇಲ್ಲಿಯ ವಿಶೇಷವಾಗಿದೆ. ಜಾತ್ರೆಯಲ್ಲಿ ನಿತ್ಯ ಸನ್ನಿಧಿಯವರು ಆಶೀರ್ವಚನ ನೀಡುವರು.