ಯರಗಟ್ಟಿ

ಗೊಂದಲಗಳ ನಡುವೆ ಸತ್ತಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆ

ಗೊಂದಲಗಳ ನಡುವೆ ಸತ್ತಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆ

ಯರಗಟ್ಟಿ 30: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯ ಗೊಂದಲಮಯವಾಗಿದೆ. ಮರು ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಸೋತ ಸದಸ್ಯರು ತಾಲೂಕಿನ ಸತ್ತಿಗೇರಿ ಗ್ರಾಮ ಪಂಚಾಯತಿ ಎದುರಿಗೆ ಶುಕ್ರವಾರ ಧರಣಿ ನಡೆಸಿದರು.  

ತಾಲೂಕಿನ ಸತ್ತಿಗೇರಿ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿತ್ತು. ಅದರಂತೆ ನೀಲವ್ವ ಲಕ್ಷ್ಮಣ ಭಜಂತ್ರಿ ಹಾಗೂ ಬಂಗಾರೆವ್ವ ಯಮನಪ್ಪ ಮಾದರ ಅಧ್ಯಕ್ಷ ಸ್ಥಾನಕ್ಕೆ ಮತ್ತು ರಾಜು ಕೃಷ್ಣಪ್ಪ ಸೋಮಣ್ಣವರ ಮತ್ತು ಗುರಪ್ಪ ವಿರುಪಾಕ್ಷಪ್ಪ ವಾಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಿಯೋಜಿತ ಚುನಾವಣಾಧಿಕಾರಿ ಎಚ್‌. ಸಿ. ತಳವಾರ ನೇತೃತ್ವದಲ್ಲಿ ಪ್ರಕ್ರಿಯೆ ಆರಂಭವಾಗಿತ್ತು. ಬಂಗಾರೆವ್ವ ಮಾದರ ಅಧ್ಯಕ್ಷೆಯಾಗಿ,ಗುರಪ್ಪ ವಾಲಿ ಉಪಾಧ್ಯಕ್ಷರನ್ನಗಾಗಿ ಘೋಷಿಸಿದ ಸಂದರ್ಭದಲ್ಲಿ ಪರಾಭವಗೊಂಡ ಇನ್ನೊಂದು ಗುಂಪು ಆಕ್ಷೇಪಣೆ ವ್ಯಕ್ತ ಪಡಿಸಿತು. 

ಚುನಾವಣೆ ಪ್ರಕ್ರಿಯೆಯಲ್ಲಿ ಗೊಂದಲಗಳ ಕುರಿತು ನೆರೆದ ಜನ ಕೊಠಡಿ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ಕಿಟಕಿ ತೆರೆದಾಗ ಹಿಂಭಾಗದಲ್ಲಿ ಕುಳಿತ ಅಧಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬಂಗಾರೆವ್ವ ಮಾದರ ಅವರ ಕೈಗೆ ಗಾಯವಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಬದಲಾಗಿ ಗಲಾಟೆ ನಡೆದಿಲ್ಲವೆಂದು ಪಿಡಿಓ ಮಲ್ಲಪ್ಪ ರುದ್ರ​‍್ಪ ಹಾರೋಗೊಪ್ಪ ಪ್ರತಿಕ್ರಿಯೆ ನೀಡಿದರು.ಸೋಲನುಭವಿಸಿದ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜು ಸೋಮಣ್ಣವರ ಮಾತನಾಡಿ, 12 ಸದಸ್ಯರ ಬೆಂಬಲವಿದ್ದರೂ ಆಯ್ಕೆಯಾಗಿದ್ದು ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಆಕಾಂಕ್ಷಿಗಳು. ಇಲ್ಲಿ ಬಿಜೆಪಿ ಬೆಂಬಲಿತರ ಜಯ ಘೋಷಿಸಿದ್ದು ಕಾನೂನು ಬಾಹೀರ. 12 ಮತ ಪಡೆದ ಬಿಜೆಪಿ ಸದಸ್ಯರೊಂದಿಗೆ ನಿಯೋಜಿತ ಚುನಾವಣಾಧಿಕಾರಿ ಎಸ್‌.ಸಿ. ತಳವಾರ ಹಾಗೂ ಪಿಡಿಒ ಮಲ್ಲಪ್ಪ ಹಾರೋಗೊಪ್ಪ ಶಾಮೀಲಾಗಿ ಲೋಪವೆಸಗಿದ್ದಾರೆ. ಕಾನೂನು ಬಾಹೀರವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಮೇಲ್ನೋಟಕ್ಕೆ ಕಾಣಬಹುದು. ಈ ಫಲಿತಾಂಶದಿಂದ ನಮಗೆ ಹಾಗೂ ನಮ್ಮ ಬೆಂಬಲಿಗರಿಗೆ ಅನ್ಯಾಯವಾಗಿದೆ. ಕಾರಣ ಸೂಕ್ತ ಕ್ರಮವಿರಿಸಿ ಮರು ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.’ಘಟನೆ ಕುರಿತು ಸ್ಥಳಕ್ಕೆ ಎಸ್‌.ಪಿ. ಸಂಜೀವ ಪಾಟೀಲ, ಎ. ಸಿ. ಪ್ರಭಾವತಿ, ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಪಿಐ ಮೌನೇಶ್ವರ ಮಾಲಿಪಾಟೀಲ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ತಿಳಿಗೊಳಿಸಿದರು. ಎ ಸಿ ಪ್ರಭಾವತಿ ನಾಮಪತ್ರ ಹಾಗೂ ಮತದಾನ ಪತ್ರಗಳನ್ನು ಪರೀಶೀಲಿಸಿದರು. ಬಳಿಕ ಚುನಾವಣಾಧಿಕಾರಿ ಮತ್ತು ಸಿಬ್ಬಂದಿಗಳೊಟ್ಟಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಜೊತೆಗೆ ಸಿಸಿಕ್ಯಾಮರಾ ಪೂಟೇಜ್‌ಗಳನ್ನು ವೀಕ್ಷಿಸಿದ ಅವರು ಮಾತನಾಡಿ, ಪ್ರಕ್ರಿಯೆ ಸಂವಿದಾನಬದ್ಧವಾಗಿ ನಡೆದಿದೆ. ಇಲ್ಲಿ ಅಧಿಕಾರಿಗಳಿಂದ ಲೋಪವಾಗಿಲ್ಲ. ಮತದಾನ ಕ್ರಮಬದ್ಧವಾಗಿದೆ. ಬಂಗಾರೆವ್ವ ಯಮನಪ್ಪ ಮಾದರ ಅಧ್ಯಕ್ಷೆ ಹಾಗೂ ಗುರ​‍್ಪ ವಿರುಪಾಕ್ಷಪ್ಪ ವಾಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಫಲಿತಾಂಶ ಮಾನ್ಯವಾಗಿದೆ ಎಂದರು.ಎಸ್‌.ಪಿ ಸಂಜೀವ ಪಾಟೀಲ, ಚುನಾವಣೆಯಲ್ಲಿ ಜಯಗಳಿಸಿದ ಅಭ್ಯೆರ್ಥಿಯಾಗಲಿ ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಮೆರವಣಿಗಯೊಂದಿಗೆ ಸಂಭ್ರಮಾಚರಣೆ ನಡೆಸ ಕೂಡದು ಎಂದು ಹೇಳಿದರು  

ಈ ವೇಳೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.  


ಸುದ್ದಿ ಓದಿ