ಶಿಗ್ಗಾವ್

ಶಶಿಧರ ಯಲಿಗಾರ ಕಾರ್ಯ ನಿಜಕ್ಕೂ ಶ್ಲಾಘನೀಯ: ಹಿರೇಮಠ

ಶಶಿಧರ ಯಲಿಗಾರ ಕಾರ್ಯ ನಿಜಕ್ಕೂ ಶ್ಲಾಘನೀಯ: ಹಿರೇಮಠ

ಶಿಗ್ಗಾವಿ 24: ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಾಯಿ ಬಾಬಾ ಪುಸ್ತಕ ಲೇಖಕ ಎಫ್‌.ಎಸ್‌.ಹಿರೇಮಠ ಹೇಳಿದರು. 

ಪಟ್ಟಣದ ಸಾಯಿನಗರದಲ್ಲಿರುವ ಸಾಯಿ ಮಂದಿರದಲ್ಲಿ ಸಿ.ಬಿ.ಯಲಿಗಾರ ಅವರ 2 ನೇ ಪುಣ್ಯ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾಯಿ ಬಾಬಾರವರ ಜೀವನ ಚರಿತ್ರೆವುಳ್ಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಮನೆಯಲ್ಲಿ ದೊಡ್ಡವರು ಇರಬಾರದು ಅಂದರೆ ತಂದೆ, ತಾಯಿ, ಹಿರಿಯರು ಯಾರು ಇರಬಾರದು ಎನ್ನುವ ಸಂದರ್ಭದಲ್ಲಿ ತಂದೆಯವರ 2 ನೇ ವರ್ಷದ ಪುಣ್ಯ ಸ್ಮರಣಾರ್ಥ ಪುಸ್ತಕ ಬಿಡುಗಡೆ ಕಾರ್ಯ ನಿಜಕ್ಕೂ ಅರ್ಥಪೂರ್ಣವಾಗಿದೆ ಹಾಗೂ ಅವರ ತಂದೆಯ ಹೆಸರಿನಲ್ಲಿ ಟ್ರಸ್ಟ ರಚನೆ ಮಾಡಿ ಅನೇಕ ಸಮಾಜ ಮುಖಿ ಕೆಲಸ ಕಾರ್ಯ ಮಾಡುತ್ತಿರುವುದು ಸಂತೋಷದ ವಿಷಯ ಎಂದರು. 

ಸಾಯಿಬಾಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಶಶಿಧರ ಸುರಗೀಮಠ ಮಾತನಾಡಿ 

ಅವರೆಲ್ಲ ಕಾರ್ಯಗಳು ವಿಶೇಷ ಕಾರ್ಯಗಳಾಗಿದ್ದು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲು ಸಾಯಿ ಬಾಬಾರವರ ಅನುಕರಣೆ ಸದಾ ಅವರ ಮೇಲಿರಲಿ ಮತ್ತು ಆಯುಷ್ಯ ಆರೋಗ್ಯ ಸಂಪತ್ತು ಕರುಣಿಸಲಿ ಎಂದರು. 

ನ್ಯಾಯವಾದಿ ಹನುಮಂತ ಬಂಡಿವಡ್ಡರ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಮಾಡದೇ ಇರುವ ಕೆಲಸವನ್ನು ಶಶೀಧರ ಯಲಿಗಾರ ಮಾಡಿದ್ದಾರೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ಪಟ್ಟಣದಲ್ಲಿ ಕಡು ಬಡವ ಕುಟುಂಬದ 50 ಸದಸ್ಯರಿಗೆ ಕಡಿಮೆ ಬೆಲೆಗೆ ಸೈಟ್ ನೀಡಲು ವಿನಂತಿಸಿದರು. 

ಸಾಯಿ ಬಾಬಾ ದೇವಸ್ಥಾನ ಸಮಿತಿ ವತಿಯಿಂದ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶೀಧರ ಯಲಿಗಾರ, ಸಾಯಿ ಬಾಬಾ ಪುಸ್ತಕ ಲೇಖಕ ಎಫ್‌.ಎಸ್‌.ಹಿರೇಮಠ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶೀಧರ ಯಲಿಗಾರ, ಸಾಯಿ ಬಾಬಾ ದೇವಸ್ಥಾನ ಸಮಿತಿ ಸದಸ್ಯ ವಿಶ್ವನಾಥ ವಾಲಿಶೆಟ್ಟರ, ಆರ.ಎಸ್‌.ಪಾಟೀಲ, ಅಶೋಕ ಕಾಳೆ, ಸುರೇಶ ಹರಿಜನ, ನಾಗಣ್ಣಾ ಹಾವೇರಿ, ಶಿವಾನಂದ ಕುನ್ನೂರ ಸೇರಿದಂತೆ ಸಾಯಿ ನಗರದ ಸದ್ಭಕ್ತರು ಹಾಗೂ ಅರ್ಚಕರು ಉಪಸ್ಥಿತರಿದ್ದರು. ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ