ರಾಣೆಬೆನ್ನೂರ

ಮಂಜುನಾಥ ಗೌಡಶಿವಣ್ಣನವರ ಅಭಿಮಾನಿ ಬಳಗದಿಂದ ಸರ್ವಧರ್ಮ ಸಾಮೂಹಿಕ ವಿವಾಹ

ಮಂಜುನಾಥ ಗೌಡಶಿವಣ್ಣನವರ ಅಭಿಮಾನಿ ಬಳಗದಿಂದ ಸರ್ವಧರ್ಮ ಸಾಮೂಹಿಕ ವಿವಾಹ

ಲೋಕದರ್ಶನ ವರದಿ 


ರಾಣೇಬೆನ್ನೂರು 28: ವಿವಾಹ ಮಂಗಲ ಕಾರ್ಯಗಳಲ್ಲಿ ಭೋದಿಸುವ ಮಂತ್ರದ ಅರ್ಥವನ್ನು ಅರಿತುಕೊಂಡರೆ ಮಾತ್ರ ಮದುವೆ ಮಾಡಿಕೊಂಡಿದ್ದು ಸಾರ್ಥಕವಾಗುತ್ತದೆ. ಅರ್ಥವನ್ನು ತಿಳಿಯದೆ ಹೋದರೆ ವಿವಾಹ ಮಂಗಲ ಕಾರ್ಯಗಳಲ್ಲಿ ಪಾಲ್ಗೊಂಡು ಸತಿ-ಪತಿಗಳಾದವರಿಗೆ ಬದುಕು ಸವೆಸುವುದು ಹೇಗೆ ಎನ್ನುವ ಅರ್ಥ ತಿಳಿಯಲಾರದು. ಹೀಗಾಗಿ ಸತಿ-ಪತಿಗಳಾದವರು ಆಕಸ್ಮಿಕವಾಗಿ ತಮ್ಮ ಜೀವನದಲ್ಲಿ ಬರುವ ಈ ಮದುವೆ ಕಾರ್ಯದಲ್ಲಿ ಪರಿಪೂರ್ಣ ಅರ್ಥ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. 

ಅವರು ಗುರುವಾರ ಇಲ್ಲಿನ ಯರೇಕುಪ್ಪಿ ರಸ್ತೆ ಬಳಿಯ ಕಾಕೋಳ, ಕೆಂಚೋಟಿಯವರು ಜಮೀನಿನಲ್ಲಿ ನಗರಸಭಾ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಅವರ ಅಭಿಮಾನಿ ಬಳಗವು ಅವರ ತಾಯಿ ನೀಲಮ್ಮ ಮತ್ತು ತಂದೆ ಶಂಕ್ರ​‍್ಪ ಗೌಡಶಿವಣ್ಣನವರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಒಳ್ಳೆಯ ಕೆಲಸ ಮಾಡಲು ಯಾವುದೇ ಮುಹೂರ್ತಗಳು ಬೇಕಾಗಿಲ್ಲ. ಎಲ್ಲ ಮುಹೂರ್ತಗಳು ಉತ್ತಮವಾಗಿರುತ್ತವೆ ಎಂದರು. 

ನವದಂಪತಿಗಳು ಅರ್ಥಪೂರ್ಣ ಬದುಕನ್ನು ಸಾಗಿಸಲು ಪರಸ್ಪರ ಪ್ರೀತಿ ಹಿ ವಿಶ್ವಾಸ ನಂಬಿಕೆಯನ್ನು ಅಳವಡಿಸಿಕೊಳ್ಳಬೇಕು. ಗದ್ದಲ ಗಲಾಟೆಗಳಿಗೆ ಅವಕಾಶ ಮಾಡಿಕೊಡಬಾರದು. ಗದ್ದಲ ಗಲಾಟೆಗಳು ಹಿರಿಯರು ಹೇಳಿದಂತೆ ಉಂಡು ಮಲಗುವವರೆಗೆ ಮಾತ್ರ ಸೀಮಿತವಾಗಿರಲಿ. ಆದರೆ ವಿವಾಹ ವಿಚ್ಚೇದನಕ್ಕೆ ಕಾರಣವಾಗಬಾರದು ಎಂದ ಶ್ರೀಗಳು, ಈ ದೇಶದ ಅನ್ನದಾತ ರೈತ. ರೈತನ ಬದುಕು ಹಸನಾಗಬೇಕು. ಸಣ್ಣ ಅಥವಾ ದೊಡ್ಡ ರೈತರೆನ್ನುವ ತಾರತಮ್ಯ ಬೇಡ. ಎಲ್ಲರಿಗೂ ಸಮಾನ ದೃಷ್ಟಿಯಲ್ಲಿ ಸರ್ಕಾರ ಕಾಣಬೇಕು. ಈ ವಿಚಾರವನ್ನು ಸಭಾಪತಿಯವರ ಗಮನಕ್ಕೆ ತರಲಾಗಿದೆ. ವಿಧಾನ ಪರಿಷತ್‌ನಲ್ಲಿ ಚರ್ಚಿಸಲು ಮುಂದಾಗಬೇಕು ಎಂದು ಹೇಳಿದರು. 

ಸಮಾರಂಭ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ಸಂಸದ ಜಿ.ಎಂ.ಶಿದ್ದೇಶ್ವರ ಅವರು, ಯಾರೂ ಸಹ ತಮ್ಮ ಮದುವೆ ನಂತರ ತಮ್ಮ ತಮ್ಮ ವೃದ್ದ ತಂದೆ ತಾಯಂದಿರನ್ನು ವೃದ್ದಾಶ್ರಮಕ್ಕೆ ಕಳುಹಿಸದೆ ಅವರನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣಬೇಕು. ಹೆಣ್ಣಿರಲಿ ಗಂಡಿರಲಿ ಒಂದೇ ಮಗು ಸಾಕು. ಅವರಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿಸಿ ದೇಶದ ಮತ್ತು ನಾಡಿನ ಸತ್ಪ್ರಜೆಗಳನ್ನಾಗಿ ಬೆಳೆಸಲು ಮುಂದಾಗಬೇಕು ಎಂದರು. 

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಿರಿಗೆರೆ ಶ್ರೀಗಳು ನೀಡಿದ ಆದೇಶದಂತೆ ಸಣ್ಣ ಮತ್ತು ದೊಡ್ಡ ರೈತರೆಂಬ ತಾರತಮ್ಯದ ನೀತಿಯ ಬಗ್ಗೆ ಸರ್ಕಾರದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ದೊಡ್ಡ ರೈತರಿಗೆ ಸಮಸ್ಯೆಗಳು ದೊಡ್ಡವಿವೆ. ಸಣ್ಣ ರೈತರಿಗೆ ಸಣ್ಣ ಮಟ್ಟದ ಸಮಸ್ಯೆಗಳಿವೆ. ಆದರೆ ರೈತರು ಮಾತ್ರ ಒಂದೇ ಎಂಬ ಭಾವನೆ ಬರಬೇಕು. ಅಂದಾಗ ಮಾತ್ರ ಎಲ್ಲ ರೈತರಿಗೆ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ ಎಂದ ಅವರು, ಸರ್ಕಾರಗಳು ನೀಡುತ್ತಿರುವ ಉಚಿತ ಯೋಜನೆಗಳಿಂದ ಕೆಲಸಕ್ಕೆ ಕಾರ್ಮಿಕರು ಸಿಗದಂತಾಗಿದ್ದಾರೆ. ‘ಕಾಯಕವೇ ಕೈಲಾಸ’ ಎನ್ನುವ ಬಸವಣ್ಣನವರ ಮಾತು ಇಂದಿನ ದಿನಮಾನಗಳಲ್ಲಿ ಮರೆಯಾಗುತ್ತಲಿದೆ. ಇದು ದೊಡ್ಡ ವಿಷಾದಕರ ಸಂಗತಿ ಎಂದರು. 

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮುಖಂಡ ಮಂಜುನಾಥ ಗೌಡಶಿವಣ್ಣನವರ, ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡೆ. ಅವರು ನೀಡಿದ ಧರ್ಮಕಾರ್ಯದ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆದಿದ್ದೇನೆ. 2009ರಲ್ಲಿ 75 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದೇನೆ. ಪ್ರತಿ 2 ವರ್ಷಕ್ಕೊಂದು ಬಾರಿ ಇಂತಹ ಸಾಮೂಹಿಕ ಧರ್ಮ ಕಾರ್ಯಗಳನ್ನು ನಡೆಸುತ್ತೇನೆ. ತಾಲೂಕಿನ ಅಭಿವೃದ್ಧಿಗಾಗಿ ಹಲವು ಹೋರಾಟಗಳನ್ನು ನಡೆಸಿದ್ದೇನೆ. ರಾಜಕೀಯದಲ್ಲಿ ನನಗೆ ತೃಪ್ತಿಯಲ್ಲಿ ಸಾಮೂಹಿಕ ಕಾರ್ಯದಲ್ಲಿ ತೃಪ್ತಿ ಕಂಡುಕೊಳ್ಳುತ್ತಿದ್ದೇನೆ. ನನ್ನ ಅಭಿಮಾನಿ ಬಳಗ ನನ್ನ ಹಿಂದೆ ಇದ್ದು ಯಾವುದೇ ಕಾರ್ಯಗಳಿರಲಿ ಯಶಸ್ವಿಗೆ ಕಂಕಣ ಕಟ್ಟಿ ನಿಂತಿದ್ದಾರೆ. ಅವರು ನೀಡುವ ಸಹಕಾರ ತಾವೆಂದೂ ಮರೆಯಲು ಸಾಧ್ಯವಿಲ್ಲ ಎಂದು ಅಭಿನಂದಿಸಿದರು. 

ದಿವ್ಯ ನೇತೃತ್ವದಲ್ಲಿದ್ದ ತುಮ್ಮಿನಕಟ್ಟಿ ಪದ್ಮಸಾಲಿ ಗುರುಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು, ಮದ್ದರಕಿ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯರು ಸಂದೇಶಾಮೃತ ನೀಡಿದರು. ಪಿಕೆಕೆ ಇನಿಶಿಯೇಟಿವ್ಸ್‌ ಅಧ್ಯಕ್ಷ ಪ್ರಕಾಶ್ ಕೋಳಿವಾಡ, ನಿವೃತ್ತ ಪಿಡಿಓ ರುದ್ರ​‍್ಪ ಕಮ್ಮಾರ ಮತ್ತಿತರರು ಮಾತನಾಡಿದರು. 

ವೇದಿಕೆಯಲ್ಲಿ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಮಾಜಿ ಶಾಸಕ ಬಿ.ಪಿ.ಹರೀಶ್, ಸಾಧುವೀರಶೈವ ಸಮಾಜದ ಅಧ್ಯಕ್ಷ ಶಿವಣ್ಣ ನಂದಿಹಳ್ಳಿ, ಉಪಾಧ್ಯಕ್ಷ ಈರಣ್ಣ ಮಾಕನೂರ, ವರ್ತಕ ಚನ್ನಬಸಪ್ಪ ಗೌಡಶಿವಣ್ಣನವರ, ಜಯಮ್ಮ ಧ. ದೊಡ್ಡಗೌಡ್ರ, ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್‌.ಬುರಡಿಕಟ್ಟಿ, ನಗರಸಭೆ ಸದಸ್ಯ ಶೇಖಪ್ಪ ಹೊಸಗೌಡ್ರ, ಕುಬೇರ​‍್ಪ ಕೊಂಡಜ್ಜಿ, ಗಣೇಶ ಹಾವನೂರ, ಶಂಕ್ರಣ್ಣ ಕಾಕಿ, ಮಲ್ಲಿಕಾರ್ಜುನ ಅಡಿವೆಪ್ಪನವರ, ಸಿದ್ದಣ್ಣ ಚಿಕ್ಕಬಿದರಿ, ಚನ್ನಪ್ಪ ಸಪ್ಪಣ್ಣವರ, ನಾಗಪ್ಪ ಬುರಡಿಕಟ್ಟಿ, ಕರಿಯಪ್ಪ ಶಿಡಗನಾಳ, ಮಲ್ಲೇಶಪ್ಪ ಕೆಂಚೋಟಿ, ಹೊಳಿಯಪ್ಪ ಕಾಕೋಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು, ಯುವ ಮುಖಂಡರು, ಅಭಿಮಾನಿ ಬಳಗದ ಪದಾಧಿಕಾರಿಗಳು, ಮಹಿಳಾ ಸಮಾಜದ ಕಲಾವಿದರು ಪ್ರಾರ್ಥಿಸಿದರು. ಪರಶುರಾಮ ಬಣಕಾರ ಸಂಗಡಿಗರು ಸಂಗೀತ ಸೇವೆ ನೀಡಿದರು. ಜಿ.ಜಿ.ಹೊಟ್ಟಿಗೌಡ್ರ ಸ್ವಾಗತಿಸಿದರು. ಜಿ.ಬಿ.ಮಾಳಗುಡ್ಡಪ್ಪನವರ ನಿರೂಪಿಸಿ, ಎಸ್‌.ಜಿ.ಮಾಕಾಳ ವಂದಿಸಿದರು. 


ಸುದ್ದಿ ಓದಿ