ಶಿಗ್ಗಾವ್

ನಾಲಿಗೆಯ ಮೇಲೆ ಸರಸ್ವತಿ ಮಹಾ ಬಿಜಾಕ್ಷರ ಮಂತ್ರ: ಸಂತೋಷಕುಮಾರಯ್ಯ ಶಾಸ್ತ್ರಿಗಳು

ನಾಲಿಗೆಯ ಮೇಲೆ ಸರಸ್ವತಿ ಮಹಾ ಬಿಜಾಕ್ಷರ ಮಂತ್ರ: ಸಂತೋಷಕುಮಾರಯ್ಯ ಶಾಸ್ತ್ರಿಗಳು

ಶಿಗ್ಗಾವಿ 19:  ತಾಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದೇವಿ ದೇವಸ್ಥಾನದಲ್ಲಿ   ಸತತ 12 ವರ್ಷಗಳಿಂದ   ನಡೆದಕೊಂಡ ಬಂದ  ಈ ವರ್ಷವೂ ಕೂಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ  ಪ್ರತಿವರ್ಷದ ಪದ್ಧತಿಯಂತೆ ಜ್ಞಾಪಕ ಶಕ್ತಿ ವಿದ್ಯಾಭ್ಯಾಸಕ್ಕೆ ಆಸಕ್ತಿಗಾಗಿ ನವರಾತ್ರಿ ಸಮಯದಲ್ಲಿ ಅಕ್ಟೋಬರ  20  -2023 ರ ಶುಕ್ರವಾರರಂದು ಸರಸ್ವತಿ ಆವಾಹನೆ ದಿನದಂದು ನಾಲಿಗೆಯ ಮೇಲೆ ಸರಸ್ವತಿ ಮಹಾ ಬಿಜಾಕ್ಷರ ಮಂತ್ರವನ್ನು ಬರೆಯಲಾಗುವುದು. 

ದೇವಸ್ಥಾನದ ಸರ್ವಅಧ್ಯಕ್ಷರ ಉಪಾಧ್ಯಕ್ಷರು ಮತ್ತು ಸದಸ್ಯರ ಹಾಗೂ ಸರ್ವಜನಾಂಗದ ಸದ್ಭಕ್ತರು ಗ್ರಾಮದ ಗುರುಹಿರಿಯರ  ಮತು ಸುತ್ತಮುತ್ತಲಿನ ಗುರುಹಿರಿಯರ ಸಹಕಾರ ಸಹಾಯದೊಂದಿಗೆ ಬರೆಯಲಾಗುವುದು. 

ಶುಭೋದಯ ಕಾಲಕ್ಕೆ ದೇವಿಗೆ ಅಭಿಷೇಕ ಅಷ್ಟೋತ್ತರ ಬಿಲ್ವಾರ್ಚನೆ ನಂತರ ಸರಸ್ವತಿಆಹ್ವಾನಿ ಪೂಜೆ ನಂತರ ಮಹಾಮಂಗಳಾರತಿ ತದನಂತರ ಬಿಜಾಕ್ಷರ ಮಹಾ ಮಂತ್ರವನ್ನು ನಾಲಿಗೆಯ ಮೇಲೆ ಬರೆಯಲಾಗುವುದು  ಸಮಯ ಬೆಳಗ್ಗೆ 8:30 ರಿಂದ  ಪ್ರಾರಂಭ ಮಾಡಲಾಗುವುದು. 

ಸುಡುತ್ತದೆ, ಉರಿಯುತ್ತದೆ, ತೊಂದರೆ ಗಾಯ ಆಗುತ್ತದೆ ಎಂಬ ಭಯ ಬೇಡ, ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಓದುವ ಅಭ್ಯಾಸ ಹೆಚ್ಚಿಸಲು ಜ್ಞಾಪಕ ಶಕ್ತಿಗಾಗಿ ಬರೆಯಲಾಗುವುದು ಮೂರು ವರ್ಷಗಳ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಮತ್ತುಯಾವುದೇ ವಯಸ್ಸಿನ ಮಿತಿಇರುವುದಿಲ್ಲ ಎಂದುಎಂದು ವೇದಮೂರ್ತಿ ಸಂತೋಷಕುಮಾರಯ್ಯ ಶಾಸ್ತ್ರಿಗಳು ಬಾಗಲಕೋಟಿಮಠ ಈ ಮೂಲಕ ತಿಳಿಸಿದ್ದಾರೆ. 


ಸುದ್ದಿ ಓದಿ