ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಪರಿಸರ ರಕ್ಷಣೆಗಾಗಿ ಸಸಿ ನೆಡುವ ಕಾರ್ಯಕ್ರಮ
ಬ್ಯಾಡಗಿ,27 : ಪರಿಸರ ರಕ್ಷಣೆಗಾಗಿ ಕೆರೆ ಅಂಗಳದಲ್ಲಿ ಸಸಿ ನೆಡುವ ಕಾರ್ಯ ಮಾಡಲಾಗುತ್ತದೆ ಎಂದು ತಾಲೂಕಾ ಯೋಜನಾಧಿಕಾರಿ ರಘುಪತಿ ಗೌಡ ಹೇಳಿದರು,
ಷತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಯೋಜನಾ ಕಚೇರಿ ವ್ಯಾಪ್ತಿಯ ಗ್ರಾಮದ ದೊಡ್ಡಕಟ್ಟೆ ಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಪುನ:ಶ್ಚೇತನಗೊಂಡ ಕೆರೆಗಳ ಅತಿಕ್ರಮಣ ತಡೆಗಟ್ಟುವುದು, ಏರಿ ಜರಿಯದಂತೆ ಹಸಿರು ಹೊದಿಕೆ ನಿರ್ಮಾಣವಾಗಬೇಕಿರುವುರಿಂದ ಕೆರೆಯಂಗಳದಲ್ಲಿ ಅರಣ್ಯ ಸಸಿಗಳ ನಾಟಿ ಮತ್ತು ಅವುಗಳ ಸ್ವರಕ್ಷಣೆಯನ್ನು ಜೂನ್ ನಲ್ಲಿ ಆಯೋಜಿಸಲಾಗಿದೆ, ಮಾಸಾಂತ್ಯದೊಳಗೆ ಹೊಸದಾಗಿ ಪುನ ಶ್ಚೇತನಗೊಂಡ 6 ಕೆರೆಗಳ ಸುತ್ತ ಗಿಡ ನಾಟಿ ಪೂರ್ಣಗೊಳ್ಳಲಿದೆ, ಮುಖ್ಯವಾಗಿ ಪ್ರಾಣಿ- ಪಕ್ಷಿಗಳಿಗೆ, ಜನ- ಜಾನುವಾರುಗಳಿಗೆ, ಹಣ್ಣು ಹೂವು, ಮೇವು,ನೆರಳು ಕೊಡುವ ಗಿಡಗಳನ್ನು ಕೆರೆ ಸಮಿತಿಗೆ ಆದಾಯ ತಂದು ಕೊಡಬಹುದಾದ ಹಣ್ಣಿನ ಗಿಡಗಳ 3000 ಸಸಿಗಳ ನಾಟಿಗೆ ಆದ್ಯತೆ ನೀಡಲಾಗಿದೆ, ಅದೇ ರೀತಿ ನೂತನವಾಗಿ ನಿರ್ಮಿಸಿರುವ ಕೆರೆಯ ಏರಿ ಜರಿಯದಂತೆ ಏರಿಯ ಸುತ್ತ ಹುಲ್ಲು ಬೆಳೆಯುವ ಬೀಜಗಳ ಬಿತ್ತನೆ ನಡೆಯಲಿದೆ ಎಂದರು,
ಕಾರ್ಯಕ್ರಮದಲ್ಲಿ ಬೆಳಗಾವಿ ಕಾರಂಜಿಮಠದ ಶ್ರೀ ಶಿವಯೋಗಿ ಸ್ವಾಮೀಜಿಗಳು, ವಲಯ ಅರಣ್ಯ ಅಧಿಕಾರಿ ಜಗದೀಶ್ ಮಹಾರಾಜ ಪೇಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ನಾಯಕ್, ಹನುಮಂತಪ್ಪ, ಕೃಷಿ ಮೇಲ್ವಿ ಚಾಲಕರಾದ ಜಿ, ಪ್ರಕಾಶ್, ಸೈಯದ್, ಹಾಗೂ ಕೆರೆ ಸಮಿತಿ ಪದಾಧಿಕಾರಿಗಳು ಸೇರಿದಂತೆ ಇನ್ನಿತರರಿದ್ದರು,