ಶಂಕರಪ್ಪ ಗೋರವರ ಅವರ ಪ್ರಾಣಿ ಪ್ರೀಯತೆ ಶ್ಲಾಘನೀಯ
ಶಿಗ್ಗಾವಿ 26: ತಾಲೂಕಿನ ಕಬನೂರ ಗ್ರಾಮದ ಶಂಕರಪ್ಪ ಗೋರವರ ಆರ್ಥಿಕವಾಗಿ ಸದೃಢವಲ್ಲದ ಕಡು ಬಡತನದಿಂದ ಬಳಲುತ್ತಿರುವ ಕುಟುಂಬದ ಸದಸ್ಯ ನಿಜಕ್ಕೂ ರಾಜ್ಯಕ್ಕೆ ಮಾದರಿಯಾದ ರೈತನೆಂದು ಹೇಳಬೇಕಾಗುತ್ತದೆ ಏಕೆಂದರೆ ಕಳೆದ 5 ವರ್ಷದಿಂದ ತಾಲೂಕಿನಲ್ಲಿ 3 ವರ್ಷ ಬರಗಾಲ, ಜಲ ಪ್ರಳಯ, ನೆರೆ ಹಾವಳಿ, ಕಳೆದ 2 ವರ್ಷದಿಂದ ಕೊರೊನಾ ತುರ್ತು ಪರಿಸ್ಥಿತಿಯಲ್ಲಿಯೂ ಸಹಿತ ಮನೆಯಲ್ಲಿರುವ ಗೋಮಾತೆಯನ್ನು ಕುಟುಂಬದ ಸದಸ್ಯರಂತೆ 8 ವರ್ಷಗಳ ಕಾಲ ನಿರಂತರವಾಗಿ ಸಾಕಿ ಸಲುಹಿ ಅದರ 8ನೇ ಸೂಲ ಹೆರಿಗೆ ಆಗಿ ಮರಣಹೊಂದಿದೆ ಆ ಕುಟುಂಬದಲ್ಲಿ ಇಂದು ಎಲ್ಲರೂ ಭ್ರಮನಿರಸನಗೊಂಡು ತಾವು ಸಹಿತ ಏನು ತಿನ್ನದೇ ಬೇಜಾರದಲ್ಲಿ ಇದ್ದ ವಾಸ್ತವತೆಯನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು.
ಈ ಸಂದಿಗ್ನ ಪರಿಸ್ಥಿಯಲ್ಲಿ ಅಂದರೆ ಅವರ ಕಷ್ಟ, ಕಾರ್ಪಣಯ, ಆರ್ಥಿಕ ತೊಂದರೆ ಲೆಕ್ಕಿಸದೇ ಬೇರೆ ಯಾರಾದರೂ ಸಹಿತ ಅದನ್ನು ಹಣಕ್ಕಾಗಿ ಗೋಹತ್ಯೆಗೆ ಒಳಪಡಿಸುತ್ತಿದ್ದರು ಆದರೆ ಇವರು ಅವರ ಮನೆಯ ಹಿಂದುಗಡೆ ಅದರ ಅಂತ್ಯ ಸಂಸ್ಕಾರ ಕೈಗೊಂಡು ಮಾನವೀಯತೆ ಹಾಗೂ ಇನ್ನೂ ದೇಶದಲ್ಲಿ ಗೋಮಾತೆಗೆ ಇರುವ ಗೌರವವನ್ನು ಎತ್ತಿ ತೋರಿಸಿದ ಗೋರವರ ಕುಟುಂಬಸ್ಥರಿಗೆ ಕಬನೂರ ಗ್ರಾಮಸ್ಥರು ಅಭಿನಂದಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮಸ್ಥರು ಶ್ಲಾಘಿಸಿದರು ಅಲ್ಲದೇ ತಾಲೂಕ ಪಂಚಾಯತ ಮಾಜಿ ಸದಸ್ಯ ಶ್ರೀಕಾಂತ ಪೂಜಾರ ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.