ತಾಳಿಕೋಟಿ

ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತ ಅಲ್ಲ: ಹೆಗರಡ್ಡಿ

ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತ ಅಲ್ಲ: ಹೆಗರಡ್ಡಿ

ತಾಳಿಕೋಟಿ17:  ಮಹಾಪುರುಷರು ಹಾಗೂ ಮಹಾನ್ ನಾಯಕರು ಒಂದು ಜಾತಿಗೆ ಸೀಮಿತರಲ್ಲ ಅವರ ಆದರ್ಶಗಳು ಎಲ್ಲ ಜಾತಿ ಧರ್ಮದವರಿಗೂ ಅನ್ವಯವಾಗುತ್ತವೆ. ಆದರೆ ನಾವಿಂದು ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿದ್ದೇವೆ. ಸಂಗೊಳ್ಳಿ ರಾಯಣ್ಣ ಎಲ್ಲ ಸಮಾಜದ ಆದರ್ಶ ವ್ಯಕ್ತಿ ಆಗಿದ್ದಾನೆ. ಎಂದು ಬಿಜೆಪಿ ಮುಖಂಡ ಹಾಗೂ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಹೆಗರಡ್ಡಿ ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಸೇನಾನಿ ಸಂಗೊಳ್ಳಿ ರಾಯಣ್ಣನ ಜನ್ಮ ದಿನದ ಅಂಗವಾಗಿ ಸಮೀಪದ ಭಂಟನೂರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. 

ಸ್ವಾತಂತ್ರ್ಯದ ದಿನದಂದೇ ಜನಿಸಿದ ವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕಿತ್ತೂರ ರಾಣಿಚನ್ನಮ್ಮನ ಸೇನಾನಿಯಾಗಿ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ದೇಶಭಕ್ತ ಅವನ ದೇಶ ಪ್ರೇಮ ಹಾಗೂ ತ್ಯಾಗ ನಮಗೆಲ್ಲರಿಗೂ ಮಾದರಿ ಯಾಗಬೇಕಾಗಿದೆ ಎಂದರು.

ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಟ್ರ್ಯಾಕ್ಟರ್ನಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಅಂಬೇಡ್ಕರ ಮೈದಾನದಲ್ಲಿರುವ ಮಹಾಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಸಂಗನಗೌಡ ಹೆಗರಡ್ಡಿ, ಮಲ್ಲನಗೌಡ ಪದರಡ್ಡಿ, ಸಿದ್ದು ಬಾರಿಗಿಡದ, ಶರಣಗೌಡ ನಾಗರಡ್ಡಿ, ವೇಂಕಾರಡ್ಡಿ ನಾಗರಡ್ಡಿ, ಶರಣಗೌಡ ಪದರಡ್ಡಿ, ನಿಂಗಪ್ಪ ದೊಡಮನಿ, ಮಲ್ಲನಗೌಡ ಬಸರಡ್ಡಿ, ರುದ್ರಗೌಡ ನಾವದಗಿ, ರಾಮಣ್ಣ ಚಲವಾದಿ ಕಿರಣ ಚಲವಾದಿ ಇದ್ದರು 

ಸುದ್ದಿ ಓದಿ