ಹೊಳಗುಂದಿ ಶಾನಭೋಗರ ರಕ್ಷಿತಗೆ ಸಂಗೀತ ಸೇವಾ ರತ್ನ ಪ್ರಶಸ್ತಿ
ಲೋಕದರ್ಶನ ವರದಿ
ಹೂವಿನಹಡಗಲಿ ಫೆ.09: ರಾಜ್ಯದ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ 2021-22ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಸುಜ್ಞಾನ ವಿದ್ಯಾಪೀಠ ಸಾಂಸ್ಕೃತಿಕರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ಕಡಲಬಾಳು ಹಗರಿಬೊಮ್ಮನಹಳ್ಳಿ ಇವರಿಂದ ಮೈಸೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಈಚೆಗೆ
ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಶಾನಭೋಗರ ರಕ್ಷಿತ ಅವರಿಗೆ ಸಂಗೀತ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕನ್ನಡ ನಾಡು,ನುಡಿ, ನೆಲ,ಜಲ, ಸಾಂಸ್ಕೃತಿಕ, ಸಾಮಾಜಿಕ ಸಂಶೋಧನೆ,ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರ ಪ್ರತಿಭಾವಂತರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಮೈಸೂರು ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ, ತಾಲೂಕು ಅಧ್ಯಕ್ಷ ಎ.ಸಿ.ಮಂಜುನಾಥ, ಸುಜ್ಞಾನ ವಿದ್ಯಾಪೀಠದ ಅಧ್ಯಕ್ಷ ಅಂಜೀನಪ್ಪ ತಂಬ್ರಹಳ್ಳಿ, ಕಾರ್ಯದರ್ಶಿ ಡಾ.ನಾಗರಾಜ ತಂಬ್ರಹಳ್ಳಿ ಇತರರಿದ್ದರು