ಮರುಳು ಗಣಿಗಾರಿಕೆಗೆ ಭಾರಿ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ: ಬಗಲಿ
ಇಂಡಿ: ನದಿ ಪಾತ್ರಗಳಲ್ಲಿ ಭಾರಿ ಗಾತ್ರದ ಯಂತ್ರೋಪಕರಣಗಳನ್ನು ಬಳಸಿ ಮರುಳು ಗಣಿಗಾರಿಕೆ ಮಾಡಲು ಗುತ್ತಿಗೆದಾರರಿಗೆ ಅನುಮತಿ ನೀಡದಿರಲು ಕರ್ನಾಟಕ ಸರಕಾರಕ್ಕೆ ರಾಷ್ಟ್ರೀಯ ಹಸಿರು ಪೀಠ ದಕ್ಷಿಣವಲಯ ಚನ್ನೈ (ನ್ಯಾಶನಲ್ ಗ್ರೀನ್ ಟ್ರಿಬಿನಲ್) ಆದೇಶಿಸಿದೆ ಎಂದು ಇಂಡಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಹೇಳಿದರು.
ಅವರು ಸೋಮವಾರ ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮರುಳು ಗಣಿಗಾರಿಕೆಗೆ ಭಾರಿ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ ಎಂದು ಮರುಳು ಗತಣಿಗಾರಿಕೆಗೆ ಅನುಮತಿ ನೀಡುವ ವೇಳೆಯೇ ಸಂಬಂದಪಟ್ಟ ಇಲಾಖೆ ಗುತ್ತಿಗೆದಾರರಿಗೆ ಕಡ್ಡಾಯವಾಗಿ ತಿಳಿಸಬೇಕು. ಭವಿಷ್ಯದಲ್ಲಿ ಗುತ್ತಿಗೆ ಕರಾರು ರಚಿಸುವಾಗ ಅಧಿಕಾರಿಗಳು ಎಚ್ಚರಿಕೆಯಿಂದ ರಚಿಸಬೇಕು ಎಂದು ಎನ್ಜಿಟಿಯ ದಕ್ಷಿಣ ಪೀಠ ಹೇಳಿದೆ ಎಂದು ಡಾ.ಬಗಲಿ ತಿಳಿಸಿದರು.
ಈ ಕುರಿತು ನಾನು ಸಲ್ಲಿಸಿದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ರಾಮಕೃಷ್ಣನ್ ನೇತೃತ್ವದ ಎನ್ಜಿಟಿ ಈ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಜೋಳದ ಹೆಡಗಿ ಗ್ರಾಮದ ಬಳಿ ಕೃಷ್ಣಾನದಿ ತೀರದಲ್ಲಿ ಎರಡು ಸ್ಥಳಗಳಲ್ಲಿ ಮರುಳು ಗಣಿಗಾರಿಕೆ ನಡೆಸಲಾಗುತ್ತಿದೆ.
ಇದಕ್ಕಾಗಿ ಜೆಸಿಪಿ ಸೇರಿ ಇತರೆ ದೊಡ್ಡ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಇದು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ತಡೆ ಸಚಿವಾಲಯ ನೀಡಿರುವ ಮಾರ್ಗಸೂಚಿಯ ಉಲ್ಲಂಘನೆ ಆಗಿದೆ ಎಂದು ನಾನು 2020 ರಲ್ಲಿ ರಾಷ್ಟ್ರೀಯ ಹಸಿರು ಪೀಠ ದಕ್ಷಿಣ ವಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಗಣಿಗಾರಿಕೆ ಮತ್ತು ಭೂಗರ್ಭಶಾಸ್ತ್ರ ಇಲಾಖೆಗೆ ಎನ್ಜಿಟಿ ನಿರ್ದೇಶನ ನೀಡಿದೆ ಎಂದು ಡಾ. ಬಗಲಿ ತಿಳಿಸಿದರು.
ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಈಗಾಗಲೇ ಜಂಟಿ ಸಮಿತಿ ರಚಿಸಲಾಗಿದೆ.ಸಮಿತಿ ವಿಧಿಸುವ ದಂಡದ ಜೊತೆ, ಗಣಿಗಾರಿಕೆಗೆ ಅನುಮತಿ ನೀಡಲಾಗುವ ಪ್ರದೇಶದಿಂದ ಹೊರಗೆ ಗಣಿಗಾರಿಕೆ ನಡೆಸಿದವರಿಂದ ಪರಿಸರ ಪರಿಹಾರ ಮೊತ್ತ ವಸೂಲಿ ಮಾಡುವಂತೆ ಗಣಿಗಾರಿಕೆ ಇಲಾಖೆಗೆ ಎನ್ಜಿಟಿ ನಿರ್ದೇಶನ ನೀಡಿದೆ ಎಂದು ಡಾ. ಬಗಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮಂತ ಬಾರಿಕಾಯಿ ಮತ್ತಿತರಿದ್ದರು.