ಕೋವಿಡ್ ನಿಯಂತ್ರಿಸುವಲ್ಲಿ ಬೊಮ್ಮಾಯಿ ಸೇವೆ ರಾಜ್ಯಕ್ಕೆ ಮಾದರಿ
ಶಿಗ್ಗಾವಿ 07: ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಕೋವಿಡ್ ನಿಯಂತ್ರಿಸುವಲ್ಲಿ ಮತ್ತು ಸಾರ್ವಜನಿಕರ ಹಾಗೂ ಸೋಂಕಿತರ ಆರೋಗ್ಯ ಕಾಪಾಡುವಲ್ಲಿ ಮಾಡಿದ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಾಲೂಕ ಬಾಜಫ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅಭಿಪ್ರಾಯಪಟ್ಟರು.ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಗೃಹ ಇಲಾಖೆ ಹಾಗೂ ಸಂಸದೀಯ ವ್ಯವಹಾರ ಕಾನೂನು ಇಲಾಖೆಗಳ ಒತ್ತಡದ ಮದ್ಯೆಯೂ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಗಿಸುವಲ್ಲಿಯೂ ಯಾರಿಗೂ ಸಹಿತ ತೊಂದರೆಯಾಗದಂತೆ ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕ್ಷೇತ್ರದಲ್ಲಿ ಸೋಂಕು ತಡೆಗಟ್ಟುವಲ್ಲಿ ಅನೇಕ ಮುಂಜಾಗೃತ ಕಾರ್ಯದ ರೂಪರೇಷೆಗಳನ್ನು ಸಿದ್ಧಪಡಿಸಿ ಅಧಿಕಾರಿಗಳೊಂದಿಗೆ ಮತ್ತು ಜನ ಪ್ರತಿ ನಿಧಿಗಳೊಂದಿಗೆ ವಿಡಿಯೋ ಸಂವಾದದ ಮುಖಾಂತರ ಗ್ರಾಮ ಪಂಚಾಯತ ಮಟ್ಟದಿಂದ ಸ್ವಚ್ಛತೆ ಕುಡಿಯುವ ನೀರು, ಸೋಂಕಿತರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ರೋಗ ನಿರೋಧಕ ಮಾತ್ರೆಯ ಕಿಟ್ನ್ನು ಕೊಡುವುದು, ಸಾಮಾಜಿಕ ಅಂತರ ಮಾಸ್ಕ ಅಭಿಯಾನ ಸೇರಿದಂತೆ ಹತ್ತು ಹಲವಾರು ಜನ ಜಾಗೃತಿಯನ್ನು ಕ್ಷೇತ್ರದಲ್ಲಿ ನಿಂತುಕೊಂಡು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಗ್ಗಾವಿ ತಾಲೂಕ ಆಸ್ಪತ್ರೆಯಲ್ಲಿ 120 ಆಕ್ಸಿಜನ ಬೆಡ್, ಬಾಡದಲ್ಲಿ 200 ಬೆಡ್, ಬಂಕಾಪೂರ ಆಸ್ಪತ್ರೆಯಲ್ಲಿ 50 ಬೆಡ್, ಸವಣೂರ ಆಸ್ಪತ್ರೆಯಲ್ಲಿ 80 ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಿದರೂ ಸಹಿತ ಸೋಂಕಿತರ ಸಂಖೈ ಹೆಚ್ಚಾದಾಗ ಶಿಗ್ಗಾವಿಯ ಅವರ ಮನೆಯ ಸಭಾಂಗಣವನ್ನೇ 50 ಬೆಡ್ ಗಳ ಗಂಗಮ್ಮ ಬೊಮ್ಮಾಯಿ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವನ್ನಾಗಿ ಮಾಡಿ ಸುವ್ಯವಸ್ಥಿತವಾಗಿ ಬೆಡ್ ಆಕ್ಸಿಜನ ಪೊರೈಸಿ ಸೋಂಕಿತರಿಗೆ 48 ಗಂಟೆಗಳಲ್ಲಿ ಶೌಚಾಲಯ ನಿಮರ್ಿಸಿ ಹೊಸ ಬೆಡ್ ವ್ಯವಸ್ಥೆ, ಪ್ರತಿಯೊಂದು ಬೆಡ್ಗೆ ಆಮ್ಲಜನಕ ಸಾಂದ್ರಕಗಳು, ಪ್ಯಾನ್, ಸ್ಯಾನಿಟೈಜರ, ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ಗಳು, ಪಲ್ಸ ಆಕ್ಸಿಮೀಟರ ಮಾಡಿ ಬಿಸಿ ಬಿಸಿಯಾದ ಊಟ ಉಪಚಾರ ಬಿಸಿ ಬಿಸಿ ಚಹಾ, ಕಷಾಯ, ಸೇರಿದಂತೆ ಸೋಂಕಿತರ ಸೇವೆಗೆ ನುರಿತ ವೈದ್ಯರ ತಂಡವನ್ನು ನಿಯೋಜಿಸಿ ಆರೋಗ್ಯ ಕಾಪಾಡುವಲ್ಲಿ ರಾಜ್ಯದಲ್ಲಿ ವಿಬಿನ್ನ ಹಾಗೂ ವಿಶೇಷವಾದ ಸೇವೆಯನ್ನು ಮಾಡಿದ್ದಾರೆ ಇಂತಹ ಜನನಾಯಕರು ಬಡ ಜನರ ಕಷ್ಟ ಸೋಂಕಿತರ ನೋವು ಏನೆಂಬುದನ್ನು ಅರಿತು ಪ್ರಾಣದ ಹಂಗು ತೊರೆದು ಅವರೊಂದಿಗೆ ಬೆರೆತು ಆತ್ಮಸ್ತೈರ್ಯ ತುಂಬಿ ನಿಮ್ಮೊಂದಿಗೆ ನಾನಿದ್ದೇನೆ ಭಯ ಪಡದಿರಿ ನೀವು ಕೂಡಲೇ ಗುಣಮುಖರಾಗಿ ನಿಮ್ಮ ಮನೆಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ಮನೋಲ್ಲಾಸದ ನುಡಿಗಳಿಂದ ಆತ್ಮಸ್ಥೈರ್ಯ ತುಂಬುವ ನಾಯಕರಿವರು ಇಂಥವರನ್ನು ಪಡೆದ ನಾವೇ ಧನ್ಯರು ಎಂದರು