ತಾಳಿಕೋಟಿ

ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭ

ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭ


             ತಾಳಿಕೋಟಿ 18 : ಪಟ್ಟಣದಲ್ಲಿ ಡಾ. ಗಂಗಾಂಬಿಕಾ ಪಾಟೀಲ ಅವರ ಮಾಲಿಕತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ   ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವರಾದ ಡಾ.ಅಜಯಸಿಂಗ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಡಾ.ಗಂಗಾಂಬಿಕಾ ಪಾಟೀಲ ಅವರು ಬಹಳ ಕಷ್ಟಪಟ್ಟು ತಮ್ಮ ಸುದೀರ್ಘವಾದ ಸೇವೆಯಿಂದ ಈ ಆಸ್ಪತ್ರೆಯನ್ನು ಆರಂಭಿಸಿದ್ದಾರೆ.

             ಅವರಿಗೆ ಅಭಿನಂದಿಸುತ್ತೇನೆ ನಿಮ್ಮೆಲ್ಲರ ಸಹಕಾರ ಅವರೊಂದಿಗಿರಲಿ ಎಂದರು. ಮುದ್ದೇಬಿಹಾಳ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಅಪ್ಪಾಜಿ ನಾಡಗೌಡರು ಮಾತನಾಡಿ ಡಾ.ಗಂಗಾಂಬಿಕಾ ಪಾಟೀಲ ಅವರು ತಮ್ಮ ವೈದ್ಯಕೀಯ ಜೀವನದಲ್ಲಿ ಒಳ್ಳೆಯ ಶಿಸ್ತನ್ನು ಬೆಳೆಸಿಕೊಂಡು ಬಂದವರಾಗಿದ್ದಾರೆ. ಅವರ ತಂದೆಯವರು ಆಧ್ಯಾತ್ಮಿಕ ಜೀವಿಗಳಾಗಿದ್ದರು.

                ಅವರು ತಮ್ಮ ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಕೊಟ್ಟಿದ್ದಾರೆ. ಇಂದಿನ ದಿನಗಳಲ್ಲಿ ಇಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯುವುದು ಸಣ್ಣ ಕೆಲಸವಲ್ಲ ಇದು ದೊಡ್ಡ ಸವಾಲಾಗಿದೆ. ಇಂಥ ಶ್ರೇಷ್ಠ ಕೆಲಸವನ್ನು ಮಾಡಿದ ಡಾ. ಗಂಗಾಂಬಿಕಾ ದಂಪತಿಗಳಿಗೆ ನಾನು ಅಭಿನಂದಿಸುತ್ತೇನೆ ಎಂದರು. ಸಮಾರಂಭದ ಸಾನಿಧ್ಯವನ್ನು ವಹಿಸಿದ ಶ್ರೀಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಮಾತನಾಡಿ ಡಾ.ಗಂಗಾಂಬಿಕಾ ಪಾಟೀಲ ಅವರ ತಂದೆಯವರಾದ ಸಂಗನಗೌಡ ಪಾಟೀಲ ತಮದೊಡ್ಡಿ ಅವರು ತಮ್ಮ ಸ್ವಂತ ಖರ್ಚಿನಿಂದ ಒಂದು ಗ್ರಾಮದಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದಾರ.ೆ

                   ಅವರು ಮಾಡಿದ ಈ ಪುಣ್ಯದ ಕಾರ್ಯದ ಫಲವಾಗಿ ಅವರ ಪುತ್ರಿಯಾದ ಗಂಗಾಂಬಿಕಾ ಅವರು ಇಷ್ಟೊಂದು ದೊಡ್ಡ ಕೆಲಸವನ್ನು ಮಾಡಲು ಸಾಧ್ಯವಾಗಿದೆ. ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಸ್ಥಳೀಯ ಹಿರಿಯ ವೈದ್ಯ ಡಾ.ವಿಜಯಕುಮಾರ ಕಾರ್ಚಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೇ.ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ,

             ಭಾರತಿ ದರ್ಶನಾಪೂರ, ಡಾ. ಪ್ರಭುಗೌಡ ಲಿಂಗದಳ್ಳಿ, ಸಂಗಮ್ಮ ರೆಡ್ಡಿ, ಡಾ.ಸೋಮಶೇಖರ ಪಾಟೀಲ, ಡಾ. ಪ್ರಶಾಂತ ಕಟಕೋಳ, ಡಾ. ಸಂಗಮ ವಿ ರೆಡ್ಡಿ, ಡಾ. ರಾಜಶೇಖರ್ ಪಾಟೀಲ, ಡಾ. ಭುವನೇಶ್ವರಿ ಸಾಸನೂರ, ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ. ಬಿ. ಬಿರಾದಾರ, ಡಾ.ಶ್ರೀಶೈಲ ಹುಕ್ಕೇರಿ, ಡಾ.ಗಂಗಾಂಬಿಕಾ ಪಾಟೀಲ ಮತ್ತಿತರರು ಇದ್ದರು. ಪುಂಡಲೀಕ ಪ್ರಾರ್ಥಿಸಿದರು. ಲೆ.ಕರ್ನಲ್ ರಾಜಶೇಖರ್ ಪಾಟೀಲ ಸ್ವಾಗತಿಸಿದರು. ಕುಮಾರಿ ಗೌರಿ ಹಜೇರಿ ಭರತನಾಟ್ಯ ಪ್ರದರ್ಶಿಸಿದರು. ಸಾಹಿತಿ ಸುಮಂಗಲಾ ಕೋಳೂರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ