ಕಾರವಾರ

ಸಾಹಿತ್ಯ ಪರಿಷತ್ತು ಕುಟುಂಬದಂತಿರಬೇಕು

ಸಾಹಿತ್ಯ ಪರಿಷತ್ತು  ಕುಟುಂಬದಂತಿರಬೇಕು

ಒಬ್ಬರು ರಥ ಎಳೆಯುವುದಲ್ಲ ; ಎಲ್ಲರೂ ಕೂಡಿ ರಥ ಎಳೆಯಬೇಕು  : ಶಾರದಾ ಭಟ್ 

ಕಾರವಾರ 06:  ಸಾಹಿತ್ಯ ಪರಿಷತ್ತಿನಲ್ಲಿ ಬದಲಾವಣೆ ಬೇಕಿದೆ.  ಪರಿಷತ್ತು ಒಡೆದ ಮನೆಯಾಗಿದೆ. ಸಾಕಷ್ಟು ಭಿನ್ನಮತ ಇದೆ, ಹಿರಿಯರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ನನಗೆ 75 ವರ್ಷ, ಬದಲಾವಣೆ ತರಲು ಚುನಾವಣಗೆ ನಿಂತಿದ್ದೇನೆ.  ಒಬ್ಬರ ದಾರಿಯೇ ಮುಖ್ಯ ಆಗಬಾರದು. ಎಲ್ಲರ ಮಾತು ಕೇಳಿ, ಸಲಹೆ ಪಡೆದು, ಇಡೀ ಬರಹಗಾರರ ಕುಟುಂಬವನ್ನಾಗಿ ಬದಲಾಯಿಸಬೇಕಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ  ಶಾರದಾ ಭಟ್ ಹೇಳಿದರು . 

ಪತ್ರಿಕಾ ಭವನದಲ್ಲಿ  ಮಂಗಳವಾರ ಮಾತನಾಡಿದ ಅವರು ಎಲ್ಲರೂ ಸೇರಿ ಕನ್ನಡದ ರಥ ಎಳೆಯುವಂತಾಗಬೇಕು. ಮಹಿಳೆಯರು ಸಹ ಪರಿಷತ್ ರಥ ಎಳೆಯಬೇಕು. ಮಹಿಳೆಯರಿಗೆ ಅರ್ಹತೆ ಇದೆ. ಸ್ಪರ್ಧೆಗೆ  ಇತರ ಮಹಿಳೆಯರು ಮುಂದೆ ಬರಲಿಲ್ಲ. ಹಾಗಾಗಿ ನಾನೇ ಚುನಾವಣೆಗೆ ನಿಂತಿದ್ದೇನೆ ಎಂದರು. ಹಿಂದೆ ನಾನು  ಸಾಕ್ಷರತೆಯ ಆಂದೋಲನದಲ್ಲಿ  ಸಾಕಷ್ಟು ಕೆಲಸ ಮಾಡಿದ್ದೇನೆ. ಹಿರಿಯರಿಗೆ ಬೇಕಾದ  ಕತೆ, ಕವನ, ಕಾದಂಬರಿ ಬರೆದಿದ್ದೇನೆ ಎಂದರು. ಏಡ್ಸ ತಡೆಯ ನಾಟಕವನ್ನು ಸಹ ಬರೆದಿದ್ದೇನೆ. ದೇವರ ನಾಮ ಬರೆದಿದ್ದೇನೆ ಎಂದು ಶಾರದಾ ಭಟ್ ಹೇಳಿದರು. ಸತ್ಯ,ನ್ಯಾಯ ನಿಷ್ಠೆ ಯಿಂದ ಪರಿಷತ್ತು ನಡೆಸುವೆ ಎಂದರು. ಪರಿಷತ್ತು ನಲ್ಲಿ ಭಿನ್ನಾಭಿಪ್ರಾಯ ಇದೆ. ಹಿಂದೆ ಎರಡು ಸಲ ಸ್ಪರ್ಧಿಸಿ ಸೋತಿರುವೆ. ಎರಡನೇ ಸಲ ನಿಂತಾಗ 40 ಓಟಿನ ಅಂತರದಿಂದ ಸೋತಿದ್ದೆ. ಮೂರನೇ ಸಲ ಅಂದರೆ ಕಳೆದ 5 ವರ್ಷದ ಹಿಂದೆ  ಸ್ಪರ್ಧೆಗೆ ವೈಯಕ್ತಿಕ ಕಾರಣದಿಂದ ನಾಮ ಪತ್ರ ನೀಡಿರಲಿಲ್ಲ. ಹಾಗೂ ನಾನು ಬೆಂಬಲಿಸಿದ ವ್ಯಕ್ತಿ ಗೆದ್ದಿದ್ದರು.  ಈಗ ಮತ್ತೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿರುವೆ. ಈಗ ಆಯ್ಕೆ ಮತದಾರರಿಗೆ ಬಿಟ್ಟದ್ದು ಎಂದರು, ಸಾಹಿತ್ಯ ಪರಿಷತ್ತನಲ್ಲಿ  ಒಡಕಿದೆ. ಇಲ್ಲ ಎಂದು ಹೇಳಲಾರೆ. ನನ್ನ ನಿರ್ಲಕ್ಷಿಸಿದ ಓರ್ವ ಮಾಜಿ ಅಧ್ಯಕ್ಷರನ್ನು ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಕರೆದಿದ್ದೆ. ಅವರು ಬಂದಿರಲಿಲ್ಲ. ಅನೇಕ ಮಹಿಳಾ ಬರಹಗಾರ್ತಿಯರಿಗೆ ಪರಿಷತ್ ವೇದಿಕೆಯಲ್ಲಿ ಅವಕಾಶವೇ ಸಿಗಲಿಲ್ಲ. ಇಂತಹ ತಾರತಮ್ಯ ನಿಲ್ಲಬೇಕಿದೆ ಎಂದರು. ಚುನಾವಣೆ ನಂತರ ವೈಷಮ್ಯ  ಮರೆಯಬೇಕು. ನಾನು ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕಿ ಆಗಿದ್ದರೂ, ನನ್ನ ಸಾಹಿತ್ಯ ಕಾರ್ಯಕ್ರಮಗಳಿಗೆ ಕರೆಯುತ್ತಿರಲಿಲ್ಲ. ಇದನ್ನು ದ್ವೇಷವೂ, ಪ್ರೀತಿಯೋ ನನಗೆ ಅರ್ಥವಾಗಲಿಲ್ಲ ಎಂದು ಶಾರದಾ ಭಟ್ ಹೇಳಿದರು. ಸಂಧ್ಯಾ ಭಟ್ ಪತ್ರಿಕಾಗೋಷ್ಠಿಯಲ್ಲಿದ್ದರು.


ಸುದ್ದಿ ಓದಿ