ಸಹರಾ ಅಲ್ಪಸಂಖ್ಯಾತರ ಸಹಕಾರ ಸಂಘ: 11,77896 ಲಕ್ಷ ನಿವ್ವಳ ಲಾಭ
ಹೂವಿನಹಡಗಲಿ 26: ಇಲ್ಲಿನ ಸಹರಾ ಅಲ್ಪಸಂಖ್ಯಾತರ ಸಹಕಾರ ಸಂಘ ಕಳೆದ ವರ್ಷದಲ್ಲಿ 3 ಕೋಟಿ ಆರ್ಥಿಕ ವಹಿವಾಟು ನಡೆಸಿ 11,77896 ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅದ್ಯಕ್ಷ ವಾರದಗೌಸ ಮೊಹಿದ್ದೀನ್ ಹೇಳಿದರು.
ಪಟ್ಟಣದ ಸಹರಾ ಅಲ್ಪಸಂಖ್ಯಾತರ ಸಹಕಾರ ಪತ್ತಿನ. ಸಂಘದ ನೂತನ ಕಟ್ಟಡದ ಲ್ಲಿ ಗುರುವಾರ ನಡೆದ 15ನೇ ವಾರ್ಷಿಕ ಸಭೆಯ ಅದ್ಯಕ್ಷ ತೆ ವಹಿಸಿ ಮಾತನಾಡಿದರು. ಸದಸ್ಯರು ಮತ್ತು ಗ್ರಾಹಕರ ಸಹಕಾರ ದಿಂದ ಲಾಭದಿಂದ ಹೊಸ ಕಟ್ಟಡ ನಿರ್ಮಾಣ ಮಾಡಿದ್ದು ಸದ್ಯದಲ್ಲೇ ನೂತನ ಕಟ್ಟಡ ಉದ್ಘಾಟನೆ ಜತೆಗೆ ಸಾಲ ಮರುಪಾವತಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬ್ಯಾಂಕ್ ನ ಉಪಾಧ್ಯಕ್ಷ ಕಮ್ಮಾರ ಪಕೃದ್ದೀನ್ ಮಾತನಾಡಿ ಬ್ಯಾಂಕ್ ನ ನಿರ್ದೇಶಕ ರ ಸಹಕಾರ ಬ್ಯಾಂಕ್ ಲಾಭ ಗಳಿಸಿದೆ ಎಂದರು. ಪುರಸಭೆ ಅದ್ಯಕ್ಷೆ ಗಂಟಿ ಜಮಾಲ್ ಬಿ, ನಿದರ್ಶಕರಾದ ಹೆಚ್.ದಾವಲಿ ಮಲ್ಲಿಕ್, ಕೆ.ಎಂ.ಸುಭಾನ್. ಕೆ.ಸೈಪುಲ್ಲಾ, ಜಿಯಾ ವುದ್ದೀನ್, ಆಶಾ ಪರ್ವೀನ್, ಎಲ್.ಅಕ್ಬರ್, ಅಕ್ಕಿ ಶಬ್ಬೀರ, ಇಂತಿಯಾಜ್, ಶೇಕ್ ಮಹಮ್ಮದ್ ಹುಸೇನ್, ಖಾಜಾಮೋದ್ದಿನ್, ಕೆ.ಮೈಮೂನ್. ಬ್ಯಾಂಕ್ ನ ವ್ಯವಸ್ಥಾಪಕ ಕೆ.ಶೇಕ್ ಷಾವಲಿಸಾಬ್ ಸಿಬ್ಬಂದಿ ಇದ್ದರು. ಇದೇ ವೇಳೆ ಮುಸ್ಲಿಂ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು