ರಾಣೆಬೆನ್ನೂರ

ಸಾಧನಾ ಪುಷ್ಠಿ ಉಚಿತ ತರಬೇತಿ ಕಾರ್ಯಾಗಾರ

ಸಾಧನಾ ಪುಷ್ಠಿ ಉಚಿತ ತರಬೇತಿ ಕಾರ್ಯಾಗಾರ

ರಾಣಿಬೆನ್ನೂರ 03: ವಿದ್ಯಾರ್ಥಿಗಳು ಸಮಯ ಹರಣ ಆಡದೆ ಅಭ್ಯಾಸ ಮಾಡಬೇಕು ಜೊತೆಗೆ ಧರ್ಮ ಹಾದಿಯಲ್ಲಿ ನಡೆದು, ನಿಸ್ವಾರ್ಥ ಸೇವೆಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ತಾಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನ ಆವರಣದಲ್ಲಿ ಪ್ರಧಾನ ಆರ್ಚಕ ಸಂತೋಷಭಟ್ಟ ನೇತೃತ್ವದಲ್ಲಿ 2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸಾಧನಾ ಪುಷ್ಠಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು, 

ಸಂತೋಷಭಟ್ಟ ಅವರು ಜಿಲ್ಲೆಯಲ್ಲಿ ನಿಸ್ವಾರ್ಥಸೇವೆಯಿಂದ ವಿದ್ಯಾರ್ಥಿಗಳ ಅನುಕೂಲತೆಗೆ ವಿಶೇಷ ಕಾರ್ಯಾಗಾರವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡು ಮುಂದಿನ ಭವಿಷ್ಯದ ಉನ್ನತ ಶಿಕ್ಷಣಕ್ಕೆ ಅಡಿಪಾಯ ಹಾಕಬೇಕು. ದೇಶದ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿ ತಾಲೂಕನ್ನು ದೇಶದಲ್ಲಿ ಬೆಳಗಬೇಕು ಎಂದರು.

ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಮಾತನಾಡಿ, ಜೀವನವೆಂಬುದು ಗಣಿತವಿದ್ದಂತೆ, ಓಳೇಯ ಗುಣಗಳೆಂಬ ಅಂಕಿಗೆ ಸಾತ್ವಿಕ ಗುಣವೆಂಬ ಅಂಕಿಯನ್ನು ಕೂಡಿಸಬೇಕು, ಕೆಟ್ಟಗುಣಗಳೆಂಬ ಅಂಕಿಯನ್ನು ಕಳೆಯಬೇಕು ಸಂಸ್ಕಾರವೆಂಬ ಅಂಕಿಯನ್ನು ಗುಣಿಸುತ್ತಾ ಹೋಗಿ ದುರ್ಗಗುಣಗಳನ್ನು ಭಾಗಿಸಿ ಉಳಿಯುವ ಶೇಷವೆ ಧರ್ಮಗುಣವಾಗಿದೆ. ಈ ತಳಹದಿಯಲ್ಲಿ ವಿದ್ಯಾರ್ಥಿಳು ಮುನ್ನಡೆಯಬೇಕು ಎಂದರು.

ಮಗುವಿನ ಸಂಸ್ಕಾರ ಗರ್ಭಧಾರಣೆಯಿಂದ ಹಿಡಿದು ಭೂಗರ್ಭಕ್ಕೆ ಹೋಗುವತನಕ ಸಂಸ್ಕಾರವಿರಬೇಕು. ಪ್ರಾಣಿ ಪಕ್ಷಿಗಳಲ್ಲಿ ನಾವು ಸಂಸ್ಕಾರವನ್ನು ಕಾಣುತ್ತೆವೆ. ಆದರೆ ಅರಿವಿನ ಜ್ಮತಾಳಿದ ಮನುಷ್ಯ ಸಂಸ್ಕಾರದಿಂದ ವಂಚಿತನಾಗಬಾರದು. ಬೇಕು ಬೇಕು ಎನ್ನುವ ಅಂಕಿಯನ್ನು ಕುಡಿಸುತ್ತಾ ಹೊದರೆ ದುಃಖವೆ ಪ್ರಾಪ್ತಿಯಾಗುತ್ತದೆ. ದುಃಖದಿಂದ ಮುಕ್ತಿ ಪಡೆಯಬೇಕಾದರೆ ಬೇಕು ಎಂಬ  ದುರಾಸೆಯ ಅಂಕಿಯನ್ನು ಕಳೆದು ಸಾಕು ಎಂಬ ಅಂಕಿಯನ್ನು ಕುಡಿಸಿದಾಗ ಲೇಕ್ಕ ಪರಿಪೂರ್ಣವಾಗುತ್ತದೆ. ಆಗ ಶಾಂತಿ ಎಂಬ ಶ್ರೇಣಿಯಿಂದ  ಜೀವನ ಗಣಿತದಲ್ಲಿ ಪಾಸಾಗಿ ಮುಕ್ತಿಯಂಬ ರ‍್ಯಾಂಕ್ ದೊರಕುತ್ತದೆ ಇದುವೆ ವಿದ್ಯಾಯಾರ್ಥಿ ಜೀವನ ಎಂದರು.

ನೇತೃತ್ವದ ವಹಿಸಿದ್ದ ಪ್ರಧಾನ ಆರ್ಚಕ ಸಂತೋಷಭಟ್ಟ ಗೂರೂಜಿ ಮಾತನಾಡಿ, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಸಾಧನೆಗೆ ಪುಷ್ಠಿ ನೀಡುದಂತಾಗುತ್ತದೆ. ನಾನು ಮಾಡುತ್ತಿರುವ ಸಮಾಜ ಸೇವೆಗೆ ಅನೇಕ ವಿಘ್ನಗಳನ್ನು ಎದುರುರಾಗುತ್ತೇವೆ ಅವುಗಳನ್ನು ಭೇದಿಸಿ ಉಸಿರು ಇರುವರಿಗೂ ಸಮಾಜ ಸೇವೆ ಮಾಡುತ್ತೇನೆ ಎಂದರು.

ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿಗಳು ಸಾನಿಧ್ಯ ವಹಿಸಿ ಮಾತನಾಡಿದರು, ಗ್ರಾಪಂ ಅಧ್ಯಕ್ಷ ಮಾಲತೇಶ ನಾಯರ, ಭಂಡಾರದ ಗುರು ಮಲ್ಲಪ್ಪಯ್ಯ ವಡೆಯರ್, ಉಪ ನಿರ್ದೇಶಕ ಅಂದಾನೆಪ್ಪ ವಡಗೇರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ, ಮಂಜುನಾಥ ಓಲೇಕಾರ, ಪವನ ದೇಸಾಯಿ, ಬಸವರಾಜ ಅರಬಗೊಂಡ, ನಿಂಗಪ್ಪ ಮುದ್ದಿ, ಪವನಕುಮಾರ ಮಲ್ಲಾಡದ, ಸಿಗಂದೂರಿನ ಧರ್ಮಧರ್ಶಿ ರವಿಕುಮಾರ, ಮಾಲತೇಶ ಸತಗಿ ಸೇರಿದಂತೆ ವಿಧ್ಯಾರ್ಥಿಗಳು ಇದ್ದರು.


ಸುದ್ದಿ ಓದಿ