ವಿಜಯಪುರ

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು : ಎಂ.ಬಿ.ಯಡ್ರಾಮಿ

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ; ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು : ಎಂ.ಬಿ.ಯಡ್ರಾಮಿ

ದೇವರಹಿಪ್ಪರಗಿ 23 : ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ತಾಲೂಕಿನಲ್ಲಿ ಯಶಸ್ವಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿರಬೇಕು ಹಾಗೂ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಎಂದು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಹೇಳಿದರು. ಪಟ್ಟಣದ ಎ.ಬಿ.ಸಾಲಕ್ಕಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದೇವರಹಿಪ್ಪರಗಿ ಹಾಗೂ ಕಲಕೇರಿ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಗುರುಗಳಿಗೆ ಸಮನ್ವಯ ಶಿಕ್ಷಣದ ಓರಿಯೆಂಟೇಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೊತೆಗೆ ಮಕ್ಕಳ ದಾಖಲಾತಿ, ಆಧಾರ್ ವೆರೀಫಿಕೇಶನ್ ಹಾಗೂ ಇಲಾಖೆಯ ಯೋಜನೆಗಳ ಸಮರ​‍್ಕ ಅನುಷ್ಟಾನದ ಕುರಿತು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಆಯ್‌.ಎಸ್‌.ಟಕ್ಕೆಯವರು ಸರ್ಕಾರದಿಂದ ಮಂಜೂರಾದ ಶಾಲಾ ಅನುದಾನ, ನಿರ್ವಹಣಾ ಅನುದಾನ, ಶೂ ಸಾಕ್ಸ್‌ ಅನುದಾನ, ಪಠ್ಯಪುಸ್ತಕಗಳ ಇಂದೀಕರಣ ನಿರ್ವಹಣೆಯ ಕುರಿತಾದ ಮಾಹಿತಿಯನ್ನು ನೀಡಿದರು. ಸಮನ್ವಯ ಶಿಕ್ಷಣದ ನಿರ್ವಹಣೆಯ ಕುರಿತು ಬಿ.ಐ.ಆರಿ​‍್ಟ ಗಳಾದ ಎ.ಎಸ್‌.ಯತ್ನಾಳ ಹಾಗೂ ಎ.ಪಿ.ಸೋನ್ಯಾಳ ಮಾಹಿತಿಯನ್ನು ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್‌.ವಾಲೀಕಾರ, ಮುಳಸಾವಳಗಿ ಹಾಗೂ ಕೋರವಾರ ಪ್ರೌಢಶಾಲೆಗಳ ಮುಖ್ಯಗುರುಗಳಾದ ಐ.ಎಸ್‌.ನರೂಣಿ, ಎಂ.ಎಸ್‌.ಸ್ಥಾವರಮಠ ಸೇರಿದಂತೆ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಮುಖ್ಯಗುರುಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ