ಎಸ್ಕೆ.ಪಿಯು ಕಾಲೇಜು ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ
ತಾಳಿಕೋಟೆ,20: ಪಟ್ಟಣದ ವೀವಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ಎಸ್.ಕೆ.ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿ ನಿಂಗಣ್ಣ ಅಮರೇಶ ಬಿರಾದಾರ ಕಲಾ ವಿಭಾಗದಲ್ಲಿ 589 ಅಂಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಕಳೆದ ಏಪ್ರೀಲ್ದಲ್ಲಿ ನಡೆದ ಪಿಯುಸಿ ದ್ವಿತೀಯ ಪರಿಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಜಕೊಂಡಿದ್ದಲ್ಲದೇ 6,7,9 ಮತ್ತು 10 ನೇ ಸ್ಥಾನ ಪಡೆದು ಜಿಲ್ಲೆಯ ಅಗ್ರ 10 ರಲ್ಲಿ 5 ಸ್ಥಾನಗಳನ್ನು ಪಡೆಯುವ ಮೂಲಕ ಸಾಧನೆಗೈದಿದ್ದಾರೆ.
ಶಿಕ್ಷಣ ವಿಭಾಗದಲ್ಲಿ ವಿದ್ಯಾರ್ಥಿ ನಿಂಗಣ್ಣ ಅಮರೇಶ ಬಿರಾದಾರ 589 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ, ರಮೇಶ ಹಣಮಂತ 584 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ, ಮೌಲಪ್ಪ ತಳವಾರ 582 ಅಂಕಗಳನ್ನು ಪಡೆದು ತೃತಿಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಪ್ರವೀಣ ವೆಂಕಟೇಶ 583 ಪ್ರಥಮ, ಶಿವರಾಜ ವಂದಗನೂರ 581 ದೀತೀಯ, ಬಸವರಜ ಗೊರಗುಂಡಗಿ ತೃತೀತ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶ್ರೇಯ ಪಟ್ಟಣಶೇಟ್ಟಿ 583 ಅಂಕಗಳನ್ನು ಪಡೆಯುವ ಮೂಲಕ ಪ್ರಥ, ರೇಣುಕಾ ಬ್ಯಾಕೋಡ 575 ದ್ವೀತಿಯ, ವನಿತಾ ಸುಬೆದಾರ 569 ತೃತೀತ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನಬಿರಸೂಲ ತಾರನಾಳ 525 ಅಂಕಗಳನ್ನು ಪಡೆದು ಪ್ರಥಮ, ಸುಮಂಗಲಾ 514 ದ್ವಿತೀಯ, ವರುಣ ಹಜೇರಿ 504 ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪಿಯು ಕಾಲೇಜಿನ ಅದ್ಯಕ್ಷ ಶಂಕ್ರಗೌಡ ಹಿಪ್ಪರಗಿ, ವೀವಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.