ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ "ಮೇ ಡೇ" ಬ್ಯಾಡಗಿ ಮೆಣಸಿನಕಾಯಿ ಕಾರ್ಮಿಕರಿಗೆ ಶುಭಾಶಯ ಕೋರಿದ ಎಸ್ಎಫ್ಐ ಕಾರ್ಯಕರ್ತರು
ಬ್ಯಾಡಗಿ 01 : ದುಡಿಯುವ ವರ್ಗದ ಏಕತಾ ದಿನವಾದ ವಿಶ್ವ ಕಾರ್ಮಿಕ ದಿನಾಚರಣೆಯ ದಿನದ ಅಂಗವಾಗಿ ನಗರದ ಮೆಣಸಿನಕಾಯಿ ಹಮಾಲಿ ಕಾರ್ಮಿಕರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕಾರ್ಯಕರ್ತರು ಶುಭಾಶಯ ಕೋರುವ ಮೂಲಕ ಆಚರಿಸಿದರು.ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡ ರಾಘು ಅಂಗಡಿ ಮಾತನಾಡಿ, ದುಡಿಯುವ ಜನರ ಏಕತಾ ದಿನವಾದ ಈ ಮೇ ಡೇಯು ಅತ್ಯಂತ ಮಹತ್ವದ ದಿನವಾಗಿದೆ. ವಿಶ್ವ ಕಾರ್ಮಿಕರ ದಿನಾಚರಣೆಯ ಹಿಂದೆ ದೊಡ್ಡ ಕ್ರಾಂತಿಕಾರಿ ಹೋರಾಟಗಳು ನಡೆದಿವೆ. ಕಾರ್ಮಿಕರ ಕ್ರಾಂತಿಯ ಭಾಗವಾಗಿಯೇ ಮೇ ಡೇ ಆಚರಣೆ ನಡೆಸಲಾಗುತ್ತದೆ.
ಸರಕಾರಗಳಿಂದ ಬರುತ್ತಿದ್ದ ಕಾರ್ಮಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್ ) ಸರಿಯಾಗಿ ನೀಡುತ್ತಿಲ್ಲ. ಅನೇಕ ಕಾರ್ಮಿಕರ ಮಕ್ಕಳಿಗೆ ಓದಲಿಕ್ಕೆ ತೊಂದರೆ ಆಗುತ್ತಿದೆ ಹಾಗೆ ಕೂಲಿ ಕಾರ್ಮಿಕರ ಸರಕಾರ ದಿಂದ ಕಿಟ್ ವಿತರಣೆ ಮಾಡುತ್ತಿಲ್ಲ. ಸರ್ಕಾರದ ಧೋರಣೆ ನೀತಿಗೆ ಧಿಕ್ಕಾರ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ವಾಪಸು ಪಡೆಯಲು ಮುಂದಾಗಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡ ಮಹೇಶ್ ಪೂಜಾರ, ಕಾರ್ಮಿಕರಾದ ಪರಮೇಶ್ ಶೇಖಪ್ಪ ತಳವಾರ, ಪ್ರಕಾಶ್ ಚತ್ರಮಠ, ಶಂಕರ್ ಅಂಗಡಿ, ನಾಗೇಶ್, ಭರಮಪ್ಪ, ಕುಮಾರ ಹಂಚಿನಮನಿ ಸೇರಿದಂತೆ ಅನೇಕ ಕಾರ್ಮಿಕರು ಪಾಲ್ಗೊಂಡಿದ್ದರು.