‘ಜಗತ್ತಿನೆಲ್ಲೆಡೆ ಸಂಚರಿಸಬೇಕಿದೆ’ ಬೇಗ ಗುಣಮುಖರಾಗಿ ವಿಜಯ್ : ಸುನಿ ಹಾರೈಕೆ
ಬೆಂಗಳೂರು, ಜೂನ್ 14: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಶೀಘ್ರ ಚೇತರಿಕೆ ಅಭಿಮಾನಿಗಳು ಸ್ಯಾಂಡಲ್ ವುಡ್ ನಟ, ನಟಿಯರು ಹಾರೈಸುತ್ತಿದ್ದಾರೆ.ನಿರ್ದೇಶಕ ಸಿಂಪಲ್ ಸುನಿ, ಬೇಗ ಗುಣಮುಖರಾಗಿ, ನಿಮ್ಮ ಸಂಚಾರ ಜಗತ್ತಿನೆಲ್ಲೆಡೆ ಸಾಗುವುದಿದೆ ಎಂದು ಟ್ವಿಟರ್ ಮೂಲಕ ಹಾರೈಸಿದ್ದಾರೆ.ಈಗಾಗಲೇ ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಅವರ ಎಲ್ಲ ಹಿತೈಷಿಗಳೂ ಬೇಗನೆ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.
ಹೆಲ್ತ್ ಬುಲೆಟಿನ್ ಬಿಡುಗಡೆ:- ಸಂಚಾರಿ ವಿಜಯ್ ಕೋಮಾ ಸ್ಥಿತಿಯಲ್ಲಿದ್ದು ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಈ ಬಗ್ಗೆ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಸಂಪೂರ್ಣ ಲೈಫ್ ಸಪೋರ್ಟ್ ನೊಂದಿಗೆ ನ್ಯೂರೋ ಐಸಿಯುನಲ್ಲಿ ವಿಜಯ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಭನ್ನೇರುಘಟ್ಟದ ರಸ್ತೆಯ ಅಪೋಲೋ ಆಸ್ಪತ್ರೆ ಮಾಹಿತಿ ನೀಡಿದೆ. ಜೂನ್ 13 ರಂದು ರಾತ್ರಿ 11.45 ವೇಳೆಗೆ ರಸ್ತೆ ಅಪಘಾತಕ್ಕೆ ಒಳಗಾದ ವಿಜಯ್ ಅವರನ್ನು ತಕ್ಷಣವೇ ಭನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನ ಸಿ.ಟಿ. ಸ್ಕ್ಯಾನ್ ಮಾಡಿದಾಗ ಮೆದುಳಿಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಮೆದುಳಿನ ರಕ್ತಸ್ರಾವವನ್ನು ತಡೆಯಲು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲಾಯಿತು. ಕೋಮಾ ಸ್ಥತಿಯಲ್ಲೇ ಮುಂದುವರಿದಿದ್ದಾರೆ. ಅವರ ಆರೋಗ್ಯದ ಸ್ಥಿತಿಗತಿ ಕುರಿತು ನಿಗಾ ವಹಿಸಿದ್ದೇವೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲಿ ವಿವರಿಸಲಾಗಿದೆ.