ವಿವೇಕಾನಂದರು ಭಾರತದ ಯುವಕರ ಪ್ರೇರಕ ಶಕ್ತಿ: ಎಸ್. ಎ. ತಾಂಬೆ
ರಾಣೇಬೆನ್ನೂರು.ಜ.13: ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಯುವ ಜನರ ಪ್ರೇರಕ ಶಕ್ತಿ, ಸ್ಪೂರ್ತಿದಾಯಕ ವ್ಯಕ್ತಿತ್ವ, ತ್ಯಾಗ, ಪರಿಶ್ರಮ, ಮೌಲ್ಯಯುತ ವಿಚಾರದಾರೆಗಳನ್ನು ಈ ನಾಡಿಗೆ ಅರ್ಪಿಸಿದ್ದಾರೆ ಅವರ ವ್ಯಕ್ತಿತ್ವವನ್ನು ಯುವಕರು ಅಳವಡಿಸಿಕೊಂಡು ಅವರಂತೆ ಸಾಧನೆ ಮಾಡಲು ಮುಂದಾಗಬೇಕು. ದೇಶ ಪ್ರೇಮವನ್ನು ನಾಡಿನಾದ್ಯಾಂತ ಪಸರಿಸಿ ರಾಷ್ಟ್ರೀಯತೆ ಬೆಳೆಸಬೇಕೆಂದರು.
ಬಿ.ಎ.ಜೆ.ಎಸ್.ಎಸ್ ಕಾಲೇಜು ಪ್ರಾಚಾರ್ಯ ಎಸ್.ಎ. ತಾಂಬೆ ಹೇಳಿದರು. ಕಾಲೇಜು ಭವನದಲ್ಲಿ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159 ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವೇದಿಕೆಯಲ್ಲಿ ಯು.ಬಿ.ಮಾಳೇನಹಳ್ಳಿ, ಚಂದ್ರಶೇಖರ ಎಮ್.ಕೆ, ದೇವರಾಜ ಹಂಚಿನಮನೆ, ಪುಪ್ಷಾಂಜಲಿ ಕಾಂಬಳೆ, ಸಂತೋಷ ಭಜಂತ್ರಿ, ಸುರೇಶ ಬಣಕಾರ,ಆರ್.ಬಿ ಬಣಕಾರ, ರಾಜೀವ್ಎಮ್, ಸವಿತಾ ನಲ್ಲಿಕೊಪ್ಪ ಸೇರಿದಂತೆ ಮತ್ತಿತರ ಗಣ್ಯರು ಉಪನ್ಯಾಸಕರು ಉಪಸ್ಥಿತರಿದ್ದರು.