ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ
ಬ್ಯಾಡಗಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ಮಾಡಲಾಯಿತು.ಗ್ರಾ.ಪಂ.ನೂತನ ಅಧ್ಯಕ್ಷ ನಾಗರಾಜ ಉಜನಿ ಮಾತನಾಡಿ, ಕದರಮಂಡಲಗಿ ಗ್ರಾಮದಲ್ಲಿ ಕೇವಲ ಒಂದು ದಿನದ ಅಭಿಯಾನವನ್ನು ಮಾಡಿದ್ದು ಒಟ್ಟು 55 ಸಾವಿರ ರೂಪಾಯಿ ಸಂಗ್ರಹವಾಗಿದೆ ಎಂದರು.ಉಪಾಧ್ಯಕ್ಷ ಭೀಮಪ್ಪ ನಾಯ್ಕರ್, ಸದಸ್ಯರಾದ ಶಶಿಕಲಾ ಚಕ್ರಸಾಲಿ, ಫಕ್ಕೀರಪ್ಪ ಗುಳೇದ, ವನಿತಾ ಓಲೇಕಾರ, ಶಿವಗಂಗವ್ವ ಕಾಯ್ಕದ, ತುಳಸವ್ವ ಕಾಳೇರ, ಪ್ರಕಾಶ ಅಜ್ಜಮ್ಮನವರ, ಮಂಜುಳಾ ನಾಯ್ಕರ, ರೇಣುಕಾ ನಾಯ್ಕರ, ರವಿ ಬಿದರಿ, ಚೌಡವ್ವ ಗಾದಾರಿ, ಸುನಂದಾ ಅಜ್ಜಮ್ಮನವರ, ಯಲ್ಲಪ್ಪ ಅಜ್ಜಮ್ಮನವರ, ಶೇಖಪ್ಪ ದಾನಣ್ಣನವರ ಮಾಲತೇಶ ಬಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.