ನಿಯಮ ಉಲ್ಲಘನೆ ಆರೋಗ್ಯಕರ ಜೀವನಕ್ಕೆ ಹಾನಿಕರ
ಶಿಗ್ಗಾವಿ 13 : ಲಾಕ್ ಡೌನ್ ಸಡಿಲಗೂಂಡಿದೆ ಎಂದು ಸರ್ಕಾರದ ನಿಯಮ ಉಲ್ಲಂಘಿಸಿಸದಿರಿ ಸಾರ್ವಜನಿಕರು ಲಾಕ್ಡೌನ್ ಸಡಿಲಗೊಂಡಿದೆ ತಕ್ಷಣ ಬೇಕಾಬಿಟ್ಟಿ ಅಡ್ಡಾಡುವದು ನಿಯಮ ಉಲ್ಲಘನೆ ಮಾಡುವುದು ನಮ್ಮ ಆರೋಗ್ಯಕರ ಜೀವನಕ್ಕೆ ಕುತ್ತು ತರಬಹುದು ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರೂಂದಿಗೆ ಮಾತನಾಡಿ ಕೋವಿಡ್ 19 ಸಂಪೂರ್ಣವಾಗಿ ನಿರ್ಣಾಮವಾಗಿಲ್ಲ ಅನೇಕ ಕುಂಟುಂಬಗಳು ಹಿರಿಯರನ್ನು ಹಾಗೂ ಮಕ್ಕಳನ್ನು ಬಂಧುಬಾಂಧವರನ್ನು ಕಳೆದುಕೊಂಡು ನೋವಿನ ಮಡುವಿನಲ್ಲಿದ್ದಾರೆ.ಈ ಸೋಂಕು ಯಾರಿಗೆ ಯಾವಾಗ ಹೇಗೆ ಆವರಿಸುತ್ತದೆ ಏನು ಮಾಡುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಲಕ್ಷಣಗಳನ್ನು ಈಗಾಗಲೇ ತಜ್ಞ ವೈಧ್ಯರು ತಿಳಸಿದ್ದಾರೆ ಕಾರಣ ನಾವು ಆದಷ್ಟೂ ಜಾಗೃತರಾಗಿ ಸಾಮಾಜಿಕ ಅಂತರ ಮಾಸ್ಕ ಧರಿಸುವದು ಸಾನಿಟೈಜರ ಉಪಯೋಗಿಸುವದು ಸ್ವಚ್ಚತೆ ಕಾಪಾಡಿಕೊಳ್ಳವುದು 18 ವರ್ಷ ಮೆಲ್ಪಟ್ಟವರು ತಕ್ಷಣ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡು ಸೋಂಕು ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳೋಣ ಎಂದರು.
ನಾವೆಲ್ಲರೂ ಸೋಂಕಿನೂಂದಿಗೆ ಬದುಕುವ ಕಾಲ ಬಂದಿದೆ ಆದಕಾರಣ ಅಲಕ್ಷ್ಯ ಮಾಡದಿರಿ ನಿಯಮ ಮರೆಯದಿರಿ ಕಣ್ಣಿಗೆ ಕಾಣದ ಕೈಗೆ ಸಿಗದೇ ಯಾವ ಸಂದರ್ಭದಲ್ಲಿ ಯಾವ ರೂಪವಿಲ್ಲದೆ ನಮ್ಮನ್ನು ಆವರಿಸುತ್ತದೆ ಎಂಬುವುದು ಯಾರಿಗೂ ತಿಳಿಯದಾಗಿದೆ ಕಾರಣ ಸಾರ್ವಜನಿಕರು ನಿಯಮ ಪಾಲನೆಯೊಂದಿಗೆ ನಮ್ಮ ದಿನ ನಿತ್ಯದ ಕಾಯಕದಲ್ಲಿ ಬದುಕೋಣ ಎಂದು ವಿನಂತಿಸಿದರು.