ಜನರ ಜೊತೆ ಅಸಭ್ಯ ವರ್ತನೆ : ಸರಿ ಸಿಲಿಂಡರ್ ಸರಬರಾಜು ಮಾಡದ ವಾಹನ ಚಾಲಕನಿಗೆ ಥಳಿತ

ಜನರ ಜೊತೆ ಅಸಭ್ಯ ವರ್ತನೆ : ಸರಿ ಸಿಲಿಂಡರ್ ಸರಬರಾಜು ಮಾಡದ ವಾಹನ ಚಾಲಕನಿಗೆ ಥಳಿತ

ಸಂಕೇಶ್ವರ : ಸಿಲಿಂಡರ್ ಗ್ಯಾಸ್ ಬುಕ್ ಮಾಡಿ ಹಲವು ದಿನಗಳು ಕಳೆದು ಓಟಿಪಿ ಬಂದರು ಗ್ರಾಹಕರಿಗೆ ಸರಿಯಾಗಿ ಸಮಯಕ್ಕೆ ಸಿಲಿಂಡರ್ ಕೊಡದೆ ಸತಾಯಿಸುತ್ತಿದ್ದ ಸಿಲಿಂಡರ್ ಸರಬರಾಜು ವಾಹನ ಚಾಲಕನನ್ನು ನಾಗರಿಕರು ಥಳಿಸಿದ ಘಟನೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ  ನಡೆದಿರುವದು ವರದಿಯಾಗಿದೆ. 

      ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಗ್ರಾಹಕರೊಬ್ಬರು ತಾವು ಸಿಲಿಂಡರ್ ಗ್ಯಾಸ್ ಗಾಗಿ ಬುಕ್ ಮಾಡಿದ್ದು, ತಮಗೆ ಓಟಿಪಿ ಬಂದಿದೆ. ತಮಗೆ ಸಿಲಿಂಡರ್ ನೀಡುವಂತೆ ಸರಬರಾಜು ಮಾಡುವ ವಾಹನ ಚಾಲಕನಿಗೆ ಕೇಳಿದ್ದಾರೆ. 

    ಆದರೆ ನಿಮ್ಮ ಸಿಲಿಂಡರ್ ಇನ್ನು ಬಂದಿಲ್ಲ. ಇನ್ನು ನಾಲ್ಕೈದು ದಿನ ಆಗುತ್ತದೆ ಎಂದು ದರ್ಪದಿಂದ ಹಾಗೂ ಅಸಭ್ಯ ವಾಗಿ ಚಾಲಕ ಗ್ರಾಹಕರಿಗೆ ಹಾರಿಕೆ ಉತ್ತರ ನೀಡಿದ್ದಾನೆ. ಇದರಿಂದ ವಾಗ್ವಾದ ನಡೆದು‌ ಕೆಲವು ಗ್ರಾಮಸ್ಥರು ಚಾಲಕನಿಗೆ ಚಳಿ ಬಿಡಿಸಿದ್ದಾರೆ ಎಂದು ತಿಳಿದು ಬಂದಿದೆ. 

     ಗ್ರಾಹಕರಿಗೆ ಓಟಿಪಿ ಬಂದಿದ್ದರೂ ಸಿಲಿಂಡರ್ ಸರಬರಾಜು ವಾಹನ ಚಾಲಕರು ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಸಿಲಿಂಡರ್ ವಿತರಣೆ ಮಾಡದೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಿಕೊಳ್ಖುತ್ತಿದ್ದಾರೆ ಎನ್ನು ಮಾತು ಕೇಳಿ ಬರತಾ ಇದೆ. 

ಸುದ್ದಿ ಓದಿ