ರೋಟರಿ ಇನ್ನರ್ವಿಲ್ ಕ್ಲಬ್ ಪದಗ್ರಹಣ ಸಮಾರಂಭ
ಬ್ಯಾಡಗಿ 15: ಬ್ಯಾಡಗಿಯಲ್ಲಿ ರೋಟರಿ ಇನ್ನರ್ವಿಲ್ ಕ್ಲಬ್ ಪದಗ್ರಹಣ ಸಮಾರಂಭವು ನಡೆಯಿತು. ರವಿವಾರ ಪಟ್ಟಣದ ಬಿಇಎಸ್ ಕಾಲೇಜ ಸಭಾಭವನದಲ್ಲಿ ಸ್ಥಳೀಯ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ 2024 -25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಸಮಾರಂಭದಲ್ಲಿ ರೋಟರಿ ಗವರ್ನರ್ ಡಾ. ಲೆನ್ನಿ ಕೋಸ್ಟಾ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಮಾಡಿಸಿದರು.
ಎಸ್ ಎಂ ಬೂದಿಹಾಮಠ ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿ ನಿರಂಜನ ಶೆಟ್ಟಿಹಳ್ಳಿ ಕಾರ್ಯದರ್ಶಿಯಾಗಿ ಮತ್ತು ಇನ್ನರ್ವಿಲ್ ಕ್ಲಬ್ಬಿನ ಕವಿತಾ ಸೊಪ್ಪಿನಮಠ ಅಧ್ಯಕ್ಷರಾಗಿ ರೂಪಾ ಕಡೆಕೊಪ್ಪ ಕಾರ್ಯದರ್ಶಿಯಾಗಿ ಅಧಿಕಾರಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಸಹನಾ ಪೈಕೋಟಿ, ಡಾ. ಬಸವರಾಜ್ ಕೆಲಗಾರ,ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್ ಹೊಳಿಯಪ್ಪಗೋಳ,ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಬಸವರಾಜ ಸುಂಕಾಪುರ,ಸುರೇಶ ಗೌಡರ, ಜೆ ಎಚ್ ಪಾಟೀಲ, ಅನಿಲಕುಮಾರ ಬೊಡ್ಡಪಾಟಿ, ಮಾಲತೇಶ ಉಪ್ಪಾರ ಯೂನಿವರ್ಸಿಟಿ ಸಿಂಡಿಕೇಟ್ ಸದಸ್ಯಎಸ್ ಜಿ ವೈದ್ಯ, ಡಾ. ರಾಜೇಶ್ವರಿ ಚನ್ನಗೌಡ್ರ, ಸತೀಶಗೌಡ ಮಲ್ಲನಗೌಡ ಸೇರಿದಂತೆ ಇತರರಿದ್ದರು.