ರೋಟರಿ ಕ್ಲಬ್ ಜಗತ್ತಿನ ಅತಿ ದೊಡ್ಡ ಸೇವಾ ಸಂಸ್ಥೆ
ತಾಳಿಕೋಟೆ29: 200ಕ್ಕಿಂತ ಹೆಚ್ಚು ದೇಶಗಳಲ್ಲಿ 50ಸಾವಿರ ಕ್ಲಬ್ ಹಾಗೂ 1.22 ಮಿಲಿಯನ್ ಸದಸ್ಯತ್ವ ಹೊಂದಿರುವ ರೋಟರಿ ಜಗತ್ತಿನ ಬಹುದೊಡ್ಡ ಸೇವಾ ಸಂಸ್ಥೆಯಾಗಿದೆ ಎಂದು ವಿಜಯಪುರ ರೋಟರಿ ಕ್ಲಬ್ನ ಅಸಿಸ್ಟಂಟ ಗವರ್ನರ್ ಡಾ.ಅಶೋಕ ವಾಲಿ ಹೇಳಿದರು.
ಪಟ್ಟಣದ ರೋಟರಿ ಕ್ಲಬï ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಪಟ್ಟಣದ ಜನತೆ ಬಹು ದೊಡ್ಡ ದಾನಿಗಳಾಗಿದ್ದಾರೆ ಎಂದು ಶ್ಲಾಘಿಸಿದ ಅವರು ಕೊರೊನಾ ಸಂಕಟದಲ್ಲೂ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಅಶೋಕ ಬಳಗಾನೂರ ಮಾತನಾಡಿ, ತಾಳಿಕೋಟೆ ರೋಟರಿ ವತಿಯಿಂದ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ 40 ಸಾವಿರ ಎಸ್.ಎಸ್.ಎಲ್ಸಿ ಮಕ್ಕಳಿಗೆ 350 ಮುಖಬೆಲೆಯ ಇಂಗ್ಲೀಷ್, ವಿಜ್ಞಾನ, ಗಣಿತ ಪಠ್ಯದ ವಿದ್ಯಾಸೇತು ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ನಿಕಟಪೂರ್ವ ಅಧ್ಯಕ್ಷ ಡಾ.ಎ.ಎ.ನಾಲಬಂದ ವರದಿ ವಾಚಿಸಿದರು. ನೂತನ ಅಧ್ಯಕ್ಷರಾಗಿ ಚಿನ್ನನಗೌಡ ಮಾಳಿ, ಕಾರ್ಯದರ್ಶಿಯಾಗಿ ಶ್ಯಾಮ ಹಂಚಾಟೆ ಪದ ಗ್ರಹಣ ಮಾಡಿದರು., ಖಜಾಂಚಿಯಾಗಿ ಪ್ರದೀಪ ಸಜ್ಜನ ಅಧಿಕಾರ ಸ್ವಿಕರಿಸಿದರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಎ.ಎ.ನಾಲಬಂದ, ನಿಕಟಪೂರ್ವ ಖಜಾಂಚಿ ಗುರುರಾಜ ತಾಳಪಲ್ಲೆ, ಗವರ್ನರ್ ಸ್ಪೇಶಲ್ ರೆಪ್ರೆಸೆಂಟೇಟಿವ್ ಸುಧಿರ ಪವಾರ ಇದ್ದರು.
ಶ್ರೀಕಾಂತ ಪತ್ತಾರ ನಿರೂಪಿಸಿದರು. ನೂತನ ಪದಾಧಿಕಾರಿಗಳನ್ನು ಅಭಿಮಾನಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ರೋಟರಿಯನ್ನಗಳಾದ ಡಾ.ವಿ.ಎಸ್.ಕಾರ್ಚಿ, ಡಾ.ಆನಂದ ಭಟ್ಟ, ಎಂ.ಆರ್.ಕತ್ತಿ, ಅಶೋಕ ಬಳಗಾನೂರ,ಎಂ.ಎಸ್.ಸರಶೆಟ್ಟಿ, ಪ್ರಭುಗೌಡ ಮದರಕಲ್ಲ, ಎಂ.ಬಿ.ಮಡಿವಾಳರ, ಶ್ರೀನಿವಾಸ ಸೋನಾರ, ಘನಶ್ಯಾಮ ಚವಾಣ, ಪ್ರಮುಖರಾದ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ, ಎಂ.ಜಿ.ಪಾಟೀಲ ಗುಂಡಕನಾಳ, ಸಿದ್ದನಗೌಡ ನಾವದಗಿ, ಜಿ.ಎಸ್.ಕಶೆಟ್ಟಿ ಶ್ರೀಕಾಂತ ಪತ್ತಾರ, ವಿಜಯಪುರ ರೋಟರಿ ಕ್ಲಬ್ನ ಸದಸ್ಯರು, ಸ್ಥಳೀಯ ಮಹಿಳಾ ಘಟಕದ ರೋಟರಿಯನ್ ಸದಸ್ಯೆಯರು ಇದ್ದರು.