ಮೃತ್ಯುಕೂಪಕ್ಕೆ ಆಹ್ವಾನಿಸುತ್ತಿರುವ ರಸ್ತೆ ಗುಂಡಿಗಳು
ತಾಳಿಕೋಟಿ 01: ಅಂಬಳನೂರ ಗ್ರಾಮದಿಂದ ಹಂಚಲಿಯವರೆಗೆ ಸಂಚರಿಸುವ ಉದ್ದಕ್ಕೂ ಅಲ್ಲಲ್ಲಿ ಮಾರುದ್ದ ಗುಂಡಿಗಳು ಬಿದ್ದು ರಸ್ತೆ ಹಾಳಾಗಿ ವಾಹನ ಸವಾರರನ್ನು ಮೃತ್ಯುಕೂಪಕ್ಕೆ ಆಹ್ವಾನಿಸುತ್ತಿದೆ. ಇದರಿಂದ ಪರದಾಡುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಳಿಕೋಟಿ-ದೇವರಹಿಪ್ಪರಗಿ ಮುಖ್ಯ ರಸ್ತೆಯ ಮದ್ಯದಲ್ಲಿರುವ ಅಂಬಳನೂರ ಗ್ರಾಮದಿಂದ ಹಂಚಲಿಯ ವರೆಗಿನ 2 ಕಿ. ಮೀ ದವರೆಗಿನ ಕೂಡು ರಸ್ತೆ ಹಾಳಾಗಿ ಹೋಗಿ ವರ್ಷಗಳೇ ಕಳೆದಿವೆ. ರಸ್ತೆಯ ಮದ್ಯದಲ್ಲಿ ಅಲ್ಲಲ್ಲಿ ತೆಗ್ಗು ದಿನ್ನಿ ಗುಂಡಿಗಳಿವೆ, ಮಳೆಗಾಲ ಆರಂಭವಾಗಿರುವುದರಿಂದ ನಿರಂತರ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತು ಸಂಚಾರ ದುಸ್ತರವಾಗಿ ಹೋಗಿದೆ. ಈ ಮಧ್ಯ ರಸ್ತೆಯ ಮೂಲಕ ಸಾವಿರಾರೂ ದ್ವಿ ಚಕ್ರ ವಾಹನಗಳು, ಹತ್ತಾರೂ ಶಾಲಾ ಕಾಲೇಜು ವಾಹನಗಳು ಖಾಸಗಿ ಹಾಗೂ ಸರಕಾರಿ ಬಸ್ಗಳು ಓಡಾಡುತ್ತವೆ. ಕನಿಷ್ಟ ಪಕ್ಷ ತಗ್ಗು-ಗುಂಡಿಗಳನ್ನು ದುರಸ್ತಿಯನ್ನಾದರೂ ಮಾಡಿದರೆ ಸಂಚಾರ ಸುಗಮವಾಗಬಹುದಾಗಿದೆ.
ಈ ಭಾಗದ ಶಾಸಕರು ಬಂದ ಮೇಲೆಯೆ ತಾಳಿಕೋಟಿ-ದೇ.ಹಿಪ್ಪರಗಿ ಮುಖ್ಯ ರಸ್ತೆ ಉತ್ತಮ ರೀತಿಯಲ್ಲಿ ನಿರ್ಮಾಣವಾಗಿದೆ. ಉಳಿದುಹೋದ ಈ ಕೆಟ್ಟ ರಸ್ತೆಯನ್ನು ನಿರ್ಮಿಸುತ್ತೀಲ್ಲ ಎಂದು ಗ್ರಾಮಸ್ಥರು ಮಾತನಾಡುತ್ತೀದ್ದಾರೆ. ಆದಷ್ಟು ಬೇಗ ಸಂಬಂಧಿಸಿದ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಈ ರಸ್ತೆ ನಿರ್ಮಿಸಿ ಕೊಟ್ಟರೆ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗುತ್ತದೆ.
ಅಂಬಳನೂರದಿಂದ-ಹಂಚಲಿಯವರೆಗಿನ ರಸ್ತೆ ಹಾಳಾಗಿ ತಗ್ಗು-ದಿನ್ನಿ-ಗುಂಡಿಗಳು ಬಿದ್ದಿವೆ ಶಾಲಾ ಮಕ್ಕಳ ವಾಹನಗಳು ಬಸ್ಸುಗಳು ಹಾಗೂ ದ್ವಿ-ಚಕ್ರ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಬಂದಿದೆ, ಈ ರಸ್ತೆಯ ಮೂಲಕವೇ ಹಲವಾರೂ ಬಾರಿ ಹಾದು ಹೋದ ಈ ಭಾಗದ ಶಾಸಕರ ಗಮನಕ್ಕೆ ಬರುತ್ತೀಲ್ಲವೆಂಬುದು ಬೇಸರದ ಸಂಗತಿ.
-ಬಸವರಾಜ ವಾಹನ ಸವಾರ