ಚಿಕ್ಕೋಡಿ

ಬಸ್ ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬಸ್ ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಚಿಕ್ಕೋಡಿ 27: ತಾಲೂಕಿನ ಸದಲಗಾ ಪಟ್ಟಣದಲ್ಲಿನ ಸದಲಗಾ-ಧಾನವಾಡ ಕೂಡು ರಸ್ತೆಯ ಹತ್ತಿರದ ರತ್ನಪ್ಪನ್ನಾ ಕುಂಬಾರ ವೃತ್ತ ದಿಂದ ಬಸ್ ನಿಲ್ದಾಣದವರೆಗಿನ ರಸ್ತೆ ಸುಧಾರಣೆಗೆ 5 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.  

ತಾಲೂಕಿನ ಸದಲಗಾ ಪಟ್ಟಣದ ರತ್ನಪ್ಪನ್ನಾ ಕುಂಬಾರ ವೃತ್ತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸದಲಗಾ ಪಟ್ಟಣದ ಸವಾಂಗೀನ ಅಭಿವೃದ್ಧಿಗೆ ನಾನು ಮತ್ತು ಶಾಸಕ ಗಣೇಶ ಹುಕ್ಕೇರಿಯವರು ಶ್ರಮಿಸುತ್ತಿದ್ದು, ಸದಲಗಾ ಪಟ್ಟಣದ ಸಾರ್ವಜನಿಕರ ಬೇಡಿಕೆಯ ಅನುಗುನವಾಗಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರ ಹಾಗೂ ರೈತರ ಅನೂಕೂಲಕ್ಕಾಗಿ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಗಣೇಶ ಹುಕ್ಕೇರಿಯವರು ಮಾತನಾಡಿ ರತ್ನಪ್ಪನ್ನಾ ಕುಂಬಾರ ವೃತ್ತ ದಿಂದ ಬಸ್ ನಿಲ್ದಾಣದವರೆಗೆ 7 ಮೀಟರ ರಸ್ತೆ ಅಗಲಿಕರಣ ಮತ್ತು ಡಾಂಬರಿಕರಣ, ಎರಡು ಬದಿಗೆ 2 ಮೀಟರ ಪಾದಚಾರಿ ರಸ್ತೆ (ಫುಟ್ಪಾಥ್) ಹಾಗೂ ಬ್ಯಾರಿಕೇಡ ಅಳವಡಿಸಲು 5 ಕೋಟಿ ರೂ ಅನುದಾನ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿದೆ ಎಂದ ಈ ರಸ್ತೆಯ ಮಾರ್ಗದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜುಗಳಿದ್ದು, ಈ ರಸ್ತೆಯ ಮಾರ್ಗವಾಗಿ ವಾಹನ ಸಂಚಾರ ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾದಚಾರಿ ರಸ್ತೆ ಮತ್ತು ಬ್ಯಾರಿಕೇಡ ಅಳವಡಿಸುವಂತೆ ಗ್ರಾಮಸ್ಥರ ಬೇಡಿಕೆಯಿತ್ತು, ಈ ರಸ್ತೆ ನಿರ್ಮಾಣದಿಂದ ವಿದ್ಯಾರ್ಥಿಗಳಿಳೆ, ಸಾರ್ವಜನಿಕರಿಗೆ ಮತ್ತು ವಾಹಹನಗಳ ಸುಗಮ ಸಂಚಾರಕ್ಕೆ ಅನೂಕೂಲವಾಗಲಿದೆ ಎಂದು ಹೇಳಿದರು.     

ಮಾಜಿ ಜಿಪಂ ಸದಸ್ಯರಾದ ಅಣ್ಣಾಸಾಹೇಬ ಹವಲೆ ಮತ್ತು ಸುದರ್ಶನ್ ಖೋತ, ಬಸವರಾಜ ಗುಂಡಕಲ್ಲೆ, ಸುಹಾಸ ವಾಳಕೆ, ಪೀರಗೌಡಾ ಪಾಟೀಲ, ಚಂದ್ರಕಾಂತ ಪಾಟೀಲ, ಉದಯ ಬದನಿಕಾಯಿ, ಮುನ್ನಾ ಪಾಟೀಲ, ಮೆಹಬೂಬ ಕಾಲೆ, ಸಂತೋಷ ನವಲೆ,ಸತೀಶ ಪಟೀಲ, ರಾವಸಾಬ ಮೇಲಳೆ, ದೀಲಿಪ ಅನೂರೆ, ಅಜರುದ್ದಿ ಶೇಖಜಿ, ಮುಸಾ ಅಪರಾಜ, ಮಹಾದೇವ ಮಧಾಳೆ ಸೇರಿದಂತೆ ಪಟ್ಠಣದ ಮುಖಂಡರು, ಪುರಸಭೆಯ ಸದಸ್ಯರು, ಸಾರ್ವಜನಿಕರು, ರೈತರು. ಉಪಸ್ಥಿತರಿದ್ದರು. 


ಸುದ್ದಿ ಓದಿ