ಶ್ರೀಶೈಲಕ್ಕೆ ಪಾದಯಾತ್ರೆಗೆ ರೇವಣಸಿದ್ದೇಶ್ವರ ಸ್ವಾಮೀಜಿ ಚಾಲನೆ
ಲೋಕದರ್ಶನ ವರದಿ
ಯರಗಟ್ಟಿ 08: ಜೀವನದಲ್ಲಿ ಪಾಪ ಕಳೆದುಕೊಳ್ಳಲು ಪ್ರತಿಯೊಬ್ಬರೂ ಶಿವನ ಅನುಗ್ರಹಕ್ಕೆ ಪಾದಯಾತ್ರೆ ಕೈಗೊಳ್ಳಬೇಕು ಎಂದು ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಸತ್ತಿಗೇರಿ, ಸೊಪ್ಪಡ್ಲ, ತೋರಣಗಟ್ಟಿ, ಕೊರಕೊಪ್ಪ ಗ್ರಾಮಗಳಿಂದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸಮಿತಿ ನೇತೃತ್ವದಲ್ಲಿ ಭಕ್ತರು ಸೋಮವಾರ ಆಂಧ್ರ ಪ್ರದೇಶದ ಶ್ರೀಶೈಲ ಶ್ರೀಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲು ಹಮ್ಮಿಕೊಂಡಿದ್ದ 21ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರು ನಿತ್ಯ ಶಿವನನ್ನು ಸ್ಮರಿಸಬೇಕು. ದುಶ್ಚಟಗಳಿಂದ ದೂರವಿರಲು ಪ್ರಯತ್ನಿಸಬೇಕು. ಸಂಸ್ಕೃತಿ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಭಕ್ತರು ಕೈಗೊಂಡಿರುವ ಪಾದಯಾತ್ರೆ ಉತ್ತಮವಾಗಿ ಸಾಗಲಿ ಎಂದು ಹಾರೈಸಿದರು.
ಕೊರಕೊಪ್ಪ ಗ್ರಾಮದ ಶ್ರೀಶೈಲ ಮಲ್ಲಿಕಾಜರ್ುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ. ಭಕ್ತರ ಮನೆಗೆ ತೆರಳಿ ಪ್ರಸಾದ ಸ್ವಿಕರಿಸಿದರು. ಮಾರ್ಗದುದ್ದಕ್ಕೂ ಊಟ ಉಪಚಾರ ವಸತಿ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ. 22ರಂದು ಯುಗಾದಿ ಪಾಡ್ಯೆಯಂದು ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೋಂಡು ಹಿಂದಿರುಗುವದಾಗಿ ತಿಳಿಸಿದರು.
ಪಾದಯಾತ್ರೆಯಲ್ಲಿ ಶಿವ ಭಜನೆ ಮಾಡುತ್ತಾ ಲೋಕಾಪೂರ, ಗದ್ದನಕೇರಿ, ತುಳಸೀಗೇರಿ, ಮುದಗಲ್ಲ, ಸುಲ್ತಾನಪೂರ, ತುಂಗಭದ್ರಾ ನದಿ, ದಾಟಿ, ಆಂದ್ರಪ್ರದೇಶಕ್ಕೆ ಪ್ರವೇಶ ಕೂಸಗಿ, ಮಾರ್ಗವಾಗಿ, ನಂದಾವರಂ, ಕನರ್ುಲ್, ಮುಖ್ಯ ರಸ್ತೆ ಮೂಲಕ ಬ್ರಹ್ಮಣ ಕೊಟ್ಟುರ, ಜೂವಾಡ ಮಾರ್ಗವಾಗಿ ಆತ್ಮಕುರಂ, ಹೇಮ್ಮರಡ್ಡಿ, ಮಲ್ಲಮ್ಮನ ವರರೂರು ಶಿದ್ದಾಪೂರ, ಮಾರ್ಗವಾಗಿ ಗಂಗನಪಾಳ್ಯ, ಕೈಲಾಸಬಾಗಿಲದಿಂದ ಸ್ವಂತದಾನದರ್ಮ ಬಿರುದಾವಳಿ ಹಾಕಿ ಅಡಿಕೇಶ್ವರ ಸಾಕ್ಷಿ, ಶ್ರೀ ಗಣೇಶನ ದರ್ಶನ ಪಡೆದು ಶ್ರೀಶೈಲ ತಲುಪಲಿದ್ದಾರೆ. ಪಾದಯಾತ್ರೆ ಭಕ್ತರಿಗೆ ಮುಖಂಡ ಸೋಮನಗೌಡ ಪಾಟೀಲ, ಅಶೋಕ ನಂದಿ, ಬಾಳಪ್ಪ ಚಂದರಗಿ, ಬಸನಗೌಡ ಪಾಟೀಲ, ಈರಣ್ಣಾ ಬಿ.ಗೌಡರ, ಪರಪ್ಪ ಶಿಂಗಾರಗೊಪ್ಪ, ಬಾಳೇಶ ಪಡನ್ನವರ, ಪ್ರಜ್ವಲ್ ಬಿ.ಗೌಡರ, ಭೀಮಶಿ ಇಟಗೌಡರ, ಬಸವಂತ ಪಾಟೀಲ, ಕಲ್ಲಪ್ಪ ಶಿಂಗಾರಗೊಪ್ಪ, ವಿಲಾಸರಾವ ತುಪ್ಪದ ಸೇರಿದಂತೆ ಇತರರು ಇದ್ದರು