ನಿವೃತ್ತಿ: ಬಿ.ಎಸ್ ಪಟೇದ ಬೀಳ್ಕೊಡುಗೆ
ಇಂಡಿ 04: ಯೋಗ ಮತ್ತು ಯೋಗ್ಯತೆ ಇದ್ದಾಗ ಮಾತ್ರ ನೀರೀಕ್ಷಿತ ಗುರಿಯನ್ನು ಯಶಸ್ವಿಯಾಗಿ ತಲುಪಲು ಸಾಧ್ಯವಾಗುತ್ತದೆ ಬಿ.ಎಸ್ ಪಟೇದ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆಯ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೃತ್ತಿ ಜೀವನದಲ್ಲಿ ಸರಕಾರಿ ಸೇವೆಗೆ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಿದ್ದೇನೆ. ಪ್ರಾಚಾರ್ಯ ಹುದ್ದೆ ಜವಾಬ್ದಾರಿಯಿಂದ ಸವಾಲಾಗಿ ಸ್ವೀಕರಿಸಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ ಎಂದರು.
ಉಪನ್ಯಾಸಕನಾಗಿ ವಿದ್ಯಾರ್ಥಿಗಳಿಗೆ ಬೋಧನೆ ನೀಡಿರುವದು ಅತೀವ ಸಂತಸ ತಂದಿದೆ. ಸೇವಾ ಅವಧಿಯಲ್ಲಿ ನನಗೆ ಎಲ್ಲ ಉಪನ್ಯಾಸಕರ ವರ್ಗ ಸಿಬ್ಬಂದಿಗಳು ಸಹಕಾರ ಮಾಡಿದ್ದಾರೆ. ಒಬ್ಬ ವಿಧ್ಯಾರ್ಥಿ ನಮಗಿಂತ ಉನ್ನತ ಮಟ್ಟದ ಹುದ್ದೆಯಲ್ಲಿದ್ದರೆ ನಮ್ಮ ಮನೆಯ ಮಕ್ಕಳಿಗಿಂತಲೂ ಅತೀವ ಸಂತೋಷ ಪಡುತ್ತೇವೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಗೊಳ್ಳಲಿ ಎಂದು ಹಾರೈಸಿದರು.
ಅಧ್ಯಕ್ಷತೆ ತಿಪ್ಪಣ್ಣ ವಾಗ್ದಾಳ, ರವಿಂದ್ರಕುಮಾರ ಚಾಬುಕಸವಾರ್, ಉಪನ್ಯಾಸಕ ಎಸ್ ಜೆ ಮಾಡ್ಯಾಳ ಮಾತನಾಡಿದರು.
ಡಾ. ಎ ಆಯ್ ಹಂಜಗಿ, ಪ್ರಾರ್ಥನೆ ಸ್ವಪ್ನಾ ಹೂಗಾರ,
ಉಪನ್ಯಾಸಕರಾದ ಕಿರಣ ರೇವಣಕರ್, ರಾಜಲಕ್ಷ್ಮೀ ಆರ್, ಪುಷ್ಪಲತಾ ಆರ್, ಡಾ.ಶಿರಿನ್ ಸುಲ್ತಾನ ಇನಾಂದಾರ, ಸಂತೋಷ ಗೋರನಾಳ ಮತ್ತಿತರಿದ್ದರು.