ಕಾರವಾರ

ಭರ್ತಿಯಾಗುವತ್ತ ಜಿಲ್ಲೆಯ ಕದ್ರಾ ಕೊಡಸಳ್ಳಿ ಜಲಾಶಯಗಳು : ನೀರು ಬಿಡುವ ಸೂಚನೆ ನೀಡಿದ ಮುಖ್ಯ ಎಂಜಿನಿಯರ್

ಭರ್ತಿಯಾಗುವತ್ತ ಜಿಲ್ಲೆಯ ಕದ್ರಾ ಕೊಡಸಳ್ಳಿ ಜಲಾಶಯಗಳು : ನೀರು ಬಿಡುವ ಸೂಚನೆ ನೀಡಿದ ಮುಖ್ಯ ಎಂಜಿನಿಯರ್
ಕದ್ರಾ ಜಲಾಶಯದ ದೃಶ್ಯ,

ಸುಪಾ ಜಲಾಶಯವನ್ನು ನಿನ್ನೆ ರಾತ್ರಿ ವೀಕ್ಷಿಸಿದ ಜಿಲ್ಲಾಧಿಕಾರಿ  ಮುಗಿಲನ್ ಹಾಗೂ ಕೆಪಿಸಿ ಮುಖ್ಯ ಎಂಜಿನಿಯರ್ ನಿಂಗಣ್ಣ 

ಕಾರವಾರ 16:  ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕದ್ರಾ ಮತ್ತು ಕೊಡಸಳ್ಳಿ ಜಲಾಶಯದಿಂದ ನೀರನ್ನು ನದಿಗೆ ಹರಿಸುವ ಸೂಚನೆಯನ್ನು ಕೆಪಿಸಿ ಮುಖ್ಯ ಎಂಜಿನಿಯರ್ ನಿಂಗಣ್ಣ ಬುಧುವಾರ ಜಿಲ್ಲಾಡಳಿತಕ್ಕೆ ಸಂಜೆ ತಿಳಿಸಿದ್ದಾರೆ. ಅಣೆಕಟ್ಟು ತುಂಬಲು ಇನ್ನು ಮೂರು ಮೀಟರ್ ಇದ್ದರೂ, ಸಹ ಸತತ ಮಳೆ ಜಲಾಶಯಗಳ ಹಿನ್ನೀರಿನಲ್ಲಿ ಬೀಳುತ್ತಿದೆ. ಕದ್ರಾ ಜಲಾಶಯ 31 ಮೀಟರ್ ಗೆ ನೀರಿನ ಮಟ್ಟ ತಲುಪುತ್ತಿದ್ದು, 32.50 ಮೀಟರ್‌ಗೆ ಬರುತ್ತಿದ್ದಂತೆ ಕ್ರಸ್ಟಗೇಟ್ ತೆಗೆಯಲು ಕರ್ನಾಟಕ ಪವರ್ ಕಾರ​‍್ೂರೇಶನ್ ನಿರ್ಧರಿಸಿದೆ. ಜಿಲ್ಲಾಡಳಿತದ ಜೊತೆ ಸತತ ಸಂಪರ್ಕದಲ್ಲಿರುವ ಕೆಪಿಸಿ, ನದಿ ದಂಡೆಯ ಜನರು ಮನೆಗಳನ್ನು ತೊರೆಯುವುದು ತಡೆಯಲು ಯತ್ನಿಸುತ್ತಿದೆ. ಕೊಡಸಳ್ಳಿ ಜಲಾಶಯ 70 ಮೀಟರ್ ಎತ್ತರಕ್ಕೆ ನೀರಿನ ಮಟ್ಟ ತಲುಪುತ್ತಿದೆ. ಹಾಗಾಗಿ 72.50 ಮೀಟರ್ ಎತ್ತರಕ್ಕೆ ಜಲಾಶಯದ ಮಟ್ಟ ಬರಲು ಹೆಚ್ಚು ತಡವಾಗುವುದಿಲ್ಲ. ಸತತವಾಗಿ ಇನ್ನೆರಡು ದಿನ ಮಳೆ ಬಿದ್ದರೆ ಕೊಡಸಳ್ಳಿ ಜಲಾಶಯದ ಕ್ರಸ್ಟ ಗೇಟ್ ಸಹ ತೆರೆಯಲಾಗುವುದು ಎಂದು ಕೆಪಿಸಿ ಹೇಳಿದೆ. ನದಿಯಲ್ಲಿ ಮೀನು ಹಿಡಿಯುವ ಅಥವಾ ದೋಣಿಯಲ್ಲಿ ಸಂಚರಿಸಬೇಡಿ ಎಂದು ಕೆಪಿಸಿ ಹೇಳಿದೆ. ಜನ ಜಾನುವಾರುಗಳ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದೆ. ಈಗಾಗಲೇ ಕದ್ರಾದಿಂದ 4729 ಕ್ಯೂಸೆಕ್ಸ ನೀರು ಹೊರಗೆ ಹರಿಯುತ್ತಿದೆ. ಒಳ ಹರಿವು 10 ಕ್ಯೂಸೆಕ್ಸಗೂ ಹೆಚ್ಚಿದೆ. ದಾಂಡೇಲಿಯಲ್ಲಿ ಅತೀಯಾದ ಮಳೆಯಾಗುತ್ತಿದ್ದು, ಕದ್ರಾ ಕೊಡಸಳ್ಳಿ ಜಲಾಶಯಗಳು ಇನ್ನೆರಡು ದಿನಗಳಲ್ಲಿ ಭರ್ತಿಯಾಗಲಿವೆ. ಕಂದಾಯ ಮತ್ತು  ಪೊಲೀಸ್ ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಸಹಾಯಕ ಕಮಿಷನರ್ ಸತತವಾಗಿ ಕದ್ರಾ ಭಾಗದಲ್ಲಿ ಸಂಚರಿಸುತ್ತಿದ್ದು, ತಹಶೀಲ್ದಾರರು ಸಹ ಪರಿಸ್ಥಿತಿಯ ಬಗ್ಗೆ ನಿಗಾ ಇಟ್ಟಿದ್ದಾರೆ. ಜನರ ಸ್ಥಳಾಂತರ ಸನ್ನಿವೇಶ ಬಂದರೆ ಅದನ್ನು ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ. 

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾದಲ್ಲಿ 94.2 ಮಿ.ಮೀ, ಭಟ್ಕಳ 52.8 ಮಿ.ಮೀ, ಹಳಿಯಾಳ 62.2 ಮಿ.ಮೀ, ಹೊನ್ನಾವರ 106.9 ಮಿ.ಮೀ, ಕಾರವಾರ 107.1 ಮಿ.ಮಿ, ಕುಮಟಾ 44.2 ಮಿ.ಮೀ, ಮುಂಡಗೋಡ 34.4 ಮಿ.ಮೀ, ಸಿದ್ದಾಪುರ 108.6 ಮಿ.ಮೀ. ಶಿರಸಿ 105.0 ಮಿ.ಮೀ, ಜೋಯಿಡಾ 88.4 ಮಿ.ಮೀ, ಯಲ್ಲಾಪುರ 74.6 ಮಿ.ಮೀ. ಮಳೆಯಾಗಿದೆ. ಇನ್ನೆರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 

ಜಲಾಶಯ ನೀರಿನ ಮಟ್ಟ:  

ಕದ್ರಾ: 34.50ಮೀ (ಗರಿಷ್ಟ), 30.60 ಮೀ., 10137.00 ಕ್ಯೂಸೆಕ್ಸ್‌ (ಒಳಹರಿವು) 4729.0 ಕ್ಯೂಸೆಕ್ಸ (ಹೊರ ಹರಿವು),  

ಕೊಡಸಳ್ಳಿ: 75.50 ಮೀ (ಗರಿಷ್ಟ), 69.60 ಮೀ. ,  6761 ಕ್ಯೂಸೆಕ್ಸ್‌ (ಒಳ ಹರಿವು),  4472 (ಹೊರ ಹರಿವು),   

ಸೂಪಾ: 564.00 ಮೀ (ಗ), 535.77 ಮೀ, 9904.075 ಕ್ಯೂಸೆಕ್ಸ್‌ (ಒಳ ಹರಿವು), 3739.469 ಕ್ಯೂಸೆಕ್ಸ್‌ (ಹೊರ ಹರಿವು) 

ತಟ್ಟಿಹಳ್ಳ: 468.38ಮೀ (ಗ), 451.45 ಮೀ, 858.00 ಕ್ಯೂಸೆಕ್ಸ್‌ (ಒಳ ಹರಿವು) 0.00 ಕ್ಯೂಸೆಕ್ಸ್‌ (ಹೊರ ಹರಿವು),  

ಬೊಮ್ಮನಹಳ್ಳಿ: 434.27 ಮೀ (ಗ), 434.27 ಮೀ, 5471 ಕ್ಯೂಸೆಕ್ಸ್‌ (ಒಳ ಹರಿವು) 4274 ಕ್ಯೂಸೆಕ್ಸ್‌ (ಹೊರ ಹರಿವು) 

ಗೇರುಸೊಪ್ಪ: 55.00 ಮೀ (ಗ), 51.66 ಮೀ,  5890 ಕ್ಯೂಸೆಕ್ಸ್‌ (ಒಳ ಹರಿವು) 4239 ಕ್ಯೂಸೆಕ್ಸ್‌ (ಹೊರ ಹರಿವು) 

ಲಿಂಗನಮಕ್ಕಿ 1819.00 ಅಡಿ (ಗ), 1777.60 ಅಡಿ, 20857.0 ಕೂಸೆಕ್ಸ್‌ (ಒಳ ಹರಿವು) 2756.00 ಕ್ಯೂಸೆಕ್ಸ್‌ (ಹೊರ ಹರಿವು) 


ಸುದ್ದಿ ಓದಿ