ವಿದ್ಯಾರ್ಥಿನಿಯ ಸಾವಿನ ಪ್ರಕರಣದ ತನಿಖೆ ಚುರುಕುಗೊಳಿಸಲು ಮನವಿ
ಶಿಗ್ಗಾವಿ 29: ಶಿಗ್ಗಾವಿ ಅಂಕಲಕೋಟಿ ಕಾಲೇಜಿನ ಕವಿತಾ ಎಂ ಹುಬ್ಬಳ್ಳಿ ವಿದ್ಯಾರ್ಥಿನಿಯ ಸಾವಿನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಎಬಿವಿಪಿ ತಾಲೂಕಾ ಘಟಕ ಶಿಗ್ಗಾವಿ, ವಿವಿಧ ರೈತ ಸಂಘಗಳು, ಕನ್ನಡಪರ ಸಂಘಗಳು ಸೇರಿದಂತೆ ಇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸವಣೂರ ಸರ್ಕಲ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟಿಸಿ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿಯವರಿಗೆ ಮನವಿ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಬಾಗವಹಿಸಿ ಮಾತನಾಡಿದ ಮೃತ ವಿದ್ಯಾರ್ಥಿನಿಯ ತಂದೆ ಮಲ್ಲೆಶಪ್ಪ ಹುಬ್ಬಳ್ಳಿ, ನನ್ನ ಮಗಳ ಸಾವು ಆಕಸ್ಮಿಕವಲ್ಲ, ಅವರಳನ್ನ ಕೊಲೆ ಮಾಡಿದ್ದಾರೆ. ಸಾವು ಸಂಶಯಾಸ್ಪದವಾಗಿದೆ ಆದ್ದರಿಂದ ತನಿಖೆಯನ್ನು ಚುರುಕು ಮಾಡುವಂತೆ ಒತ್ತಾಯಿಸಿದರಲ್ಲದೇ ನಮ್ಮ ಕ್ಷೇತ್ರದವರೇ ಆದ ಮುಖ್ಯಮಂತ್ರಿ ಬೊಮ್ಮಾಯಿಯವರ ಅಪ್ಪಟ ಅಭಿಮಾನಿಯಾಗಿದ್ದೇನೆ ಆದರೆ ಅವರು ನನಗೆ ಒಂದು ಫೆÇೀನ್ ಕಾಲ್ ಮಾಡಿ ಸಮಾಧಾನ ಕೂಡ ಹೇಳಿಲ್ಲ ನನಗೆ ಯಾವುದೇ ದುಡ್ಡು ಬೇಕಾಗಿಲ್ಲಾ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನನ್ನ ಮಗಳ ಸಾವಿಗೆ ಕಾರಣವಾದವರನ್ನು ಕೂಡಲೇ ಶಿಕ್ಷೆ ಒಳಪಡಿಸಿ ಎಂದು ಕಣ್ಣೀರಿಟ್ಟ ಕೇಳಿಕೊಂಡರು.
ಎಬಿವಿಪಿ ವಿದ್ಯಾರ್ಥಿಗಳು ಮಾತನಾಡಿ ಈ ಕೃತ್ಯೆವನ್ನು ಮುಚ್ಚುವ ಕೆಲಸ ಆಗಬಾರದು. ಇಂತಹ ಕೃತ್ಯಗಳನ್ನು ಮಾಡಿದವರಿಗೆ ಕೂಡಲೇ ಕ್ರಮ ಜರುಗಿಸಬೇಕು ಇಲ್ಲವಾದರೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದು ಕಷ್ಟವಾಗುತ್ತದೆ ಏಕೆಂದರೆ ಈ ಕೃತ್ಯ ಕಂಡು ವಿದ್ಯಾರ್ಥಿಗಳಲ್ಲಿ ಭಯ ಉಂಟಾಗಿದೆ ಕೂಡಲೇ ಕವಿತಾಳ ಸಾವಿಗೆ ಕಾರಣರಾದವರನ್ನು ಕಂಡು ಹಿಡಿದು ತಕ್ಕ ಶಿಕ್ಷೆ ನೀಡಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೊರಾಟ ಮಾಡುತ್ತೆವೆ ಎಂದರು.
ಪ್ರತಿಭಟನೆಯಲ್ಲಿ ಎಬಿವಿಪಿಯ ಶಿಗ್ಗಾವಿ ಸಂಚಾಲಕ ಬಸವರಾಜ ಕಲ್ಲಪ್ಪನವರ, ಶಿವಾನಂದ ಬಾಗೂರ, ಮುತ್ತು ಗುಡಗೇರಿ, ಬಸಲಿಂಗಪ್ಪ ನರಗುಂದ, ಈರಣ್ಣ ಸಮಗೊಂಡ, ಮಂಜುನಾಥ ಮಣ್ಣಣ್ಣವರ, ಶಂಕರಗೌಡ ಪಾಟೀಲ, ಮಂಜುನಾಥ ಹಾವೇರಿ, ಬಸವರಾಜ ಜೇಕಿನಕಟ್ಟಿ, ಶಂಬು ಕೇರಿ, ಸಂತೋಷ ಚಾಕಲಬ್ಬಿ, ಶಂಬು ನೆರ್ತಿ ಸೇರಿದಂತೆ ರಂಭಾಪೂರಿ ಕಾಲೇಜಿನ ವಿದ್ಯಾರ್ಥಿಗಳು, ಅಂಕಲಕೋಟಿ ಕಾಲೇಜಿನ ವಿದ್ಯಾರ್ಥಿಗಳು. ಮಾಮ್ಲೆದೇಸಾಯಿ ಕಾಲೇಜಿನ ವಿದ್ಯಾರ್ಥಿಗಳು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.