ಶಿಗ್ಗಾವ್

ಬೆಳೆಗಳ ಸಮೀಕ್ಷೆ ಮಾಡಿ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಮನವಿ

ಬೆಳೆಗಳ ಸಮೀಕ್ಷೆ ಮಾಡಿ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಮನವಿ

ಶಿಗ್ಗಾವಿ 08: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ಮಾಡಿ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದಿಂದ ಶಿಗ್ಗಾವಿ ತಹಶೀಲ್ದಾರರ ಮೂಲಕ ಉಸ್ತವಾರಿ ಸಚಿವ ಶಿವರಾಮ್ ಹೆಬ್ಬಾರರಿಗೆ ಮನವಿ ಅರ​‍್ಿಸಿ ಒತ್ತಾಯಿಸಿದ್ದಾರೆ. 

ತಾಲೂಕಿದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೂಯಾಬಿನ್, ಮತ್ತು ತೋಟಗಾರಿಕೆ ಬೆಳೆಗಳು ನಿರಂತರವಾಗಿ ಸೂರಿಯುತ್ತಿರುವ ಮಳೆಯಿಂದ ರೈತರ ಜಮೀನಲ್ಲಿ ನೀರು ನಿಂತು ಬೆಳೆ ಹಾನಿಯಾಗಿವೆ ಸರಿಯಾಗಿ ಬೆಳೆ ಸಮೀಕ್ಷೆ ಮಾಡಿ ತಾಲೂಕಿನ ಎಲ್ಲ ರೈರಿಗೂ ಬೆಳೆ ಹಾನಿಯ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.  

ಅಲ್ಲದೇ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಶಿಗ್ಗಾವಿ ತಾಲೂಕಿನತ್ತ ಗಮನ ಹರಿಸದೇ ತಮ್ಮ ಸಕ್ಕರೆ ಕಾರ್ಖಾನೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಾಲೂಕಿನಲ್ಲಿ ಮನೆ, ಬೆಳೆ ಹಾನಿಯಾದವರು ಸಚಿವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ. 

ವಿವಿಧ ರೈತ ಸಂಘದ ಅದ್ಯಕ್ಷರುಗಳಾದ ಬಸಲಿಂಗಪ್ಪ ನರಗುಂದ, ಮುತ್ತಣ್ಣ ಗುಡಿಗೇರಿ, ಶಂಕರಗೌಡ ಪಾಟೀಲ್, ದ್ಯಾವಪ್ಪ ಗಾಳಿಗೌಡ್ರು, ಲಕ್ಷ್ಮಣ ಅಂಚಿನಮನಿ, ನಾಗಪ್ಪ ಸೆರೆವಾಡ ಸೇರಿದಂತೆ ತಾಲೂಕಿನ ನೊಂದ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ