ರಾಣೆಬೆನ್ನೂರ

ಎಲ್ಲ ದೇವಸ್ಥಾನಗಳ ಜಾತ್ರೆಗೂ ಅವಕಾಶ ನೀಡಲು ಆಗ್ರಹ

ಎಲ್ಲ ದೇವಸ್ಥಾನಗಳ ಜಾತ್ರೆಗೂ ಅವಕಾಶ ನೀಡಲು ಆಗ್ರಹ

ರಾಣೇಬೆನ್ನೂರು 16:  ತಾಲೂಕಿನ ಮೇಡ್ಲೇರಿ ಗ್ರಾಮದ ಸುಕ್ಷೇತ್ರ ಭೀರಲಿಂಗೇಶ್ವರ, ಕರಿಯಪ್ಪ ಸ್ವಾಮಿ, ದಿಳ್ಳೇಪ್ಪ ಸ್ವಾಮಿ, ಚೌಡೇಶ್ವರಿ ದೇವಿ ಜಾತ್ರೆಯು ನಡೆಯಬೇಕೆಂದು ಗ್ರಾಮಸ್ಥರ ಒತ್ತಾಯದ ಮೇರೆಗೆ ತಾಲೂಕ ದಂಡಾಧಿಕಾರಿಗಳಾದ ಶಂಕರ್ ಜಿಎಸ್ ಅವರು ಕೋವಿಡ್-19 ಇರುವುದರಿಂದ ಹೆಚ್ಚಿನ ಭಕ್ತಾಧಿಗಳು ಸೇರಬಾರದು ಎಂದು ಆದೇಶ ನೀಡಿದ್ದರು. ಜಿಲ್ಲೆಯಲ್ಲಿರುವ ಎಲ್ಲಾ ದೇವಸ್ಥಾನಗಳ ಜಾತ್ರೆಗೆ ಆದೇಶ ನೀಡಿದ್ದು ಇರುತ್ತದೆ. ಆದರೆ ಮೇಡ್ಲೇರಿ ಬೀರಲಿಂಗೇಶ್ವರ ಜಾತ್ರೆಗೆ ಆದೇಶ ಮಾತ್ರ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಸಾರ್ವಜನಿಕರು ಹಾಗೂ ಭಕ್ತಾಧಿಗಳು, ವಿವಿಧ ಸಂಘ ಸಂಸ್ಥೆಗಳು ಅಪೇಕ್ಷೆಯ ಮೇರೆಗೆ ಜಾತ್ರೆಯನ್ನು ನಡೆಸಬೇಕೆಂದು ಒತ್ತಾಯ ಪೂರ್ವಕವಾಗಿ ಹೇಳಿದಾಗ ತಾಲೂಕಿನ ದಂಡಾಧಿಕಾರಿಗಳು ಆದೇಶ ನೀಡಿದ್ದು ಇರುತ್ತದೆ. ಇದೇ ತರನಾಗಿ ಮುಂದೆ ಬರುವ ದೇವಸ್ಥಾನಗಳ ಜಾತ್ರೆಗಳಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಆಗ್ರಹಿಸಿದೆ. 

ಜಿಲ್ಲೆಯ ಗ್ರಾಮಾಂತರ ಪೊಲೀಸ್ ಇಲಾಖೆಯವರು ಜಿಲ್ಲಾ ಎಸ್ಪಿ, ಡಿಎಸ್‍ಪಿ ಸಿಪಿಐಗಳು ಸುತ್ತ ಬಂದೋಬಸ್ತ ನೀಡಲು ಸಹಕರಿಸಿದ್ದಾರೆ. ಭಕ್ತಾಧಿಗಳ ಸಮ್ಮುಖದಲ್ಲಿ ಗುಡ್ಡದಯ್ಯನ ವಾಲಗ ಬಹು ವಿಜೃಂಭಣೆಯಿಂದ ನಡೆಯಿತು. ಇದೇ ಜಾತ್ರೆಯ ವಿಶೇಷವಾಗಿದೆ.

ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಮೇಡ್ಲೇರಿ ಗ್ರಾಮದಲ್ಲಿ ಒಂದು ವರ್ಷಕ್ಕೆ 2 ಬಾರಿ ನಡೆಯುವ ಬೀರಲಿಂಗೇಶ್ವರ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಜಾತ್ರೆಗೆ ಆಗಮಿಸುತ್ತಿದ್ದರು. ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿತ್ತು. ಕಳೆದ ಒಂದು ವರ್ಷದ ಹಿಂದೆ ಕೋವಿಡ್-19 ನಿಂದ ಈ ಜಗ್ತತ್ತೆ ತಲ್ಲಣಗೊಂಡಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜನರು ಆರ್ಥಿಕ ನಷ್ಟವನ್ನು ಅನುಭವಿಸಿದ್ದರು. ಇದನ್ನೇಲ್ಲ ಕಳೆದು ಮತ್ತೆ ಜನರು ಸಹಜ ಸ್ಥಿತಿಗೆ ತಲುಪಿ ಜಾತ್ರೆಯನ್ನು ನಡೆಸಲು ಮುಂದಾಗಿದ್ದರು ಎಂದು ಹೇಳಿದರು. 

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಈ ಜಾತ್ರೆಯು ನಡೆಯುವುದಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಊರಿನ ಗ್ರಾಮಸ್ಥರು ಸೇರಿದಂತೆ ತಾಲೂಕ ದಂಡಾಧಿಕಾರಿಗಳು ಜಾತ್ರೆಗೆ ನಡೆಸಲು ಒಪ್ಪಿಗೆ ಸೂಚಿಸಿದ್ದರು. ಇದರಿಂದ ಯಾವುದೇ ಅಡಚಣೆಯಿಲ್ಲದೆ ಜಾತ್ರೆಯು ಅದ್ದೂರಿಯಾಗಿ ನಡೆಯಿತು. ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಈ ಜಾತ್ರೆಯು ನಡೆಯಲು ಹೋರಾಡಿದ ರೈತ ಸಂಘದ ಮುಖಂಡರಿಗೆ ಕಂಬಳಿ ಹೊದ್ದಿಸಿ ಸನ್ಮಾನಿಸಿದ್ದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ನಂತರ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಎಸ್ ಲಮಾಣಿ ಅವರು  ಜಿಲ್ಲೆಯ ಪ್ರಮುಖ ಜಾತ್ರೆಗಳಾದ ಕೆಂಗೊಂಡ ದುರ್ಗಾದೇವಿ, ಹಿರೇಕೆರೂರು ದುರ್ಗಮ್ಮ, ಹಾವನೂರು ದ್ಯಾಮವ್ವನ, ರಾಣೇಬೆನ್ನೂರಿನ ಆದಿಶಕ್ತಿ, ಗಂಗಾಜಲ ಚೌಡೇಶ್ವರಿ ದೇವಿ, ಹಾಗೂ ತುಂಗಾಜಲ ಚೌಡೇಶ್ವರಿ ಜಾತ್ರೆಗೆ ಸರ್ಕಾರದ ಅದೀನದಲ್ಲಿ ಜಿಲ್ಲಾಡಳಿತ ತಾಲೂಕಾಢಳಿತ ಎಲ್ಲಾ ಜಾತ್ರೆ ನಡೆಯಲು ಅನುವು ಮಾಡಿಕೊಟ್ಟಿದ್ದರು. ಆದರೆ ನೂರಾರು ವರ್ಷಗಳ ಕಾಲ ಇತಿಹಾಸವಿರುವ ತಾಲೂಕಿನ ಸುಕ್ಷೇತ್ರ ಮೇಡ್ಲೆರಿ ಬೀರಲಿಂಗೇಶ್ವರ ಜಾತ್ರೆಯನ್ನು ಆಚರಿಸಲು ತಾಲೂಕಾಡಳಿತ ನಿಷೇಧಿಸಿತ್ತು. ಇದನ್ನು ಮನಗಂಡು ವಿವಿಧ ರೈತ ಸಂಘದ ಮುಖಂಡರು ಹಾಗೂ ಊರಿನ ಗ್ರಾಮಸ್ಥರು  ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು ನಂತರ. ಜಾತ್ರೆ ನಡೆಸಲು ಒಪ್ಪಿಗೆ ಸೂಚಿಸಿದ್ದರು. ಜಾತ್ರೆಯನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸಿದ್ದು ಸಂತೋಷನ್ನುಂಟು ಮಾಡಿದೆ ಎಂದರು. 

ಮೇಡ್ಲೇರಿಯ ಭೀರೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಗ್ವಾರಜ್ಜ ಗೊರಮಾಳರ, ಉಪಾಧ್ಯಕ್ಷ ನಾಗಪ್ಪ ಪೂಜಾರ, ಕಾರ್ಯದರ್ಶಿ ದಿಳ್ಳೇಪ್ಪ ಅಣ್ಣೇರ, ಖಜಾಂಚಿ ಮಹಾಲಿಂಗಪ್ಪ ಆಡೂರು, ಸದಸ್ಯರುಗಳಾದ ವಿಷ್ಣಪ್ಪ ಪೂಜಾರ, ಕರಿಯಪ್ಪ ಪೂಜಾರ, ನೀಲಪ್ಪ ಅಣ್ಣೇರ, ಜಗದೀಶ ಪೂಜಾರ, ಭಿರೇಶ ವ್ಯಾಪಾರಿ, ಭೀರೇಶ್ ಕುನಬೇವು, ನಿಂಗಪ್ಪ ಬಿಲ್ಲಾಳ, ನಾಗಪ್ಪ ಹಾನ್ವೇರಿ, ನಾಗರಾಜ ಹೀಲದಹಳ್ಳಿ, ಇಕ್ಬಾಲ್ ನೂಕಾಪುರ ಸೇರಿದಂತೆ ಗ್ರಾಮದ ಊರ ನಾಗರೀಕರು ಉಪಸ್ಥಿತರಿದ್ದರು.

ಸುದ್ದಿ ಓದಿ