ಶಿಗ್ಗಾವ್

ನ್ಯಾ. ಎ. ಜೆ. ಸದಾಶಿವ ಆಯೋಗ ವರದಿ ಜಾರಿಗೆ ತರಲು ಮನವಿ

ನ್ಯಾ. ಎ. ಜೆ. ಸದಾಶಿವ ಆಯೋಗ ವರದಿ ಜಾರಿಗೆ ತರಲು ಮನವಿ

ಶಿಗ್ಗಾವಿ : ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗ ವರದಿ ಜಾರಿಗೆ ತರಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವವಂತೆ ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿಯವರಿಗೆ ಅಖಿಲ ಕರ್ನಾಟಕ ಆದಿಜಾಂಭವ ಸಂಘದ ರಾಜ್ಯ ಕಾರ್ಯದರ್ಶಿ ಡಿ ಎಸ್ ಮಾಳಗಿ ಅವರ ನೇತೃತ್ವದಲ್ಲಿ ಮನವಿ ಮಾಡಲಾಯಿತು. 

ಈ ಜಗತಿನಲ್ಲಿ ಇತಿಹಾಸದ ಪುರಾಣ ಮತ್ತು ರಾಮಾಯಣ ಮಹಾಭಾರತ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಮಾದಿಗರ ಧರ್ಮ ನೀತಿಯನ್ನು ಇಡಿ ಜಗತ್ತಿಗೆ ಸಾರಿ ಹೇಳಿದ ಮಾನವ ಕುಲದ ಅಧಿಪತಿ ಜಂಬೂ ದ್ವೀಪದ ಮಹಾರಾಜನೇ ಅಭಿಚಾಂಭವರ ಆ ಬಾಂಭವಂತನ ವಂಶಸ್ಥರಾದ ಮಾದಿಗರಾಗಿದ್ದು ಅಲ್ಲದೇ ಇಲ್ಲಿಯವರೆಗೂ ನಮ್ಮ ಸಮಾಜವು ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಎಲ್ಲಾ ರಂಗದಲ್ಲಿ ಅತೀ ಹಿಂದುಳಿದ ಸಮಾಜವಾಗಿದ್ದು, ಮಾನವ ಜನಾಂಗದ ಕಟ್ಟ ಕಡೆಯ ಜನರೆಂದರೆ ಮಾದಿಗರಾಗಿದ್ದಾರೆ, ಸಮಗ್ರವಾಗಿ 2 ಪರೀಶೀಲಿಸಿ, ಪರಿಶಿಷ್ಟ ಜಾತಿಯಲ್ಲಿ ಬರುವ ಜಾತಿ ಉಪಜಾತಿಗಳ ಜನಸಂಖ್ಯೆ ಮತ್ತು ಅವರ ಸ್ಥಿತಿಗತಿಯನ್ನು ಸಮೀಕ್ಷೆ ಮಾಡಿ ಎಡಗೈ ಜನಾಂಗದವರಿಗೆ ಎಲ್ಲಾ ರಂಗದಲ್ಲಿ ಈ ಸಮುದಾಯದ ಜನಸಂಖ್ಯೆಗೆ ಶೇ. 15 ರಷ್ಟು ಮಿಸಲಾತಿಯಲ್ಲಿ ಶೇ. 6 ರಷ್ಟು ಒಳಮಿಸಲಾತಿ ನೀಡಲು ಆಯೋಗ ಸರ್ಕಾರಕ್ಕೆ ವರದಿ ನೀಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಅಸ್ಪಶ್ಯತೆಯು ಜೀವಂತವಿದ್ದು ಈ ಸಮಾಜವನ್ನು ಮುಖ್ಯ ವಾಹಿನಿಗೆ ಬರಲು ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಪರವಾಗಿ ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 


ಸುದ್ದಿ ಓದಿ