ಉ.ಕ.ಜಿಲ್ಲೆಯಲ್ಲಿ ಅಂಬೇಡ್ಕರ ಮೂರ್ತಿ ಸ್ಥಾಪನೆಗೆ ಆಗ್ರಹ
ಕಾರವಾರ 27 : ಉತ್ತರ ಕನ್ನಡ ಜಿಲ್ಲೆಯ ಕೇಂದ್ರಸ್ಥಾನವಾದ ಕಾರವಾರ ನಗರದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರವರ ಮೂರ್ತಿಯು ಇನ್ನುವರೇ ಸ್ಥಾಪನೆಗೊಂಡಿಲ್ಲ ಎಂದು ಜಿಲ್ಲಾ ಬಿಜೆಪಿ ಎಸ್ಪಿ ಮೂರ್ಚಾ ಅಪಾದಿಸಿದೆ. ಕಾರಣ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಎಸ್ಪಿ ಮೂರ್ಚಾ ರಾಜ್ಯಾಧ್ಯಕ್ಷ ಚುಲುವಾದಿ ನಾರಾಯಣ ಸ್ವಾಮಿಗೆ ಮನವಿ ನೀಡಿದೆ. ಜಿಲ್ಲೆಯಲ್ಲಿ ಹಲವಾರು ದಲಿತ ಸಂಘನೆಗಳು ಅನೇಕ ವರ್ಷಗಳಿಂದ ಡಾ. ಬಾಬಾ ಸಾಹೇಬ ಅಂಬೇಡ್ಕರವರ ಮೂರ್ತಿಸ್ಥಾಪನೆ ಬಗ್ಗೆ ಹೋರಾಟ ಮಾಡುತ್ತಲೆ ಬಂದಿದ್ದು , ಈವರೆಗೂ ಮೂರ್ತಿಸ್ಥಾಪನೆಗೊಂಡಿಲ್ಲ. ಇನ್ನಾದರೂ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಬಿ.ಜೆ.ಪಿ ಎಸ್.ಸಿ ಮೋರ್ಚಾವತಿಯಿಂದ ಜಿಲ್ಲಾಧ್ಯ ಉದಯ ಬಶೆಟ್ಟಿ ಹಾಗೂ ಬಿ.ಜೆ.ಪಿ. ಮೋರ್ಚಾ ರಾಜ್ಯಕಾರ್ಯಕಾರಣಿ ಸದ್ಯಸರಾದ ಹಾಗೂ ಹುಬ್ಬಳ್ಳಿ, ಧಾರವಾಡ ಸಹ ಉಸ್ತುವಾರಿ ಬಿ.ಎನ್. ಸೂರ್ಯಪ್ರಕಾಶ ಈಚೆಗೆ ನಾರಾಯಣ ಸ್ವಾಮಿಗೆ ಮನವಿ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಇರುವ ಬೇಡಿಕೆಯಾದಂತಹ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗ ಅಧ್ಯಕ್ಷನೆಹರು .ಚ. ಓಲೇಕರವರಿಗೆ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರ ಸಭಾ ಆಯುಕ್ತರಿಗೆ ಹಾಗೂ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕರಿಗೆ ಸಹ ಮನವಿ ನೀಡಲಾಗಿದೆ ಎಂದು ಬಶೆಟ್ಟಿ ತಿಳಿಸಿದ್ದಾರೆ. ಈ ಸಮಯದಲ್ಲಿ ಬಿ.ಜೆ.ಪಿ ಎಸ್.ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಅರುಣಕುಮಾರ, ಕೆ.ಜಿ.ಎಪ್ ಕೋಲಾರನ್, ಮಾಜಿ ಶಾಸಕರಾದ ಸಂಪಂಗಿ ಹಾಗೂ ರಾಜ್ಯಕಾರ್ಯಕಾರಣಿ ಸದ್ಯಸರಾದ ಕನಕಮೂರ್ತಿ ಉಪಸ್ಥಿತರಿದ್ದರು.