ತಾಳಿಕೋಟಿ

ಎಮ್‌ಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮನವಿ

ಎಮ್‌ಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮನವಿ


ತಾಳಿಕೋಟೆ22:  ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸೇನಾನಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಅವಮಾನ ಹಾಗೂ ಕೊಲ್ಹಾಪೂರದಲ್ಲಿ ಕನ್ನಡ ದ್ವಜವನ್ನು ಸುಟ್ಟು ಹಾಕಿ ಗುಂಡಾಗಿರಿ ಮಾಡುತ್ತಿರುವ ಎಮ್‌ಇಎಸ್ ಹಾಗೂ ಶಿವಸೇನೆ ನಡೆಯನ್ನು ಖಂಡಿಸಿ ಪಟ್ಟಣದಲ್ಲಿ ತಾಲೂಕು ಕುರಬರ ಸಂಘ, ರಾಯಣ್ಣ ಯುವ ಪಡೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸಿಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು. 

ಪಟ್ಟಣದ ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಸಂಗೋಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮೂಲಕ ತಹಶಿಲ್ದಾರ ಕಚೇರಿಗೆ ಆಗಮಿಸಿ ಉಪ ತಹಸಿಲ್ದಾರ ಅಶೋಕ ಶರ್ಮಾ ಅವರಿಗೆ ಮನವಿಯನ್ನು ಸಲ್ಲಿಸಿದರು. 

ಬೆಳಗಾವಿ ಜಿಲ್ಲೆಯ ಅನಗೋಳದಲ್ಲಿ ರಾಷ್ಟ್ರ​‍್ರಮೇಮಿ ಸ್ವಾತಂತ್ರ್ಯ ಹೋರಾಟಗಾರ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿದ ಎಮ್‌ಇಎಸ್ ಸಂಘಟನೆಯ ಕೃತ್ಯ ದೇಶ ದ್ರೋಹದ್ದಾಗಿದೆ. ಮಹಾರಾಷ್ಟ್ರ ಏಕೀಕರಣ ನೆಪದಲ್ಲಿ ಮರಾಠಿಗರು ಮತ್ತು ಕನ್ನಡಿಗರ ಮಧ್ಯೆ ಹುಳಿ ಹಿಂಡುವ ಕಾಯಕದಲ್ಲಿ ನಿರತರಾಗಿರುವ ಇಂತಹ ಕೃತ್ಯಗಳನ್ನು ಎಸಗುತ್ತಿರುವ ಎಮ್‌ಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಬೇಕು. ಕೊಲ್ಹಾಪೂರದಲ್ಲಿ ನಮ್ಮ ಕನ್ನಡ ಧ್ವಜವನ್ನು ಸುಟ್ಟು ಹಾಕಿರುವದು ಇಡೀ ಕರ್ನಾಟಕದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಇದಕ್ಕೆ ಪಕ್ಕದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಶಿವಸೇನೆ ಸಹಕಾರ ನೀಡಿರುವದು ಖಂಡನೀಯವಾಗಿದೆ. ಎಮ್‌ಇಎಸ್ ನಡೆಯನ್ನು ಖಂಡಿಸಿದ ಕನ್ನಡ ಪ್ರೇಮಿ ಸಂಪತ್ ದೇಸಾಯಿಯ ಮೇಲೆ ಪೊಲೀಸ್‌ರು ದೌರ್ಜನ್ಯ ನಡೆಸಿದ್ದು, ಅವರ ಮೇಲಿನ ಕೇಸ್‌ನ್ನು ಹಿಂಪಡೆದುಕೊಳ್ಳಬೇಕು. ದೇಶ ಪ್ರೇಮಿಗೆ ಅವಮಾನ ಮಾಡಿರುವ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಿ, ಗಡಿಪಾರು ಮಾಡಬೇಕು. ಮುಂದೆ ಇಂತಹ ಘಟನೆಯನ್ನು ಆಗದಂತೆ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು. 

ತಾಲೂಕು ಕುರಬರ ಸಂಘದ ಅಧ್ಯಕ್ಷ ಸಾಯಬಣ್ಣ ಆಲ್ಯಾಳ, ರಾಯಣ್ಣ ಯುವ ಪಡೆ ಅಧ್ಯಕ್ಷ ಶಿವರಾಜ ಗುಂಡಕನಾಳ, ಮಲ್ಲಿಕಾರ್ಜುನ ನಾಯ್ಕಲ್, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ತಾಲೂಕ ಅಧ್ಯಕ್ಷ ನಿಸಾರ ಬೇಪಾರಿ, ಗೌರವಾಧ್ಯಕ್ಷ ಹಣಮಂತ್ರಾಯ ಢವಳಗಿ, ಅರವಿಂದ ಹಾಲಣ್ಣನವರ, ರಮೇಶ ಟಣಕೇದಾರ, ರಮೇಶ ಪೀರಾಪೂರ, ಅನಿಲ ಗೋಟಖಂಡ್ಕಿ, ಜಗದೀಶ ಪೂಜಾರಿ, ಅಬುಬಕರ ಲಾಹೋರಿ, ನಬಿರಸೂಲ ಲಾಹೋರಿ, ಜಾಕೀರ ಬಡಗಣ, ಮಶ್ಯಾಕ ಜಮಾದಾರ, ಬಸೀರಅಹ್ಮದ ಢವಳಗಿ, ಶರಣು ಅಗಸರ, ಸುಭಾಸ ಮಡಿವಾಳರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ