ತಾಳಿಕೋಟಿ

ಡೋಣಿ ನದಿಗೆ ನೂತನ ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಮನವಿ

ಡೋಣಿ ನದಿಗೆ ನೂತನ ಸೇತುವೆ ನಿರ್ಮಾಣ  ಮಾಡುವಂತೆ ಒತ್ತಾಯಿಸಿ ಮನವಿ

ತಾಳಿಕೋಟೆ 28: ಪಟ್ಟಣದಿಂದ ವಿಜಯಪುರಕ್ಕೆ ಸಮಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆ ಕುಸಿದು 10 ತಿಂಗಳು ಕಳೆದರು ಸಹಿತ ಸಂಬಂಧಿಸಿದ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಕೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತಿರ್ವ ತೊಂದರೆಯಾಗುತ್ತಿದ್ದು, ಕೂಡಲೇ ನೂತನ ಸೇತುವೆಯಾಗಲಿ ಅಥವಾ ಶಿಥಿಲಗೊಂಡ ಸೇತುವೆ ದುರಸ್ತಿಯಾಗಲಿ ಕೈಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣದ) ಕಾರ್ಯಕರ್ತರು ತಹಶೀಲ್ದಾರ ಮೂಲಕ ಲೋಕಪಯೋಗಿ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.

ತಾಳಿಕೋಟೆಯಿಂದ ವಿಜಯಪುರ ಒಳಗೊಂಡು ಹಲವು ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಬಿಜ್ಜಳ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿರುವ ಡೋಣಿ ನದಿ ಮೇಲ್ಮಟ್ಟದ ಸೇತುವೆ ಕುಸಿದು 10 ತಿಂಗಳು ಗತಿಸುತ್ತಾ ಬಂದಿದೆ. ಆದರೂ ಈ ಸೇತುವೆಯ ದುರಸ್ಥಿಗೆ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಕೊಂಡಿರುವದಿಲ್ಲ. ಈ ಸೇತುವೆ ಪಕ್ಕದಲ್ಲಿ ಬ್ರಿಟಿಷರ್ ಕಾಲದಲ್ಲಿ ನಿಮರ್ಾಣವಾದ ಕೆಳಮಟ್ಟದ ಹಳೆಯ ಸೇತುವೆ ಇದ್ದು ಈ ಸೇತುವೆಯೂ ಡೋಣಿ ನದಿಗೆ ಪ್ರವಾಹ ಬಂದಾಗೋಮ್ಮೆ ಸಂಪೂರ್ಣ ಜಲಾವೃತವಾಗುತ್ತದೆ. ಈ ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಸೇತುವೆಯ ಮೇಲೆಯೇ ವಾಹನ ಸಂಚಾರವು ನಡೆಯುತ್ತಿದ್ದು, ಸದ್ಯ ಮಳೆಗಾಲ ಇರುವದರಿಂದ ಡೋಣಿ ನದಿಯಲ್ಲಿ ಪ್ರವಾಹಬರುವದು ಸನ್ನಿಹಿತವಾಗಿದೆ. ಇದರಿಂದ ಸೇತುವೆ ಜಲಾವೃತಗೊಂಡರೆ ಈ ರಸ್ತೆಯ ಮೂಲಕ ಸಂಚರಿಸುವ ಎಲ್ಲ ಮಾರ್ಗಗಳು ಬಂದಾಗಲಿವೆ. ಇದರಿಂದ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತದೆ. ಶಿಥಿಲಗೊಂಡ ಸೇತುವೆ 25 ವರ್ಷಗಳ ಹಿಂದೆ ನಿಮರ್ಾಣಗೊಂಡಿರುವದರಿಂದ ಒಂದು ಭಾಗದಲ್ಲಿ ಕುಸಿತ ಕಂಡಿದೆ. ಸೇತುವೆಯ ಎಲ್ಲಾ ಭಾಗಗಳು ಒಂದೇ ಸಮಯದಲ್ಲಿ ನಿಮರ್ಾಣ ಆಗಿರುವದರಿಂದ ಸೇತುವೆ ಸಾಮರ್ಥ ಶಕ್ತಿ ಕುಂದಿರುತ್ತದೆ. ಕೂಡಲೇ ನೂತನ ಸೇತುವೆಯ ನಿಮರ್ಾಣಕ್ಕೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಕೊಳ್ಳಬೇಕಾಗುವದು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿಜೈಭೀಮ ಮುತ್ತಗಿ. ತಾಲೂಕಾಧ್ಯಕ್ಷ ನಿಸಾರ ಬೇಪಾರಿ, ಉಪಾದ್ಯಕ್ಷ ಪ್ರಭುಗೌಡ ಪಾಟೀಲ, ಕಾರ್ಮಿಕ ಘಟಕದ ಅಧ್ಯಕ್ಷ ಅಬುಬಕರ ಲಾಹೋರಿ, ನಬಿ ಲಾಹೋರಿ, ಜಾಕೀರ ಬಡಗಣ, ಶರಣು ಅಗಸರ, ಸುಭಾಸ ಮಡಿವಾಳರ, ಅಯುಬ ವಠಾರ, ಅನೀಲ ಗೋಟಖಂಡ್ಕಿ, ಟಿಪ್ಪು ಕಾಳಗಿ, ಬುಡ್ಡಾ ರಂಜಣಗಿ, ಫೀರಸಾ ಕುಳಗೇರಿ, ಮಲ್ಲಣ್ಣ ಯಡಹಳ್ಳಿ, ಸಂಗಮೇಶ ಕೊಳ್ಳಿ ಸೇರಿದಂತೆ ಮೊದಲಾದವರು ಇದ್ದರು.


ಸುದ್ದಿ ಓದಿ