ಮೂಲಭೂತ ಸೌಕರ್ಯಒದಗಿಸಲು ಶಾಸಕರಿಗೆ ಮನವಿ
ತಾಳಿಕೋಟಿ: ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಮ್ಮ ಗ್ರಾಮಗಳಿಗೆ- ಸೌಕರ್ಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಬನ್ನಿಹಟ್ಟಿ ಪಿ.ಟಿ. ಗ್ರಾಮಸ್ಥರು ಹಾಗೂ ಕುದರಗುಂಡ ಗ್ರಾಮದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ದೇ.ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದರು.
ಬನ್ನಿಹಟ್ಟಿ ಪಿ.ಟಿ.ಗ್ರಾಮದಿಂದ ಬಿಂಜಲ ಭಾವಿಗೆ ಸಂಪರ್ಕಿಸುವರಸ್ತೆಯು ಅತಿಕ್ರಮಣಕ್ಕೆ ಒಳಪಡುತ್ತಿದ್ದು ಮುಂದೊಂದು ದಿನ ರಸ್ತೆಯಿಲ್ಲದಂತಾಗಿ ರೈತರಿಗೆ ತುಂಬಾ ಅನಾನಕೂಲವಾಗುವ ಸಾಧ್ಯತೆ ಇದೆ. ಈ ಕೂಡು ರಸ್ತೆ ಅಭಿವೃದ್ಧಿಯಾದರೆ- ಇಲ್ಲಿಂದ ಕಲಕೇರಿ ಗ್ರಾಮಕ್ಕೆ ಕೇವಲ 6 ಕಿ.ಮೀ. ಅಂತರವಾಗುತ್ತದೆ ಇದು ಗ್ರಾಮಸ್ಥರಿಗೆ ಅನಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ರೀತಿ ಕುದರ ಗುಂಡ ಗ್ರಾಮದಲ್ಲಿ ರಸ್ತೆ ಚರಂಡಿಗಳು ಸಂಪೂರ್ಣ ಹಾಳಾಗಿ ಹೋಗಿ ವಿಪರೀತ ನೈರ್ಮಲ್ಯದ ವಾತಾವರಣವುಂಟಾಗಿರೋಗ ರುಜುನೆಗಳಿಗೆ ದಾರಿ ಮಾಡಿಕೊಂಡುತ್ತಿದೆಇನ್ನೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸ್ಮಶಾನದ ಅಭಿವೃದ್ಧಿ, ಶಾಲಾ ಕಟ್ಟಡ ಹಾಗೂ ಅವರುತಮ್ಮ ಸಂಪ್ರದಾಯದಂತೆ ಕೆಲವು ಕಾರ್ಯಕ್ರಮಗಳನ್ನು ನಿರ್ವಹಿಸಲು ಸಮುದಾಯ ಭವನದ ಅಗತ್ಯವಿದೆ. ಈ ರೀತಿಯಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಈ ಗ್ರಾಮಕ್ಕೆ ಮಾನ್ಯ ಶಾಸಕರು ಹೆಚ್ಚಿನ ಗಮನ ಹರಿಸಬೇಕೆಂದು ವಿನಂತಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸೋಮನಗೌಡರು ಈ ಎರಡು ಗ್ರಾಮಗಳಿಗೂ ಮೂಲಭೂತ ಸೌಕರ್ಯಕಲ್ಪಿಸಲು ಕಾಮಗಾರಿಗಳನ್ನು ಹಾಕಿಕೊಳ್ಳಲು ಯೋಜನೆರೂಪಿಸಲಾಗಿದೆ.ಕೋವಿಡ್ದಿಂದಾಗಿ ಕ್ಷೇತ್ರದ ಎಲ್ಲ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ ಈಗ ಆದಷ್ಟು ಬೇಗ ಈ ಕೆಲವನ್ನು ಮಾಡುತ್ತೇನೆ ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ನಾನು ಬದ್ಧನಾಗಿರುವೆ ಇದರಲ್ಲಿ ಯಾವುದೇ ರೀತಿಯರಾಜಕೀಯ ಇಲ್ಲ ಎಂದರು.