ರಾಜ್ಯ ಸರಕಾರ ವಜಾಕ್ಕೆ ಆಗ್ರಹಿಸಿ ಜೆಡಿಎಸ್ ಮನವಿ
ಸಿಂದಗಿ 29: ಕಡುಬಡವರಿಗೆ ನೀಡಲಾಗುತ್ತರುವ ಆಹಾರದಾನ್ಯ ಬಗ್ಗೆ ಕೇಳಿದರೆ ಸಾಯುವುದು ಒಳ್ಳೆಯದು ಎಂದು ಉಡಾಫೆ ಉತ್ತರ ನೀಡಿದ ಆಹಾರ ಸಚಿವ ಉಮೇಶ ಕತ್ತಿ ಕಾರ್ಯವೈಕರಿಯನ್ನು ಸಮರ್ಥಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಮಾಜಿ ತಾಲೂಕಾದ್ಯಕ್ಷ ಪ್ರಕಾಶ ಹಿರೇಕರುಬರ, ವಕ್ತಾರ ಸಿದ್ದಣ್ಣ ಚೌಧರಿ ಮಾತನಾಡಿ, ಕಳೇದ ಒಂದು ವರ್ಷದಿಂದ ರಣಕೇಕೆ ಬಾರಿಸುತ್ತಿರುವ ಮಹಾಮಾರಿ ಕೊವಿಡ್ ಸೊಂಕು ಆವರಿಸಿದ್ದರಿಂದ ರಾಜ್ಯ ಸರಕಾರ ಲಾಕ್ಡೌನ್ ಹಾಕಿದೆ ಇದರಿಂದ ಬಡಜನರ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಊಟಕ್ಕೂ ಗತಿಯಿಲ್ಲದಂತಾಗಿದೆ ಇಂತಹ ಸಂದರ್ಭದಲ್ಲಿ ಕಳೆದ ಕಾಂಗ್ರೆಸ ಮತ್ತು ಜೆಡಿಎಸ್ ಪಕ್ಷಗಳ ಅಧಿಕಾರಾವಧಿಯಲ್ಲಿ ನೀಡುತ್ತಿದ್ದ ಆಹಾರದಾನ್ಯಕ್ಕೆ ಕತ್ತರಿ ಹಾಕಿದೆ ಈ ನೀತಿಯನ್ನು ಸಾರ್ವಜನಿಕರು ದೂರವಾಣಿ ಮೂಲಕ ಸಚಿವರಿಗೆ ಬಡ ಕೂಲಿ ಕಾರ್ಮಿಕರು ಕರೆ ಮಾಡಿದರೆ ಸಾಯುವುದು ಒಳ್ಳೆಯದು ಉಡಾಫೆ ಉತ್ತರ ನೀಡುತ್ತಿರುವ ಆಹಾರ ಸಚಿವ ಉಮೇಶ ಕತ್ತಿ ಅವರ ಮೇಲೆ ಕ್ರಿಮಿನಲ್ ಕೇಸು ಹಾಕುವ ಮೂಲಕ ರಾಜ್ಯ ಬಿಜೆಪಿ ಸರಕಾರವನ್ನು ವಜಾ ಗೊಳಿಸಬೇಕು ಇಲ್ಲದಿದ್ದರೆ ಜೆಡಿಎಸ್ ಪಕ್ಷದವತಿಯಿಂದ ಉಗ್ರವಾದ ಹೋರಾಟ ಮಡಬೇಕಾಗುತ್ತದೆ ಎಂದು ಏಚ್ಚರಿಕೆ ನೀಡಿದರು.
ವಕ್ತಾರ ಸಿದ್ದಣ್ಣ ಚೌಧರಿ ಮಾತನಾಡಿ, ರಾಜ್ಯದಲ್ಲಿ ಕೊರೋನಾ ಆವರಿಸಿದ್ದರಿಂದ 14ದಿನಗಳ ಕಾಲ ಲಾಕ್ಡೌನ ಹೇರಿದೆ ಅದಕ್ಕೆ ಪೂರಕವಾಗಿ ಮನೆಯಲ್ಲಿ ಕುಳಿತ ಜನರ ಜೊತೆ ಸರಕಾರ ಕೈ ಜೋಡಿಸಬೇಕು ಆದರೆ ಬರೀ ಮೊಸಳೆ ಕಣ್ಣಿರು ಸುರಿಸಿ ಕೊರೋನಾ ಎಂಬ ರೋಗದ ಹೆಸರಿನಲ್ಲಿ ಹಣ ಲೂಟಿ ಹೊಡೆಯುತ್ತಿದೆ ಕಳೇದ ಸರಕಾರದಲ್ಲಿರುವ ಯೋಜನೆಗಳಿಗೆ ಕತ್ತರಿ ಹಾಕುವಂತ ಆದೇಶ ಹೊರಡಿಸುತ್ತಿವೆ ಮತ್ತು ಗ್ಯಾಸ, ಪೆಟ್ರೋಲ್, ಡಿಸೇಲ್, ಎಣ್ಣೆ, ರಸಗೊಬ್ಬರಗಳ ಸೇರಿದಂತೆ ರೈತರಿಗೆ ಉಪಯುಕ್ತ ವಸ್ತುಗಳ ಮೇಲೆ ದುಬಾರಿ ಬೆಲೆ ಹಾಕಿದೆ ಆದರೆ ಕಳೆದ ಸರಕಾರಗಳಲ್ಲಿ ಅಂತ್ಯೋದಯ, ಬಿಪಿಎಲ್ ಬಡ ಕಾರ್ಡುದಾರರಿಗೆ ನೀಡಲಾಗುತ್ತಿರುವ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ಈಗೀನ ಬಿಜೆಪಿ ಸರಕಾರ 3 ಕೆಜಿಗೆ ತಂದು ನಿಲ್ಲಿಸಿದೆ ಕೂಡಲೇ ಇಂತಹ ಸರಕಾರವನ್ನು ವಜಾಗೊಳಿಸಿ ಬಡಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶೆಂಕರಗೌಡ ಕೊಟಿಖಾನಿ, ಶರಣಪ್ಪ ವಿಜಾಪುರ ಸೇರಿದಂತೆ ಹಲವರಿದ್ದರು.