ತಾಳಿಕೋಟಿ

ರಸ್ತೆ ತೆರವುಗೊಳಿಸುವಂತೆ ರೈತರಿಂದ ಮನವಿ

ರಸ್ತೆ ತೆರವುಗೊಳಿಸುವಂತೆ ರೈತರಿಂದ ಮನವಿ


ತಾಳಿಕೋಟೆ07: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ರೈತರುಗಳಿಗೆ ‘ಪೋರ್ಥ ಪಾರ್ಟನರ್ ಎನರ್ಜಿ ಪ್ರೈ.ಲಿ.ನ ಸೌರ ವಿದ್ಯುತ್ ಕಂಪನಿಯವರಿಂದಾಗಿ ಜಮೀನುಗಳಿಗೆ ಹೋಗುವ ರಸ್ತೆ ಬಂದ್ ಆಗಿದ್ದು ಜಮೀನುಗಳಿಗೆ ಹೋಗಲು ತಮ್ಮ ರಸ್ತೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮದ  ರೈತಾಪಿಗಳು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ನಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಜಮೀನು ಹೊಂದಿದ್ದವರು  ಸೌರವಿದ್ಯುತ್ ಕಂಪನಿಗೆ ತಮ್ಮ ಜಮೀನುಗಳನ್ನು ಲೀಜ್ಗೆ ಕೊಟ್ಟಿದ್ದಾರೆ. ಈ ಜಮೀನುಗಳನ್ನು ದಾಟಿಕೊಂಡು ನಮ್ಮ ಜಮೀನುಗಳಿಗೆ ಹೋಗಬೇಕಿದ್ದ ದಾರಿಯನ್ನು ಸೌರವಿದ್ಯುತ್ ಕಂಪನಿಯವರು ರಸ್ತೆ  ಬಂದ್ ಮಾಡಿ ತಂತಿ ಬೇಲಿ ಹಾಕಿದ್ದಾರೆ. ಇದರಿಂದಾಗಿ ನಾವು ನಮ್ಮ ಜಮೀನಿಗೆ ಹೋಗಲು ಹಾಗೂ ಕೃಷಿ ಚಟುವಟಿಕೆ ಮಾಡಲು  ದಾರಿಯೇ ಇಲ್ಲವಾಗಿದೆ. ಲೀಜಗೆ ಕೊಟ್ಟ ಜಮೀನಿಗೆ ಸುತ್ತಲು ಸೀಮೆಂಟ್ ಕಂಬಗಳನ್ನ ಹಾಕಿ ನಮಗೆ ಹೋಗಿ ಬರಲು ಉದ್ದೇಶ ಪೂರ್ವಕವಾಗಿ  ತೊಂದರೆ ಕೊಟ್ಟು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.  ಲೀಜ್ಗೆ ಕೊಟ್ಟ ಹೊಲಗಳ ಬದುವನ್ನು ಸಾಪ್ ಮಾಡಿರುತ್ತಾರೆ.  ಆ ಹೊಲದ ಮಳೆ ನೀರು ಕೆಳಗೆ ಇರುವ ಹೊಲಗಳಿಗೆ ಬಂದು ಹೊಲ ಕೆಡುತ್ತವೆ ಆದ ಕಾರಣ ಲೀಜ್ಗೆ ಕೊಟ್ಟ ಹೊಲದ ಬದುವನ್ನು ನಿರ್ಮಿಸಿ ಕೊಟ್ಟು ನೀರು ಬರದೆ ಹಾಗೆ ಬದುವನ್ನು ಹೊರಗೆ ಮಾಡಿ ಸಿಮೆಂಟ್ ಕಂಬಗಳನ್ನ ಹಾಕಬೇಕು. ನಮಗೆ ಜಮೀನುಗಳಿಗೆ ಹೋಗಲು ದಾರಿ ವ್ಯವಸ್ಥೆಯಾಗಬೇಕು ಎಂದು ಮನವಿ ಮಾಡಿರುವ ಅವರು  ಸೋಲಾರ ಕಂಪನಿಯವರು ನಮ್ಮ ಜಮೀನಿನ ಬದುವಿನಲ್ಲಿರುವ ಗಿಡಮರಗಳನ್ನು ನಾಶ ಮಾಡಿರುತ್ತಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. 

ಮನವಿ ಪತ್ರದಲ್ಲಿ ತಿಮ್ಮಣ್ಣ ಮಸರಕಲ್ಲ, ರವೀಂದ್ರ ಮಸರಕಲ್ಲ, ರಮೇಶ ಮಸರಕಲ್ಲ, ಬಸವರಾಜ ಮಾಗಣಗೇರಿ, ಶಾಂತಪ್ಪ ದ್ವಾರನಹಳ್ಳಿ, ಲಕ್ಷಿ-್ಮಂಬಾಯಿ ಮಸರಕಲ್ಲ, ಹರಿಶ್ಚಂದ್ರ ಮಸರಕಲ್ಲ, ಗೋವಿಂದಪ್ಪ ವಿಜಾಪುರ ಬಸಪ್ಪ ಹುನಗುಂದ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ