ಚಿಕ್ಕೋಡಿ

ಹೈಟೆಕ್ ಭವನ, ಇ-ಗ್ರಂಥಾಲಯ ಮಂಜೂರಿಗೆ ಮನವಿ

ಹೈಟೆಕ್ ಭವನ, ಇ-ಗ್ರಂಥಾಲಯ ಮಂಜೂರಿಗೆ ಮನವಿ

ಚಿಕ್ಕೋಡಿ 16: ಐತಿಹಾಸಿಕ ಚಿಕ್ಕೋಡಿ ನ್ಯಾಯವಾದಿಗಳ ಸಂಘಕ್ಕೆ ಹೈಟೆಕ್ ಭವನ ಮತ್ತು ಇ-ಗ್ರಂಥಾಲಯ ಮಂಜೂರು ಮಾಡಬೇಕೆಂದು ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು. 

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದಕ್ಕೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರನ್ನು ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದ ಬಳಿಕ ಅವರು ವಿವಿಧ ಬೇಡಿಕೆಗಳಿಗೆ ಪ್ರಸ್ತಾವಣೆ ಸಲ್ಲಿಸಿದರು. 

ಸಂವಿಧಾನ ಶಿಲ್ಪಿ ಡಾ, ಅಂಬೇಡ್ಕರ ವಾದ ಮಂಡಿಸಿದ ಐತಿಹಾಸಿಕ ನ್ಯಾಯಾಲಯದ ಕಟ್ಟಡ ಸದ್ಯ ಪ್ರಗತಿಯಲ್ಲಿದೆ. ಅದನ್ನು ಪರೀಶೀಲನೆ ನಡೆಸಲು ಚಿಕ್ಕೋಡಿಗೆ ಆಗಮಿಸಬೇಕು. ಅದರ ಜೊತೆಗೆ ನ್ಯಾಯವಾದಿಗಳ ಸಂಘಕ್ಕೆ ಹೈಟೆಕ್ ಭವನ ಮತ್ತು ಯುವ ನ್ಯಾಯವಾದಿಗಳ ಅಧ್ಯಯನಕ್ಕೆ ಇ-ಗ್ರಂಥಾಲಯ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. 

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ, ಹಿರಿಯ ನ್ಯಾಯವಾದಿ ಎಚ್‌.ಎಸ್‌.ನಸಲಾಪೂರೆ, ಸಂತೋಷ ವಾಲಿ, ಎಸ್‌.ವೈ.ಪಾಟೀಲ, ಎನ್‌.ಡಿ.ಯರನಾಳೆ, ಧರಬಾರೆ, ಎಸ್‌.ಎಲ್‌.ಕೊಟೆಪ್ಪಗೋಳ, ಡಿ.ಬಿ.ಶ್ರೀನಿವಾಸ, ಎಸ್‌.ಎಲ್‌.ಹರಕೆ, ಮೋಟನ್ನವರ ಸೇರಿದಂತೆ ಮುಂತಾದವರು ಇದ್ದರು. 


ಸುದ್ದಿ ಓದಿ