ರಾಣೆಬೆನ್ನೂರದಲ್ಲಿ ನೂತನ ವಿವಿ ಸ್ಥಾಪನೆಗೆ ಒತ್ತಾಯಿಸಿ, ಮನವಿ
ರಾಣೆಬೆನ್ನೂರು 16: ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿಲ್ಲೆಗೊಂದರಂತೆ ನೂತನ ವಿಶ್ವವಿದ್ಯಾಲಯವು, ಜಿಲ್ಲಾ ಕೇಂದ್ರ ಸ್ಥಾನಕ್ಕೆ ಸೀಮಿತಗೊಳಿಸದೆ, ವಾಣಿಜ್ಯ ನಗರಿ, ರಾಣಿಬೆನ್ನೂರು ತಾಲೂಕಿನಲ್ಲಿ ಅಥವಾ ರಾಣೆಬೆನ್ನೂರು ನಗರದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ, ರವಿವಾರ ಇಲ್ಲಿನ ನಾಗಶಾಂತಿ ಉನ್ನತಿ ಕಾಲೇಜು ಭವನದಲ್ಲಿ ಹೋರಾಟ ಸಮಿತಿಯ 3 ನೇ ಸಭೆ ನಡೆಯಿತು. ಸಭೆಯಲ್ಲಿ ಈಗಾಗಲೇ ತಾಲೂಕ ದಂಡಾಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗಿರುವ, ಹೋರಾಟ ಸಮಿತಿಯ ಮನವಿ ಪ್ರಕ್ರಿಯೆ ಕುರಿತು, ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಮುಂದಿನ ದಿನಮಾನಗಳಲ್ಲಿ, ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಕರ್ನಾಟಕ ಸರ್ಕಾರದ ರಾಜ್ಯಪಾಲರಿಗೆ, ಮತ್ತು ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿಸಿದ ಸಚಿವರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವ ಕುರಿತು, ಚರ್ಚಿಸಿ, ಸದ್ಯದಲ್ಲಿಯೇ, ಬೆಂಗಳೂರಿಗೆ ನಿಯೋಗ ತೆರಳಲು ಸಭೆ ನಿರ್ಧರಿಸಿತು. ಅಲ್ಲದೆ ವಿಶ್ವವಿದ್ಯಾಲಯ ಸ್ಥಾಪನೆ ಕುರಿತಂತೆ ಪ್ರಚಾರ ಸಮಿತಿ ಮತ್ತು ಜಾಲತಾಣ ಸಮಿತಿ ಪದಾಧಿಕಾರಿಗಳನ್ನು ರಚಿಸಲು ಸಭೆ ಸರ್ವಾನುಮತದಿಂದ ನಿರ್ಧರಿಸಲಾಯಿತು. ಸೋಮವಾರ ಸಂಜೆ 5 ಗಂಟೆಗೆ ಕಾಲೇಜು ಭವನದಲ್ಲಿ ಸಭೆ ಸೇರಲು ನಿರ್ಧರಿಸಲಾಯಿತು. ಅಧ್ಯಕ್ಷ ಬಸವರಾಜ ಪಾಟೀಲ್, ಕಾರ್ಯದರ್ಶಿ ಶಿವಪ್ಪ ಗುರಿಕಾರ, ರೈತ ಮುಖಂಡ ರವೀಂದ್ರ ಗೌಡ ಪಾಟೀಲ್, ಜಯ ದೇವಪ್ಪ ಮಠದ, ಭಾರತಿ ಜಂಬಿಗಿ, ರಾಜಣ್ಣ ಮೋಟಗಿ, ಕೆ ಶಿವಲಿಂಗಪ್ಪ, ಎ. ಬಿ.ಪಾಟೀಲ್, ಸಿದ್ದಣ್ಣ ಚಿಕ್ಕಬಿದರಿ,, ಎಸ್ ಜಿ ಮಹಾನುಭಾವಿ ಮಠ, ಬಾಬಣ್ಣ ಐರಣಿಶೆಟ್ರ್ ಭಾರತಿ , ಗೀತಾ ಜಂಬಿಗಿ, ವಿ.ವಿ. ಹರಪನಹಳ್ಳಿ, ಸೇವಂತೆ ಹೋರಾಟ ಸಮಿತಿಯ ಮತ್ತಿತರ ಪದಾಧಿಕಾರಿಗಳು,ಗಣ್ಯರು,ವರ್ತಕರು ನಾಗರಿಕರು ಉಪಸ್ಥಿತರಿದ್ದರು,