ಶಿಗ್ಗಾವ್

ಕಡು ಬಡವರಿಗೆ ದಿನಸಿ ಕೀಟ್ ವಿತರಿಸುವಂತೆ ಮನವಿ

ಕಡು ಬಡವರಿಗೆ ದಿನಸಿ ಕೀಟ್ ವಿತರಿಸುವಂತೆ ಮನವಿ

ಶಿಗ್ಗಾವಿ 25: ಅಸಂಘಟಿತ ವಲಯದ ಕಾರ್ಮಿಕರಿಗೆ (ಕಟ್ಟಡ ಕಾರ್ಮಿಕರು ಸೇರಿದಂತೆ) ಕಡು ಬಡವರಿಗೆ ದಿನಸಿ ಕೀಟ್ ವಿತರಿಸುವಂತೆ ಹಾಗೂ ಈಗಾಗಲೇ ವಿತರಿಸುವಂತಿದ್ದರೆ ತಮ್ಮ ಸಂಘಟನೆಯನ್ನು ಪರಿಗಣಿಸುವಂತೆ ಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆಯ ತಾಲೂಕಾ ಅಧ್ಯಕ್ಷ ಇಮಾಹುಸೇನ್ ಅದಂಬಾಯಿ ಅವರ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ ಅವರಿಗೆ ಮನವಿ ಅರ​‍್ಿಸಲಾಯಿತು. 

ಕೋವಿಡ್‌-19 ಮಹಾಮಾರಿಯ ಹಾವಳಿಯಿಂದಾಗಿ ಲಾಕ್ ಡೌನ್ ಚಾಲ್ತಿಯಲ್ಲಿರುವದರಿಂದ ಅಸಂಘಟಿತ ವಲಯದ ಕಾರ್ಮಿಕರು (ಕಟ್ಟಡ ಕಾರ್ಮಿಕರು) ಸೇರಿದಂತೆ ಹಲವಾರು ನಿರ್ಗತಿಕರು, ಕಡುಬಡವರು, ಕೊಳಚೆ ಪ್ರದೇಶದ ನಿವಾಸಿಗಳು, ಮಡಿವಾಳರು, ಕ್ಷೌರಿಕರು ಕೆಲಸವಿಲ್ಲದೆ ಕಷ್ಟಕರ ಜೀವನ ನಡೆಸುತ್ತಿದ್ದು, ಇವರ ಜೀವನಕ್ಕೆ ಆಸರೆಯಾಗಿ ತಾಲೂಕಾ ಆಡಳಿತದಿಂದಾಗಲಿ ಸರ್ಕಾರದಿಂದಾಗಲಿ ದಿನಸಿ ಕೀಟ್‌ಗಳನ್ನು ವಿತರಿಸಬೇಕೆಂದು ಮತ್ತು ಈ ಕಾರ್ಯದಲ್ಲಿ ತಮ್ಮ ಸಂಘಟನೆಯನ್ನು ಪರಿಗಣಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷ ಜೀಲಾನಿ ಜಂಗ್ಲಿ, ತಾಲೂಕಾ ಕಾರ್ಯಾಧ್ಯಕ್ಷ ವೆಂಕಟೇಶ ಬಂಡಿವಡ್ಡರ, ಮಂಜುನಾಥ ಮಧುರಕರ, ಯಲ್ಲಪ್ಪ ಮಧುರಕರ ಸೇರಿದಂತೆ ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ