ಯರಗಟ್ಟಿ

ಗಣರಾಜ್ಯೋತ್ಸವ ಪೂರ್ವಭಾವಿ ಸಭೆ

ಗಣರಾಜ್ಯೋತ್ಸವ ಪೂರ್ವಭಾವಿ ಸಭೆ

ಯರಗಟ್ಟಿ 24: ಸರಕಾರಿ  ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆಯ ನಿಮಿತ್ತ ಪೂರ್ವಭಾವಿ ಸಭೆ ಜರುಗಿತು.  

ಜ.26 ರಂದು ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಪಟ್ಟಣದ ಶ್ರೀ ಮಠದ ಮೈದಾನದಲ್ಲಿ ಬೆಳಗ್ಗೆ 8-30 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು.  ನಂತರ ಪೊಲೀಸ್, ಎನ್‌ಸಿಸಿ, ಗಹರಕ್ಷಕ ದಳದ ಪಥಸಂಚಲನ, ನಾನಾ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಹಸೀಲ್ದಾರ್ ಎಮ್‌. ಎನ್‌. ಮಠದ ತಿಳಿಸಿದರು. 

ಧ್ವಜಾರೋಹಣದ ನಿಮಿತ್ತ ಶ್ರೀಮಠಜ ಮೈದಾನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿಬೇಕು. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಯಥೇಚ್ಚವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಮಹಾತ್ಮಾಗಾಂಧಿಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಈ ಕುರಿತಂತೆ ಸುತ್ತೋಲೆ ಹೊರಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಭಾಸ್ಕರ ಹಿರೇಮೆತ್ರಿ ಆಗ್ರಹಿಸಿದರು. 

ಈ ವೇಳೆ ಪ. ಪಂ. ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ,  ಪಿಎಸ್‌ಐ ಆಯ್‌. ಎಂ. ಹಿರೇಗೌಡರ, ವೈದ್ಯಾಧಿಕಾರಿ ಡಾ. ಬಿ. ಎಸ್‌. ಬೆಳ್ಳೂರು, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಮಾಜಿ ಪ. ಪಂ. ಸದಸ್ಯ ವಿಶಾಲಗೌಡ ಪಾಟೀಲ, ಪ್ರೋ: ಆರ್‌. ಎಸ್‌. ಮರಿಗೌಡ್ರ, ಶಿಕ್ಷಕರಾದ ಬಿ. ಎಸ್‌. ಆಲದಕಟ್ಟಿ, ಎ. ಎ. ಮಕ್ತುಮನ್ನವರ, ಹೆಸ್ಕಾಂ ಎಸ್‌ಓ ಎಂ. ಸಿ. ಯರಗಟ್ಟಿ, ಸಿ ಆರ್ ಸಿ ವಿ. ಎಸ್‌. ಬಡಿಗೇರ, ಕಾರ್ಮಿಕ ಇಲಾಖೆ ಅಧಿಕಾರಿ ಮಹೇಶ ಬಾಗೋಜಿ, ಮಂಜುನಾಥ ತಡಸಲೂರ, ಬಾಬು ಚನ್ನಮೇತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

  

ಸುದ್ದಿ ಓದಿ